ಹಾವೇರಿ

ಕನಕದಾಸರ ಚಿಂತನೆ ಪ್ರಸ್ತುತ

Published On :

ಹಾನಗಲ್ಲ: ಕನಕದಾಸರ ಜೀವನದರ್ಶನ, ಕಾವ್ಯ-ಕೀರ್ತನೆಗಳ ಅನನ್ಯತೆ, ಸಾಮಾಜಿಕ ಚಿಂತನೆ ಇಪ್ಪತ್ತೊಂದನೇ ಶತಮಾನದಲ್ಲೂ ಪ್ರಸ್ತುತವಾಗಿವೆ ಎಂದು ರಾಷ್ಟ್ರೀಯ ಸಂತ ಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಮನ್ವಯಾಧಿಕಾರಿ, ಸಾಹಿತಿ ಕಾ.ತ. ಚಿಕ್ಕಣ್ಣ ಹೇಳಿದರು.
ತಾಲೂಕಿನ ತಿಳಿವಳ್ಳಿ ಸಮೀಪದ ಕಛವಿಯಲ್ಲಿ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಬೆಂಗಳೂರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಬೆಂಗಳೂರು ಆಶ್ರಯದಲ್ಲಿ, ಕಛವಿ ಸರ್ಕಾರಿ ಜ್ಯೂನಿಯರ್ ಕಾಲೇಜಿನ ಸಹಕಾರದಲ್ಲಿ ನಡೆದ 'ಮುತ್ತು ಬಂದಿದೆ ಕೇರಿಗೆ' ಕನಕದಾಸರ ಉಪನ್ಯಾಸ-ವಾಚನ-ಗಾಯನ ರಸಗ್ರಹಣ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಕನಕದಾಸರ ಸಾಹಿತ್ಯಿಕ, ಸಾಂಸ್ಕೃತಿಕ, ಸಾಮಾಜಿಕ ದರ್ಶನವನ್ನು ವಿದ್ಯಾರ್ಥಿಗಳಿಗೆ ಹಾಗೂ ಯುವ ಜನತೆಯಲ್ಲಿ ಆಸಕ್ತಿ ಮೂಡಿಸುವುದು ಅತ್ಯವಶ್ಯವಿದೆ ಎಂದರು.
ಶಿಬಿರದಲ್ಲಿ ಉಪನ್ಯಾಸ ನೀಡಿದ ರಂಗ ತಜ್ಞ ಶ್ರೀಪಾದ ಭಟ್ ಮಾತನಾಡಿ, ಭಕ್ತನಾಗಿದ್ದರೂ ಕುರುಡರಾಗದ ಕನಕದಾಸರು, ಈ ನಾಡಿನ ಧರ್ಮಕ್ಕೆ ಅಂಟಿದ್ದ ಜಾತಿಯತೆ ವಿರುದ್ಧ ಕವಿಯಾಗಿ, ಕಲೆಯಾಗಿ ಅವರು ಗಳಿಸಿದ ಅಪಾರ ಅನುಭವಗಳನ್ನು, ಕೀರ್ತನೆ, ಕೃತಿಗಳಿಗೆ ಪರಿವರ್ತಿಸಿ ಅಂದಿನ ಸಮಾಜದ ಬದಲಾವಣೆಗೆ ಶ್ರಮಿಸಿರುವ ಮಾನುಭಾವರಾಗಿದ್ದಾರೆ ಎಂದ ಅವರು, ಅವರ ಆದರ್ಶ ತತ್ವಗಳು ವಿಶ್ವಕ್ಕೆ ಮಾದರಿಯಾಗಿವೆ ಎಂದರು. ಕಾರ್ಯಕ್ರಮದಲ್ಲಿ ಕಲಾವಿದ, ಶಿಕ್ಷಕ ನರಸಿಂಹ ಕೋಮಾರ ಹಾಗೂ ಸಂಗಡಿಗರು ಕನಕದಾಸರ ಕೀರ್ತನೆಗಳನ್ನು ಹಾಡಿ ವಿದ್ಯಾರ್ಥಿಗಳ ಹಾಗೂ ಅತಿಥಿಗಳ ಗಮನ ಸೆಳೆದರು. ಕಾಲೇಜಿನ ಪ್ರಾಚಾರ್ಯ ಎನ್. ಅಡಿವೇಶ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಭು ಗುರಪ್ಪನವರ, ಬಸವರಾಜ ಪಾಟೀಲ, ಉಮೇಶ ಧೋತ್ರದ ಇನ್ನಿತರರು ಅತಿಥಿಗಳಾಗಿದ್ದರು. ಮಾಲತೇಶ ನಾಡಿಗೇರ ಸ್ವಾಗತಿಸಿದರು. ನಾಗರಾಜ ಧಾರೇಶ್ವರ ಕಾರ್ಯಕ್ರಮ ನಿರ್ವಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.