ಹಾವೇರಿ

ರಕ್ತದಾನಿಗಳ ಸಂಖ್ಯೆ ಗಣನೀಯ ಇಳಿಕೆ: ಡಾ೤ ಮುರಳೀಧರ ವಿಷಾದ

Published On :

ಕನ್ನಡಪ್ರಭ ವಾರ್ತೆ, ಹಾವೇರಿ, ಜು. 19
ಮನುಷ್ಯ ಬದುಕಲು ನೀರು ಎಷ್ಟು ಅವಶ್ಯವೋ, ರಕ್ತದ ಅವಶ್ಯಕತೆಯು ಅಷ್ಟೇ ಇದೆ. ಇಂದಿನ ಮಾನವ ಸಮಾಜಕ್ಕೆ ರಕ್ತದ ಅವಶ್ಯಕತೆ ಅಧಿಕವಾಗಿದೆ. ಆದರೆ, ರಕ್ತ ನೀಡುವವರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ ಎಂದು ಡಾ೤ ಮುರಳಿಧರ ಎನ್. ವಿಷಾದ ವ್ಯಕ್ತಪಡಿಸಿದರು.
ಎನ್‌ಎಸ್‌ಎಸ್ ಘಟಕಗಳು ಹಾಗೂ ಜಿಲ್ಲಾ ಸಾರ್ವಜನಿಕ ಆಸ್ಪತ್ರೆ ಆಶ್ರಯದಲ್ಲಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಬರುವ ದಿನಗಳಲ್ಲಿ ಇದೇ ಪರಸ್ಥಿತಿ ಮುಂದುವರಿದಲ್ಲಿ ರಕ್ತದ ಕೊರತೆಯಿಂದ ಸಾಯುವವರ ಸಂಖ್ಯೆ ಹೆಚ್ಚಾಗುವಲ್ಲಿ ಅನುಮಾನವಿಲ್ಲ. ಯುವಜನತೆ ಎಚ್ಚೆತ್ತುಕೊಂಡು ರಕ್ತದಾನ ಮಾಡಲು ಮುಂದಾಗಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ೤ ಜೆ.ಸಿ. ಹಾದಿಮನಿ ಮಾತನಾಡಿ,  ರಕ್ತದಾನ ಮಹಾದಾನ. ಜೀವನದಲ್ಲಿ ನಾವು ಮಾಡುವ ಒಳ್ಳೆಯ ಕೆಲಸಗಳಲ್ಲಿ ಇದು ಮೊದಲನೆಯದಾಗಿದೆ. ಯುವ ಜನತೆ ಹಾಗೂ ವಿದ್ಯಾರ್ಥಿಗಳು ಸ್ವ-ಇಚ್ಛೆಯಿಂದ ರಕ್ತದಾನ ಮಾಡಬೇಕು ಎಂದು ಹೇಳಿದರು.
ಪ್ರೊ೤ ರಮೇಶ ಎನ್. ತೆವರಿ, ಪ್ರೊ೤ ಎಂ.ಎಚ್. ಹೆಬ್ಬಾಳ ಹಾಗೂ ಪ್ರೊ೤ ಹಾರಾಳು ಮಹಾಬಲೇಶ್ವರ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಪ್ರೊ೤ ಎಸ್.ಟಿ. ತೆಪ್ಪದ ಸ್ವಾಗತಿಸಿದರು. ತೇಜಪ್ಪ ಎನ್. ಮಡಿವಾಳರ ನಿರೂಪಿಸಿದರು. ಪ್ರೊ೤ ಎಸ್.ಜಿ. ಕಲ್ಲೇಶಪ್ಪ ವಂದಿಸಿದರು. ಇದೇ ಸಂದರ್ಭದಲ್ಲಿ ದೈಹಿಕ ಶಿಕ್ಷಣ ಬೋಧಕ ಪ್ರೊ೤ ಎಸ್.ಜಿ. ಕಲ್ಲೇಶಪ್ಪ ಹಾಗೂ ವಿದ್ಯಾರ್ಥಿಗಳು ರಕ್ತದಾನ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.