ಅಧಿಕಾರಿಗಳ ಕಚ್ಚಾಟ: ರದ್ದಾದ ಮನೆ
ಶಿಗ್ಗಾಂವಿ: ತಾಲೂಕಿನ ಹುಲಗೂರು ಗ್ರಾಮದ 2010-11ನೇ ಸಾಲಿನ ಬಸವ ವಸತಿ (ಗುಡಿಸಲವಾಸಿ) ಯೋಜನೆಯಲ್ಲಿ 330 ಮನೆಗಳು ಆಯ್ಕೆಯಾಗಿರುತ್ತವೆ. ಇವುಗಳಲ್ಲಿ 242 ಮನೆಗಳು ರದ್ದಾಗಿರುತ್ತವೆ. ಆದರೆ, ಅವರುಗಳು ಪ್ಲಿಂತ್‌ವರೆಗೆ, ಲಿಂಟಲ್‌ವರೆಗೆ, ರೂಫ್‌ಲೇವಲ್‌ವರೆಗೆ ಸಾಲಶೂಲ ಮಾಡಿ ಕಟ್ಟಿಕೊಂಡಿರುತ್ತಾರೆ. ಆದರೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಪ್ರಗತಿ ತೋರಿಸದೆ ಇದ್ದುದ್ದರಿಂದ ಅಧಿಕಾರಿಗಳ ಹಗೆತನದಿಂದ ಮನೆಗಳು ರದ್ದಾಗಿರುತ್ತವೆ.
ಆದ್ದರಿಂದ ಶೀಘ್ರ ಮೇಲಧಿಕಾರಿಗಳು ತೀವ್ರ ನಿಗಾವಹಿಸಿ ಮಂಜೂರು ಮಾಡಿಕೊಡಲು ರಾಜೀವ್ ಗಾಂಧಿ ಹೌಸಿಂಗ್ ಬೋರ್ಡಿಗೆ ತಾಲೂಕು ಪಂಚಾಯಿತಿ ಮುಖಾಂತರ ವರದಿಯನ್ನು ಕೊಟ್ಟಿರುತ್ತದೆ. ವಾರ್ತಾ ಮತ್ತು ಪ್ರಸಾರ ಹಾಗೂ ಮೂಲಭೂತ ಸೌಕರ್ಯ ಇಲಾಖೆ ಸಚಿವರಾದ ಸಂತೋಷ ಲಾಡ್ ಅವರಿಗೂ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎನ್. ವೇಂಕೋಜಿ, ಮಾಜಿ ಶಾಸಕ ಎಸ್.ಎ. ಖಾದ್ರಿ, ಕಾಂಗ್ರೆಸ್‌ನ ಸಂಘಟನಾ ಕಾರ್ಯದರ್ಶಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಾದ ಶೇಖಪ್ಪ ಗಣಾಚಾರಿ, ಬಾಬುಸಾಬ ಚಂದರಗಿ, ಹಜರೇಸಾಬ ಕಾರಡಗಿ, ರುದ್ರಪ್ಪ ಕೆಳಗಿನಮನಿ, ದಯಾನಂದ ಮೆಣಸಿನಕಾಯಿ, ಲಲಿತಾ ದ್ಯಾಪನಗೌಡ್ರ, ಶಿವನಗೌಡ ರಾಯನಗೌಡ್ರ ಮುಂತಾದವರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

