ನೌಕರರ ಚುನಾವಣೆ: ಅವಿರೋಧ ಆಯ್ಕೆ
ಹಾನಗಲ್ಲ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಚುನಾವಣೆಯಲ್ಲಿ ಶಿಕ್ಷಣ, ಲೋಕೋಪಯೋಗಿ ಮತ್ತು ನೀರಾವರಿ, ಎಂಜಿನಿಯರಿಂಗ್ ಇಲಾಖೆಗಳಲ್ಲಿ ಚುನಾವಣೆ ನಡೆಯುತ್ತಿದ್ದು, ಉಳಿದ ಇಲಾಖೆಗಳಲ್ಲಿ ಅವಿರೋಧ ಆಯ್ಕೆ ನಡೆದಿದೆ.ತಾಲೂಕಿನ ಸರ್ಕಾರಿ ನೌಕರರಲ್ಲಿ 1,403 ನೌಕರರು ವಿವಿಧ ಇಲಾಖೆಗಳಿಂದ ಸದಸ್ಯತ್ವ ಪಡೆದಿದ್ದರು. ಕಂದಾಯ ಇಲಾಖೆಯ ಎಂ.ಎಲ್. ಹಿರೆಬಿದರಿ, ಸಿ.ಎಸ್. ಜಾಧವ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತ ಇಲಾಖೆಯ ಎಸ್. ಆನಂದ, ಅಬಕಾರಿ ಮತ್ತು ಕಾರ್ಮಿಕ ಇಲಾಖೆಯ ಮಹದೇವಪ್ಪ ಕಟೆಗಣ್ಣನವರ, ಆರೋಗ್ಯ ಇಲಾಖೆಯ ಡಿ. ಚಂದ್ರಶೇಖರ, ಬಸಪ್ಪ ಸುಣಗಾರ, ಸಂಜೀವ ಕುಲಕರ್ಣಿ, ಸಂತೋಷ ಲೊಂಡೆ, ನ್ಯಾಯಾಂಗ ಇಲಾಖೆಯ ಮಹದೇವಪ್ಪ ತಳಗೇರಿ ಅವಿರೋಧ ಆಯ್ಕೆಯಾಗಿದ್ದಾರೆ. ತಾಲೂಕಿನ ಒಟ್ಟು 1403 ಮತದಾರರಲ್ಲಿ ಲೋಕೋಪಯೋಗಿ ಹಾಗೂ ಎಂಜಿನಿಯರಿಂಗ್ ವಿಭಾಗದ 23 ಸದಸ್ಯರು, ಪ್ರಾಥಮಿಕ ಶಿಕ್ಷಣದ 916, ಪ್ರೌಢ ಶಿಕ್ಷಣದ 154, ಪದವಿಪೂರ್ವ ಕಾಲೇಜಿನ 20, ಖಜಾನೆ ಇಲಾಖೆಯ 4 ಸದಸ್ಯರು ಮತದಾನ ಮಾಡಬೇಕಾಗಿದೆ. ಜು. 22ರಂದು ಮಧ್ಯಾಹ್ನ 11ರಿಂದ 4 ಗಂಟೆ ವರೆಗೆ ಚುನಾವಣೆ ನಡೆಯಲಿದೆ. ಮತದಾನದ ಸಂದರ್ಭ ಮತದಾರರು ಭಾವಚಿತ್ರ ಹೊಂದಿದ ಅಧಿಕೃತ ಗುರುತಿನ ಚೀಟಿ ತರುವುದು ಕಡ್ಡಾಯವಾಗಿದೆ. ತಹಸೀಲ್ದಾರ್ ಕಚೇರಿಯಲ್ಲಿ ಮತದಾನ ಹಾಗೂ ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾಧಿಕಾರಿ ಡಿ.ಜಿ. ಭಟ್ ಮಾಹಿತಿ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

