ಹಾವೇರಿ

ನೇತಾರರ ಹೆಸರಲ್ಲಿ ಘಟಕ ಆರಂಭಿಸಿ

Published On :

ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಜು. 18
ಭಾರತ ಸೇವಾದಳ ಅಳವಡಿಸಿ ಕಡ್ಡಾಯವಾಗಿ ರಾಷ್ಟ್ರೀಯ ನೇತಾರರ ಹೆಸರಲ್ಲಿ ಪ್ರತಿ ಶಾಲೆಯಲ್ಲಿ ಘಟಕ ಆರಂಭಿಸಿ, ಮಕ್ಕಳಿಗೆ ಶಿಸ್ತು ದೇಶಪ್ರೇಮ ರಾಷ್ಟ್ರಗೀತೆ ರಾಷ್ಟ್ರಲಾಂಛನದ ಸಮಗ್ರವಾಗಿ ಹೇಳಬೇಕು ಎಂದು ದೈಹಿಕ ಶಿಕ್ಷಣಾಧಿಕಾರಿ ಬಿ.ಎಸ್. ಪಟ್ಟಣಶೆಟ್ಟರ ಹೇಳಿದರು.
ಪಟ್ಟಣದ ನಳಂದ ಪ್ರೌಢ ಶಾಲೆಯಲ್ಲಿ ಜರುಗಿದ ಭಾರತ ಸೇವಾದಳ ತಾಲೂಕು ಘಟಕ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಭಾರತ ಸೇವಾದಳ ಶಿಕ್ಷಕರ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಭಾರತ ಸೇವಾದಳ ಕಾರ್ಯಚಟುವಟಿಕೆ ಹೆಚ್ಚಿಸಿ ಪ್ರತಿಯೊಂದು ಶಾಲೆಯಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಜಿಲ್ಲಾ ಸೇವಾದಳ ಅಧ್ಯಕ್ಷ ಕೆ.ಎಸ್. ಪುರದ ಮಾತನಾಡಿ, ಮೊದಲು ಸೇವಾದಳ ಶಿಸ್ತನ್ನು ಅಳವಡಿಸಿಕೊಂಡು ಮಕ್ಕಳಿಗೆ ಶಿಸ್ತಿನ ಬಗ್ಗೆ ತಿಳಿಸಬೇಕೆಂದು ಎಂದರು.
ಎಂ.ಬಿ. ಹಳೇಮನಿ ಅಧ್ಯಕ್ಷತೆ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸದಸ್ಯ ಪ್ರಕಾಶ ಪಿ.ಗೋಣಿ, ಸೇವಾದಳ ಹುಟ್ಟು ಬೆಳವಣಿಗೆ ಬಗ್ಗೆ ತಿಳಿಸಿದರು. ಸರ್ಕಾರಿ ಪ್ರೌಢ ಶಾಲಾ ಶಿಕ್ಷಕರ ಸಂಘದ ಎಲ್.ಎಸ್. ಲಮಾಣಿ, ಚರಂತಿಮಠ ಶೇತಸನದಿ ಹಾಜರಿದ್ದರು. ವಿ.ಎಂ. ನರೇಗಲ್ ಸ್ವಾಗತಿಸಿದರು. ಎಸ್.ಎಫ್. ಮಸಳೆ ಕಾರ್ಯಕ್ರಮ ನಿರೂಪಿಸಿದರು. ಬಿ.ಕೆ. ಹೊಸಪೇಟೆ ವಂದಿಸಿದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.