ರಾಣಿಬೆನ್ನೂರು ತಾಪಂ ಅಧ್ಯಕ್ಷರಾಗಿ ಹೂವ್ವಕ್ಕ, ಉಪಾಧ್ಯಕ್ಷರಾಗಿ ಗಣೇಶಪ್ಪ
ರಾಣಿಬೆನ್ನೂರು: ರಾಣಿಬೆನ್ನೂರು ತಾಲೂಕು ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗಾಗಿ ತಾಪಂ ಸಭಾ ಭವನದಲ್ಲಿ ಸೋಮವಾರ ನಡೆದ ಚುನಾವಣೆಯಲ್ಲಿ ಬಿಜೆಪಿಯ ಹೂವ್ವಕ್ಕ ಎನ್. ನಾಗೂರು ಅಧ್ಯಕ್ಷರಾಗಿ ಹಾಗೂ ಕಾಂಗ್ರೆಸ್ನ ಗಣೇಶಪ್ಪ ಬಸಪ್ಪ ಬಿಲ್ಲಾಳ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
2 ವರ್ಷಗಳ ಹಿಂದೆ ತಾಲೂಕು ಪಂಚಾಯಿತಿ 22 ಸ್ಥಾನಗಳಿಗಾಗಿ ನಡೆದ ಚುನಾವಣೆಯಲ್ಲಿ, ಕಾಂಗ್ರೆಸ್ 8, ಬಿಜೆಪಿ 14 ಸ್ಥಾನಗಳಲ್ಲಿ ಜಯಗಳಿಸಿವೆ. ಈವರೆಗೆ ಬಿಜೆಪಿ ಆಡಳಿತ ನಡೆಸಿದ್ದರಿಂದ ಕಾಂಗ್ರೆಸ್ ಎರಡುವರೆ ವರ್ಷ ವಿರೋಧ ಪಕ್ಷದಲ್ಲಿ ಕುಳಿತಿದೆ. 3 ತಿಂಗಳ ಹಿಂದೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ತಾಪಂಗೆ ಆಯ್ಕೆಯಾಗಿದ್ದ 14 ಸದಸ್ಯರಲ್ಲಿ ನಾಲ್ವರು ಬಿಜೆಪಿಯಲ್ಲಿ, 10 ಜನರು ಕೆಜೆಪಿಯಲ್ಲಿ ಗುರುತಿಸಿಕೊಂಡಿದ್ದರು. ವಿಧಾನಸಭಾ ಚುನಾವಣೆಯ ಸಮಯದಲ್ಲಿ ಬಿಜೆಪಿಯು ಬಿಜೆಪಿ-ಕೆಜೆಪಿ ಎಂದು 2 ಹೋಳಾದ ಕಾರಣ ಬಿಜೆಪಿಯಲ್ಲಿ ಗುರುತಿಸಿಕೊಂಡ ತಾಪಂ ಸದಸ್ಯರಾದ ಪೂರ್ಣಿಮಾ ಕುರುವತ್ತಿ, ರತ್ನಮ್ಮ ತೆಂಬದ, ಗೀತಾ ಹಿತ್ತಲಮನಿ, ಚನ್ನಬಸಮ್ಮ ಗೌಡ್ರ ಅವರು ಪಕ್ಷದ ಮುಖಂಡರ ಆದೇಶದ ಮೇರೆಗೆ ಹಾಗೂ ತಾಲೂಕಿನ ಅಭಿವೃದ್ಧಿ ಹಿತದೃಷ್ಟಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿ, ಜು. 2ರಂದು ತಾಪಂ ಅಧ್ಯಕ್ಷ-ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದರಿಂದ ಈ ಸ್ಥಾನಗಳು ಖಾಲಿಯಾದವು. ಹೀಗಾಗಿ ಈ ಸ್ಥಾನಗಳಿಗೆ ಉಪ ವಿಭಾಗಾಧಿಕಾರಿಗಳು ಸೋಮವಾರ ಚುನಾವಣೆ ನಡೆಸಿದರು. ಸೋಮವಾರ ಬೆಳಗ್ಗೆ 10ರಿಂದ 1ರ ವರೆಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಹೂವ್ವಕ್ಕ ಎನ್ ನಾಗೂರು ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ನ ಗಣೇಶಪ್ಪ ಬಸಪ್ಪ ಬಿಲ್ಲಾಳ ಇವರನ್ನು ಹೊರತುಪಡಿಸಿ ಯಾರು ನಾಮಪತ್ರ ಸಲ್ಲಿಸಿಲ್ಲ. ಈ ಕಾರಣದಿಂದ ಹೂವ್ವಕ್ಕ ನಾಗೂರು ತಾಪಂ ಅಧ್ಯಕ್ಷರೆಂದು ಹಾಗೂ ಕಾಂಗ್ರೆಸ್ನ ಗಣೇಶಪ್ಪ ಬಸಪ್ಪ ಬಿಲ್ಲಾಳ ಅವರು ಉಪಾಧ್ಯಕ್ಷರೆಂದು ಚುನಾವಣೆ ನಡೆಸಿದ ಉಪ ವಿಭಾಗಾಧಿಕಾರಿ ಚನ್ನಬಸಪ್ಪನವರು ಘೋಷಣೆ ಮಾಡಿದರು.
ತಾಪಂ ಕಾರ್ಯನಿರ್ವಣಾಧಿಕಾರಿ ಡಾ. ನಾಗನಗೌಡರಡ್ಡಿ, ಕಾಂಗ್ರೆಸ್ ಸದಸ್ಯರಾದ ಬಸನಗೌಡ ಪಾಟೀಲ, ಹಾಲಪ್ಪ ಲಮಾಣಿ, ಸೋಮಪ್ಪ ಲಮಾಣಿ, ವಿಜಯಲಕ್ಷ್ಮಿ ಮಾಳಗಿ, ಮಮತಾ ಹಾದಿಮನಿ, ಶಿವಕ್ಕ ಡೊಳ್ಳಿನ, ನಿಂಗಮ್ಮ ಸೂರ್ವೆ, ಬಿಜೆಪಿ ಸದಸ್ಯರಾದ ಪೂರ್ಣಿಮಾ ಕುರುವತ್ತಿ, ರತ್ನಮ್ಮ ತೆಂಬದ, ಗೀತಾ ಹಿತ್ತಲಮನಿ, ಚನ್ನಬಸಮ್ಮ ಗೌಡ್ರ ಇದ್ದರು.
ತಾಪಂ ಅಧ್ಯಕ್ಷರಾಗಿ ಆಯ್ಕೆಯಾದ ಹೂವ್ವಕ್ಕ, ಉಪಾಧ್ಯಕ್ಷರಾಗಿ ಆಯ್ಕೆಯಾದ ಗಣೇಶಪ್ಪ ಅವರನ್ನು ಬಿಜೆಪಿಯ ಎಂ.ಎಂ. ಕುಮಾರ, ಸಿದ್ದನಗೌಡ ಪಾಟೀಲ, ಕಿರಣ ಅಂಗಡಿ, ಕಾಂಗ್ರೆಸ್ ಮುಖಂಡ ಬಸವರಾಜಪ್ಪ ಸವಣೂರು, ರವೀಂದ್ರಗೌಡ ಪಾಟೀಲ,ನೀಲಕಂಠಪ್ಪ ಕುಸಗೂರು ಅಭಿನಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

