ಹಾವೇರಿ

ಮಣಿಪಾಲ್‌ಗೆ ರಾತ್ರಿ ಬಸ್ ಸೌಲಭ್ಯ

Published On :

ರಾಣಿಬೆನ್ನೂರು: ನಗರದಿಂದ ಮಣಿಪಾಲಗೆ ಹೊಸದಾಗಿ ಪ್ರಾರಂಭವಾದ ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಪೋ ವ್ಯವಸ್ಥಾಪಕ ಹೊನ್ನಪ್ಪ ಶನಿವಾರ ರಾತ್ರಿ ಚಾಲನೆ ನೀಡಿದರು. ಬಳಿಕ ಮಾತನಾಡಿ, ಪ್ರತಿದಿನ ರಾತ್ರಿ 9.15ಕ್ಕೆ ಬಸ್ ಹೊರಟು ತಾಲೂಕಿನ ಮಾಗೋಡ, ಇಟಗಿ, ಕೃಷ್ಣಾಪುರ, ಹನುಮನಳ್ಳಿ, ಕೋಟಿಹಾಳ, ತುಮ್ಮಿನಕಟ್ಟಿ, ಹೊನ್ನಾಳಿ ಮಾರ್ಗವಾಗಿ ಮಣಿಪಾಲ್‌ಗೆ ಮರುದಿನ ಬೆಳಗ್ಗೆ ತಲುಪಲಿದೆ ಎಂದು ತಿಳಿಸಿದರು. ತಾಲೂಕಿನ ಬಡ ಕೂಲಿಕಾರರಿಗೆ, ಕೃಷಿ ಕಾರ್ಮಿಕರಿಗೆ, ರೈತರಿಗೆ ಇದರಿಂದ ನೇರವಾಗಿ ಮಣಿಪಾಲ ಆಸ್ಪತ್ರೆಗೆ ತಲುಪಿ ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಅನುಕೂಲವಾಗುವುದು. ಸೇವೆಗೆ ಹೆಸರಾದ ಮಣಿಪಾಲ ಆಸ್ಪತ್ರೆಗೆ ತೆರಳಬೇಕೆಂದರೆ ಬಡವರು ರಾತ್ರಿ ಅಟೋಗಳಿಗೆ ಕೇಳಿದಷ್ಟು ಹಣ ಪಾವತಿಸಬೇಕಿತ್ತು. ಈಗ ನೇರವಾಗಿ ಬಸ್ ಹೊರಡುವುದರ ಜತೆಗೆ ತಾಲೂಕಿನ ಬಹುತೇಕ ಗ್ರಾಮಗಳ ಮೂಲಕ ಹೊರಡುವುದರಿಂದ ಸಮಯ ಹಾಗೂ ಹಣ ಉಳಿತಾಯವಾಗುತ್ತದೆ ಎಂದರು. ಸುಮಾರು ವರ್ಷಗಳಿಂದ ಈ ಮಾರ್ಗವಾಗಿ ಮಣಿಪಾಲ್‌ಗೆ ಬಸ್ ಬಿಡಬೇಕೆಂದು ರೈತರು, ಕೂಲಿಕಾರರು ಹೋರಾಟ ಮಾಡಿದ್ದರು. ಇದರ ಫಲವಾಗಿ ಈ ಬಸ್ ಸಂಚಾರ ಆರಂಭವಾಗಿದ್ದು, ವ್ಯವಸ್ಥಾಪಕರೂ ಇದಕ್ಕೆ ಸಹಕರಿಸಿದ್ದಾರೆ ಎಂದು ರಾಜ್ಯ ರೈತ ಸಂಘದ ಸಂಚಾಲಕ ರವೀಂದ್ರಗೌಡ ಪಾಟೀಲ ಹೇಳಿದರು. ಬಸ್ ಹೊರಡುವ ಮುನ್ನ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಡಿಪೋ ಮ್ಯಾನೇಜರ್ ಹೊನ್ನಪ್ಪ, ಪರಮೇಶ ಚಿನ್ನಣ್ಣನವರ, ಶೇಖರಗೌಡ ಹೊಸಳ್ಳಿ, ಜಯಣ್ಣ ಮಾಗನೂರು, ಸುರೇಶ ಬಿದರಿ, ಬಸಪ್ಪ ಅಡವಿ ನಾಯಕ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.