ಹಾವೇರಿ

ಗ್ರಾಪಂ ಉಪಚುನಾವಣೆ: ವೇಳಾಪಟ್ಟಿ

Published On :

ಹಾವೇರಿ: ರಾಜ್ಯ ಚುನಾವಣಾ ಆಯೋಗವು ರಾಜ್ಯದಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ ಆಕಸ್ಮಿಕವಾಗಿ ತೆರವಾಗಿರುವ ಹಾಗೂ ಆಯ್ಕೆಯಾಗದೇ ಖಾಲಿ ಇರುವ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಸಲು ಪಂಚಾಯತ ರಾಜ್ ನಿಯಮಗಳನ್ವಯ ಚುನಾವಣಾ ವೇಳಾ ಪಟ್ಟಿ ಪ್ರಕಟಿಸಿದೆ.
ಚುನಾವಣಾ ಆಯೋಗದ ಆದೇಶದಂತೆ ಜು. 17ರಂದು ಚುನಾವಣಾ ಅಧಿಸೂಚನೆ ಹೊರಬೀಳಲಿದೆ. ನಾಮಪತ್ರ ಸಲ್ಲಿಸಲು ಜು. 24 ಕೊನೆಯ ದಿನ. ಜು.25ರಂದು ನಾಮಪತ್ರಗಳ ಪರಿಶೀಲನೆ. ಉಮೇದುವಾರಿಕೆ ಹಿಂಪಡೆಯಲು ಜು. 27 ಕೊನೆಯದಿನ. ಆಗಸ್ಟ್ 4ರಂದು ಬೆಳಗ್ಗೆ 7ರಿಂದ ಸಾಯಂಕಾಲ 5ರ ವರೆಗೆ ಮತದಾನ ಜರುಗಲಿದೆ. ಅವಶ್ಯವಿದ್ದಲ್ಲಿ ಆ. 6ರಂದು ಮರುಮತದಾನ ನಡೆಸಲಾಗುವುದು. ಆ.7ರಂದು ಬೆಳಗ್ಗೆ 8ರಿಂದ ಜಿಲ್ಲೆಯ ಆಯಾ ತಾಲೂಕಾ ಕೇಂದ್ರ ಸ್ಥಳಗಳಲ್ಲಿ ಮತ ಎಣಿಕೆ ಕಾರ್ಯ ಜರುಗಲಿದೆ ಎಂದು ಚುನಾವಣಾ ಆಯೋಗದ ತಿಳಿಸಿದೆ. ಗ್ರಾಮ ಪಂಚಾಯಿತಿಯ ಚುನಾವಣೆ ನಡೆಯುವ ಕ್ಷೇತ್ರ ವ್ಯಾಪ್ತಿಯಲ್ಲಿ ಮಾತ್ರ ಚುನಾವಣಾ ನೀತಿ ಸಂಹಿತೆಯು ಜು.17ರಿಂದ ಆ.7ರ ವರೆಗೆ ಜಾರಿಯಲ್ಲಿರುತ್ತದೆ. ಈ ನೀತಿ ಸಂಹಿತೆಯು ಬರ ಕಾಮಗಾರಿ, ಪ್ರವಾಹ ಇತ್ಯಾದಿ ಪ್ರಕೃತಿ ವಿಕೋಪ ಕಾರ್ಯಕ್ರಮಗಳಿಗೆ ಅನ್ವಯಿಸುವುದಿಲ್ಲವೆಂದು ಆಯೋಗವು ಸ್ಪಷ್ಟಪಡಿಸಿದೆ.
ಗ್ರಾಪಂ ಸ್ಥಾನಗಳು: ಹಾವೇರಿ ತಾಲೂಕಿನ ದೇವಿಹೊಸೂರು, ಕರ್ಜಗಿ, ಬಸಾಪುರ, ರಾಣಿಬೆನ್ನೂರು ತಾಲೂಕಿನ ಮೆಡ್ಲೇರಿ, ಹಿರೇಕೆರೂರು ತಾಲೂಕಿನ ಹಳ್ಳೂರು, ಶಿಗ್ಗಾಂವಿ ತಾಲೂಕು ತಡಸ ಹಾಗೂ ಹಿರೇಮಲ್ಲೂರು, ಹಾನಗಲ್ಲ ತಾಲೂಕಿನ ಹುಲ್ಲತ್ತಿ, ಕೆಲವರಕೊಪ್ಪ ಹಾಗೂ ಹಿರೇಹುಲ್ಲಾಳ ಗ್ರಾಮ ಪಂಚಾಯಿತಿಗಳ ತಲಾ ಒಂದೊಂದು ಸ್ಥಾನಗಳಿಗೆ ಚುನಾವಣೆ ಜರುಗಲಿದೆ.
ಅಧಿಕಾರಿಗಳ ನೇಮಕ: ವಿವಿಧ ಕಾರಣಗಳಿಂದ ತೆರವಾಗಿರುವ ಗ್ರಾಮ ಪಂಚಾಯಿತಿಗಳ ಸದಸ್ಯ ಸ್ಥಾನಗಳ ಉಪ ಚುನಾವಣೆ ನಡೆಸಲು ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಿ ಜಿಲ್ಲಾಧಿಕಾರಿ ಪಾಂಡುರಂಗ ನಾಯಕ ಆದೇಶ ಹೊರಡಿಸಿದ್ದಾರೆ. ಹಾವೇರಿ ತಾಲೂಕಿನ ದೇವಿಹೋಸೂರ ಗ್ರಾಮ ಪಂಚಾಯಿತಿಗೆ ಚುನಾವಣಾಧಿಕಾರಿಯಾಗಿ ಜಲಾನಯನ ಇಲಾಖೆಯ ಸಹಾಯಕ ನಿರ್ದೇಶಕ ಎನ್.ವಿ. ಪ್ರಕಾಶ(ಮೊ. 9448868772), ಸಹಾಯಕ ಚುನಾವಣಾಧಿಕಾರಿಯಾಗಿ ದೇವಿಹೊಸೂರ ಉರ್ದು ಪ್ರೌಢಶಾಲೆಯ ಶಿಕ್ಷಕ ಐ.ಬಿ. ಡಾಂಗೆ, ಕರ್ಜಗಿ ಗ್ರಾಪಂಗೆ ಕರ್ಜಗಿ ಪಿ.ಯು. ಕಾಲೇಜ ಉಪನ್ಯಾಸಕ ರಮೇಶ ಹಾವೇರಿ (ಮೊ.9686272489), ಸಹಾಯಕ ಚುನಾವಣಾಧಿಕಾರಿಯಾಗಿ ಕರ್ಜಗಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ನಾಗರಾಜ ನಡುವಿನಮಠ, ಬಸಾಪುರ ಗ್ರಾಪಂಗೆ ಡಿಡಿಪಿಐ ಕಚೇರಿಯ ಸಂಯೋಜಕ ಎ.ವೈ. ಮುಲ್ಲಾ(ಮೊ.9480099796) ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಬಸಾಪುರ ಸರ್ಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯ ಜೆ.ಬಿ. ವುಲ್ಲಾ ಕೆ. ಅವರನ್ನು ನೇಮಿಸಲಾಗಿದೆ.
ರಾಣಿಬೆನ್ನೂರು ತಾಲೂಕಿನ ಮೆಡ್ಲೇರಿ ಗ್ರಾಪಂಗೆ ಚುನಾವಣಾಧಿಕಾರಿಯಾಗಿ ದೇವರಗುಡ್ಡ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಎಸ್.ಎಂ. ಬಾಗಾಧಿ(ಮೊ.9986471646), ಸಹಾಯಕ ಚುನಾವಣಾಧಿಕಾರಿಯಾಗಿ ಜೋಯಿಸರಹರಳಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಎ.ಎಲ್. ಮತ್ತೂರ ಹಾಗೂ ಹಿರೇಕೆರೂರು ತಾಲೂಕಿನ ಹಳ್ಳೂರು ಗ್ರಾಪಂ ಚುನಾವಣಾಧಿಕಾರಿಯಾಗಿ ಹಿರೇಕಬ್ಬಾರ ಸರ್ಕಾರಿ ಪ್ರೌಢಶಾಲೆ ಸಹ ಶಿಕ್ಷಕ ಉಮಾಪತಿ(ಮೊ.8722835456) ಸಹಾಯಕ ಚುನಾವಣಾಧಿಕಾರಿಯಾಗಿ ಹಿರೇಕೆರೂರು ಸಿಆರ್‌ಪಿ ಕಚೇರಿಯ ಕ್ಷೇತ್ರ ಸಂಪನ್ಮೂಲ ಅಧಿಕಾರಿ ಆರ್.ಎಚ್. ಹಂಚಿಮನಿ ಅವರನ್ನು ನಿಯೋಜಿಸಿದೆ.
ಶಿಗ್ಗಾಂವಿ ತಾಲೂಕು ತಡಸ ಗ್ರಾಪಂ ಚುನಾವಣಾಧಿಕಾರಿಯಾಗಿ ಶಿಗ್ಗಾಂವಿ ಬಿಆರ್‌ಸಿ ಕಚೇರಿಯ ಕ್ಷೇತ್ರ ಸಂಪನ್ಮೂಲ ಅಧಿಕಾರಿ ಎಂ.ಎಫ್. ಬಾರಕಿ(ಮೊ.9480655259) ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಶಿಗ್ಗಾಂವಿ ಸಿಡಿಪಿಓ ಕಚೇರಿಯ ಎನ್.ಎಂ. ಅರ್ಕಾಚಾರಿ, ಹಿರೇಮಲ್ಲರು ಗ್ರಾಪಂ ಚುನಾವಣಾಧಿಕಾರಿಯಾಗಿ ಶಿಗ್ಗಾಂವಿಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಐ.ಆರ್. ಬಳ್ಳಾರಿ(ಮೊ. 9448416036) ಮತ್ತು ಸಹಾಯಕ ಚುನಾವಣಾಧಿಕಾರಿಯಾಗಿ ಶಿಗ್ಗಾಂವಿ ಸಿಆರ್‌ಸಿಯ ಬಿ.ಆರ್. ಅಂಗಡಿ ಅವರನ್ನು ನೇಮಿಸಿದೆ.
ಹಾನಗಲ್ಲ ತಾಲೂಕು ಹುಲ್ಲತ್ತಿ ಗ್ರಾಪಂ ಚುನಾವಣಾಧಿಕಾರಿಯಾಗಿ ಕಂಚಿನೆಗಳೂರು ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಉಮೇಶ (ಮೊ.9481484030) ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಹಾನಗಲ್ಲ ಬಿಇಓ ಕಚೇರಿಯ ಮ್ಯಾನೇಜರ್ ಎ.ಎನ್. ಕುಲಕರ್ಣಿ, ಕೆಲವರಕೊಪ್ಪ ಗ್ರಾಪಂ ಚುನಾವಣಾಧಿಕಾರಿಯಾಗಿ ಬೊಮ್ಮನಹಳ್ಳಿ ಸಹಾಯಕ ಕೃಷಿ ಅಧಿಕಾರಿ ಶ್ರೀಧರ ದಾಸರ(7259005503) ಸಹಾಯಕ ಚುನಾವಣಾಧಿಕಾರಿಯಾಗಿ ಹಾನಗಲ್ಲ ತೋಟಗಾರಿಕೆ ಇಲಾಖೆಯ ಸಹಾಯಕ ತೋಟಗಾರಿಕೆ ಅಧಿಕಾರಿ ಎಸ್.ಎಲ್. ಕುಲಕರ್ಣಿ ಹಾಗೂ ಹಿರೇಹುಲ್ಲಾಳ ಗ್ರಾಪಂ ಚುನಾವಣಾಧಿಕಾರಿಯಾಗಿ ಕೊಪ್ಪರಸಿಕೊಪ್ಪ ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಬಾಲರಾಜ ಎಸ್.(ಮೊ. 9964556028) ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಹಾನಗಲ್ಲ ಸಮಾಜ ಕಲ್ಯಾಣ ಇಲಾಖೆ ಮ್ಯಾನೇಜರ ಪಿ.ಎಂ. ಮಾಳದರ ಅವರನ್ನು ನೇಮಕ ಮಾಡಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.