ರಾಣಿಬೆನ್ನೂರು: ಕುರ್ಚಿಗಾಗಿ ಇಬ್ಬರು ಶಿಕ್ಷಕರ ಕಾದಾಟ
ರಾಣಿಬೆನ್ನೂರು: ರಾಜ್ಯ ಶಿಕ್ಷಣ ಇಲಾಖೆ ಆದೇಶದ ಮೇರೆಗೆ ರಾಣಿಬೆನ್ನೂರು ತಾಲೂಕು ಲೋಕ ಶಿಕ್ಷಣ ಸಮಿತಿ ಕಾರ್ಯಭಾರ ನಿರ್ವಹಣೆಗಾಗಿ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಸರ್ಕಾರಿ ಶಾಲೆಯ ಒಬ್ಬ ಶಿಕ್ಷಕರನ್ನು ನೇವಿಸುವ ಬದಲು, ಇಬ್ಬರು ಶಿಕ್ಷಕರಿಗೆ ಆದೇಶ ನೀಡಿದ್ದು, ಅವರಿಬ್ಬರೂ ಕುರ್ಚಿಗಾಗಿ ತೆರೆಮರೆಯಲ್ಲಿ ಕಸರತ್ತು ನಡೆಸಿದ್ದಾರೆ.
ಹಿಂದಿನ ಸಾಕ್ಷರ ಸಂಯೋಜಕ ಎನ್.ಎಚ್. ಕರೇಗೌಡ್ರ ಪ್ರೇರಕ-ಪ್ರೇರಕಿಯರ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ತಾಲೂಕಿನ ಉಕ್ಕುಂದ ಗ್ರಾಮ ಪಂಚಾಯಿತಿ ಸಂಯೋಜಕ ನಾಗನಗೌಡ ಪಾಟೀಲ ಪ್ರತಿಭಟಿಸಿ, ಅರ್ಜಿ ಸಲ್ಲಿಸಿದ್ದರು.
ಪ್ರತಿಭಟನೆ ಮೂಲಕ 70 ಗ್ರಾಪಂ ಪ್ರೇರಕರು ಸಲ್ಲಿಸಿರುವ ಅರ್ಜಿ ಪರಿಶೀಲನೆ ನಡೆಸಿದ್ದ ತಾಪಂ ಇಒ, ಶಿಕ್ಷಕ ಎನ್.ಎಚ್. ಕರೇಗೌಡರನ್ನು ಬದಲಾಯಿಸಿ ಬೇರೆಯವರನ್ನು ನೇಮಿಸಬೇಕೆಂದು ಜಿಪಂ ಸಿಇಒ ಮತ್ತು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಜಿಪಂ ಅಧಿಕಾರಿಗಳು ಎನ್.ಎಚ್. ಕರೇಗೌಡರನ್ನು ಬದಲಾಯಿಸಿ, ತಾಲೂಕಿನ ವೈ.ಟಿ. ಮೆಡ್ಲೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆ ಶಿಕ್ಷಕ ರಾಮಣ್ಣ ಹೊಂಬರಡಿಯವರನ್ನು ನೇಮಿಸಿದ್ದರು. ಆದೇಶದಂತೆ ಶಿಕ್ಷಕ ಆರ್.ಡಿ. ಹೊಂಬರಡಿ ಜೂ. 9ರಂದು ಮಧ್ಯಾಹ್ನ 2 ಕ್ಕೆ ಕರ್ತವ್ಯಕ್ಕೆ ಹಾಜರಾಗಿದ್ದರು. ಇದರಿಂದ ಎನ್.ಎಚ್. ಕರೇಗೌಡರ ಜೂ. 10ರಂದು ಮಾಕನೂರು ಸರ್ಕಾರಿ ಶಾಲೆಗೆ ಹಾಜರಾಗಿ 15 ದಿನ ಕಾರ್ಯನಿರ್ವಹಿಸಿದ್ದರು. ಮತ್ತೆ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಎನ್.ಎಚ್. ಕರೇಗೌಡರಗೆ ತಾಲೂಕು ಸಾಕ್ಷರ ಸಂಯೋಜಕರಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ಆದೇಶಿಸಿದ್ದಾರೆ. ಇದರಿಂದ ಇಬ್ಬರು ಶಿಕ್ಷಕರು ತಾಲೂಕು ಸಾಕ್ಷರ ಸಂಯೋಜಕರ ಹುದ್ದೆಗಾಗಿ ಕಾದಾಟ ನಡೆಸುವ ವಾತಾವರಣ ನಿರ್ಮಾಣವಾಗಿದೆ. ಈ ಇಬ್ಬರು ಶಿಕ್ಷಕರ ಕಾದಾಟ ಮುಂದೆ ಯಾವ ಸ್ಪರೂಪ ಪಡೆಯಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

