ಮಕ್ಕಳಲ್ಲಿ ದೇಶಾಭಿಮಾನ ಮೂಡಿಸಿ
ಹಾನಗಲ್ಲ: ವಿದ್ಯಾರ್ಥಿಗಳಲ್ಲಿ ದೇಶಾಭಿಮಾನ ಮೂಡಿಸುವ ಕಾರ್ಯ ನಡೆಯಬೇಕಾಗಿದ್ದು, ಪಠ್ಯದಲ್ಲಿ ದೇಶ ಪ್ರೇಮದ ವಿಷಯಗಳು ಪರಿಣಾಮಕಾರಿಯಾಗಿರಬೇಕು ಎಂದು ಉಪನ್ಯಾಸಕ ಮುಕುಂದ ದೊಡ್ಡಮನಿ ತಿಳಿಸಿದರು.
ತಾಲೂಕಿನ ಮಲ್ಲಿಗಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿವೇಕಾನಂದ ಯುವ ಸ್ವಯಂಸೇವಾ ಸಂಘ ಏರ್ಪಡಿಸಿದ ಮಕ್ಕಳಲ್ಲಿ ದೇಶಪ್ರೇಮ ಕುರಿತಾದ ಭಾಷಣ ಸ್ಪರ್ಧೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳಲ್ಲಿ ಸ್ಫೂರ್ತಿ ತುಂಬುವ ಕಾರ್ಯ ನಡೆಯಬೇಕಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಟಿಪ್ಪು ಸುಲ್ತಾನ ನಾಯ್ಕವಾಡಿ, ಮಕ್ಕಳನ್ನು ಈ ದೇಶದ ದೇಶಭಕ್ತ ಪ್ರಜೆಗಳನ್ನಾಗಿ ಸಿದ್ಧಗೊಳಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು. ಸಂಪನ್ಮೂಲ ವ್ಯಕ್ತಿಗಳಾದ ಪಿ.ಎಂ. ಚಲವಾದಿ ಮಾತನಾಡಿ, ಇಂದಿನ ಮಕ್ಕಳೇ ನಾಳಿನ ಪ್ರಜೆಗಳು, ಉನ್ನತ ವ್ಯಕ್ತಿಗಳ ಆದರ್ಶಗಳನ್ನು ಮಕ್ಕಳಿಗೆ ನೀಡಬೇಕು ಎಂದರು.
ಎಸ್.ಕೆ. ದೊಡ್ಡಮನಿ, ಸಂಘದ ಸಹಕಾರ್ಯದರ್ಶಿ ಶ್ವೇತಾ ಎಸ್.ಜಿ., ಮುಖ್ಯೋಪಾಧ್ಯಾಯ ಬಿ.ಎನ್. ಸಂಗೂರ, ಗ್ರಾಪಂ ಉಪಾಧ್ಯಕ್ಷೆ ಫಜಲುನ್ನಿಸಾ ಮಾಸನಕಟ್ಟಿ, ಖಜಾಂಚಿಗಳಾದ ಮಂಜುನಾಥ ಗೊಲ್ಲರ, ಸದಸ್ಯರಾದ ದೀಪಾ, ಶೃತಿ ಮಲ್ಲಿಗಾರ, ಕವಿತಾಬಾಯಿ, ನಾಗರಾಜ ಕ್ಯಾಲ್ಕೊಂಡ, ಕಾರ್ಯದರ್ಶಿ ಗುಡ್ಡಪ್ಪ ಜಿಗಿಳಿಕೊಪ್ಪ, ಸದಸ್ಯರಾದ ಅಶ್ಫಕ್ ಶೇಖ್ ಮತ್ತಿತರರು ಪಾಲ್ಗೊಂಡಿದ್ದರು.
ಭಾಷಣ ಸ್ಪರ್ಧೆಯಲ್ಲಿ ತರುಣ ಸವದತ್ತಿ ಪ್ರಥಮ, ಅಂಕಿತಾ ಕಮನಳ್ಳಿ ದ್ವಿತೀಯ, ಚೈತ್ರಾ ಲಮಾಣಿ ತೃತೀಯ ಸ್ಥಾನ ಪಡೆದಿದ್ದು, ಬಹುಮಾನಗಳನ್ನು ವಿತರಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

