ರೈತ ಸಂಪರ್ಕ ಕೇಂದ್ರದಿಂದ ತರಬೇತಿ ಕಾರ್ಯಕ್ರಮ
ಹಾವೇರಿ: ಇಲ್ಲಿನ ರೈತ ಸಂಪರ್ಕ ಕೇಂದ್ರದ ವತಿಯಿಂದ ನಗರದ ಎಪಿಎಂಸಿ ಸಭಾಂಗಣದಲ್ಲಿ 2013-14ನೇ ಸಾಲಿನ ಭೂ ಚೇತನ ಕಾರ್ಯಕ್ರಮದಡಿ ಹೋಬಳಿಯ ರೈತ, ಮುಂದಾಳು ರೈತರ, ರೈತ ಅನುವುಗಾರರ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಇಕ್ರಿಸಾಟ್ ಸಂಸ್ಥೆಯ ಜಿಲ್ಲೆಯ ತಾಂತ್ರಿಕ ಅಧಿಕಾರಿ ವಿಶ್ವನಾಥ ಆರ್. ರೈತರಿಗೆ ಭೂ ಚೇತನ ಯೋಜನೆ ಬಗ್ಗೆ ವಿವರಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಣ್ಣಿನ ಫಲವತ್ತತೆ ಕ್ಷೀಣಿಸುತ್ತಿದ್ದು, ಅದರಿಂದ ಸೂಕ್ಷ್ಮ ಪೋಷಕಾಂಶಗಳ ಕೊರತೆ ಉಂಟಾಗಿದೆ.
ಅದು ಸಸ್ಯಗಳ ಬೆಳವಣಿಗೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಆದ್ದರಿಂದ ಸುಸ್ಥಿರ ಕೃಷಿಯಲ್ಲಿ ಜಲ ಮತ್ತು ಮಣ್ಣಿನ ನಿರ್ವಹಣೆ ಹಾಗೂ ಸಮಗ್ರ ಪೋಷಕಾಂಶಗಳ ನಿರ್ವಹಣೆ ಬಗ್ಗೆ ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಹನುಮನಮಟ್ಟಿಯ ಕೃಷಿ ವಿಜ್ಞಾನ ಕೇಂದ್ರದ ತಳಿ ಸಂವರ್ಧಕ ಎಚ್. ನಾಗಪ್ಪ ಅವರು ಗೋವಿನಜೋಳ, ಸೋಯಾ ಅವರೆ, ಹತ್ತಿ ಹಾಗೂ ಶೇಂಗಾ ಬೆಳೆಗಳಲ್ಲಿನ ಹೊಸ ತಳಿಗಳ ಬಗ್ಗೆ ವಿವರಿಸಿದರು. ಅಲ್ಲದೇ ಕಿರು ಧಾನ್ಯಗಳ ಮಹತ್ವ, ಅದರ ಬೀಜೋತ್ಪಾದನೆ ಮತ್ತು ಬೀಜ ಸ್ವಾವಲಂಬನೆಯ ಮಹತ್ವವನ್ನು ತಿಳಿಸಿದರು.
ನಂತರ ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ ಶಿವಕುಮಾರ ಲಕ್ಷಶೆಟ್ಟಿ ಮುಂಗಾರು ಬೆಳೆಗಳಲ್ಲಿ ಸಮಗ್ರ ನಿರ್ವಹಣೆ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಸಸ್ಯ ರೋಗ ಹಾಗೂ ಕೀಟಗಳ ಮಾದರಿಗಳನ್ನು ಪ್ರದರ್ಶಿಸಲಾಯಿತು. ಕೃಷಿಕ ಸಮಾಜದ ಜಿಲ್ಲಾ ಪ್ರತಿನಿಧಿ ನಾಗಪ್ಪ ವಿಭೂತಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕೃಷಿಕ ಸಮಾಜದ ನಿರ್ದೇಶಕರಾದ ಮಲ್ಲೇಶಪ್ಪ ಮತ್ತಿಹಳ್ಳಿ, ಪ್ರಕಾಶ ಹಂದ್ರಾಳ, ಸಾವಯವ ಕೃಷಿಕ ಜೀವನಗೌಡ ಮುದಿಗೌಡ್ರ, ಫಕ್ಕೀರಪ್ಪ ವಾರ್ತಿ, ರಮಗೌಡ ಗಾಜಿಗೌಡ್ರ, ಮಲ್ಲೇಶಪ್ಪ ನಾಗಮ್ಮನವರ, ಚಂದ್ರಶೇಖರಪ್ಪ ದೊಡ್ಡಮನಿ, ಶೆದಿಯಪ್ಪ ಕಾಶಂಬಿ, ಸಹನಾ ಮಹಿಳಾ ರೈತಶಕ್ತಿ ಗುಂಪು ಕಬ್ಬೂರಿನ ರೈತ ಮಹಿಳೆಯರು ಉಪಸ್ಥಿತರಿದ್ದರು.
ಸಹಾಯಕ ಕೃಷಿ ಅಧಿಕಾರಿ ಬಿ.ಆರ್. ಕಳಸ್ಕರ ಸ್ವಾಗತಿಸಿದರು. ವೈ. ಬಿ. ಬೇಂದ್ರೆ ಕಾರ್ಯಕ್ರಮ ನಿರ್ವಹಿಸಿದರು. ಕೃಷಿ ಅಧಿಕಾರಿ ಸಿ.ಐ. ತಿಮ್ಮಾಪುರ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

