ಹಾವೇರಿ

ನಾಳೆ ಮುತ್ತು ಬಂದಿದೆ ಕೇರಿಗೆ ವಿಶೇಷ ಕಾರ್ಯಕ್ರಮ

Published On :

ರಾಣಿಬೆನ್ನೂರು: ತಾಲೂಕಿನ ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಕನಕದಾಸರ ಜೀವನ ಚರಿತ್ರೆ ಮತ್ತು ಇತಿಹಾಸವನ್ನು ಪರಿಚಯಿಸುವುದಕ್ಕಾಗಿ ನಗರದ ಹಲಗೇರಿ ರಸ್ತೆಯಲ್ಲಿರುವ ಬಿಎಜೆಎಸ್‌ಎಸ್ ಮಹಿಳಾ ಮಹಾವಿದ್ಯಾಲಯದಲ್ಲಿ ಕನಕದಾಸ ಅಧ್ಯಯನ ಕೇಂದ್ರ ಬೆಂಗಳೂರು ಇವರು ಜು. 20ರಂದು ಬೆಳಗ್ಗೆ 10.30ಕ್ಕೆ 'ಮುತ್ತು ಬಂದಿದೆ ಕೇರಿಗೆ' ಎಂಬ ವಿಶೇಷ ಕಾರ್ಯಕ್ರಮವನ್ನು ಏರ್ಪಡಿಸಿದ್ದಾರೆ.
ಕಾರ್ಯಕ್ರಮದ ಕುರಿತು ವಿದ್ವಾಂಸ ಡಾ೤ ಜಗನ್ನಾಥ ದೇವಣ್ಣನವರ ವಿಶೇಷ ಉಪನ್ಯಾಸ ನೀಡುವರು. ಜನಪದ ಹಾಗೂ ದೊಡ್ಡಾಟ ಕಲಾವಿದರ ತಂಡದ ಮುಖ್ಯಸ್ಥ ಬಸವರಾಜ ಶಿಗ್ಗಾಂವಿ ತಂಡದವರಿಂದ, ಕನಕದಾಸರ ಕುರಿತು ವಿಶೇಷ ಕಿರ್ತನೆಗಳನ್ನು ನಡೆಸಿಕೊಡುವರು. ಕಾರಣ ತಾಲೂಕಿನ ಸಂಗಿತಾಸಕ್ತರು ಕನಕದಾಸರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕೆಂದು ಪ್ರಾಚಾರ್ಯ ಡಾ೤ ಆರ್.ಎಂ. ಕುಬೇರಪ್ಪ ಹಾಗೂ ಸಹ ಪ್ರಾಧ್ಯಾಪಕ ಎನ್.ಕೆ. ರಾಮಚಂದ್ರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.