ಭಾಷಾ ಅಲ್ಪಸಂಖ್ಯಾತರಿಗೆ ಸೌಲಭ್ಯ ನೀಡಿ: ನ್ಯಾಯವಾದಿ ಕೆ.ಸಿ. ರಜಪೂತ
ಹಾವೇರಿ: ರಾಜ್ಯದಲ್ಲಿ ರಜಪೂತ ಸಮಾಜ ಬಾಂಧವರು 2ಎ ಕೆಟಗರಿಯಲ್ಲಿದ್ದು, 2ಎದಲ್ಲಿ ಸಾಕಷ್ಟು ಪ್ರಬಲ ಜಾತಿಗಳಿರುವುದರಿಂದ ರಜಪೂತ ಸಮಾಜ ಸರ್ಕಾರದ ಸೌಲಭ್ಯಗಳಿಂದ ವಂಚಿತವಾಗಿದೆ. ಸರ್ಕಾರ ರಜಪೂತರನ್ನು ಭಾಷಾ ಅಲ್ಪಸಂಖ್ಯಾತರೆಂದು ಪರಿಗಣಿಸಿ, ಭಾಷಾ ಅಲ್ಪಸಂಖ್ಯಾತರಿಗೆ ನೀಡುತ್ತಿರುವ ಸೌಲಭ್ಯಗಳನ್ನು ರಜಪೂತ ಸಮಾಜ ಬಾಂಧವರಿಗೆ ನೀಡಬೇಕೆಂದು ಮಹಾರಾಣಾ ಪ್ರತಾಪಸಿಂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನ್ಯಾಯವಾದಿ ಕೆ.ಸಿ. ರಜಪೂತ ಆಗ್ರಹಿಸಿದರು.
ಮಂಗಳವಾರ ಕಮಲ ಕಲ್ಯಾಣ ಮಂಟಪದಲ್ಲಿ ಸೂರ್ಯವಂಶ ಕ್ಷತ್ರೀಯ ಹಾವೇರಿ ರಜಪೂತ ಸಮಾಜ ಹಾಗೂ ಚೇತಕ್ ಮಹಿಳಾ ಮಂಡಳ ಇವರ ಆಶ್ರಯದಲ್ಲಿ ಏರ್ಪಡಿಸಿದ್ದ ಮಹಾರಾಣಾ ಪ್ರತಾಪಸಿಂಹರ 474ನೇ ಜಯಂತ್ಯುತ್ಸವ ಹಾಗೂ ರಾಜ್ಯಮಟ್ಟದ ವಧು-ವರರ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾರ್ಯಕ್ರಮ ಉದ್ಘಾಟಿಸಿ ರಾಜ್ಯ ರಜಪೂತ ಮಹಾಸಭಾದ ಅಧ್ಯಕ್ಷ, ಚಲನಚಿತ್ರ ನಿರ್ಮಾಪಕ ಆರ್. ಬಾಲಾಜಿಸಿಂಗ್, ಮುಂಬರುವ ದಿನಗಳಲ್ಲಿ ಹಾವೇರಿಯಲ್ಲಿ ರಾಜ್ಯಮಟ್ಟದ ರಜಪೂತ ಸಮಾವೇಶವನ್ನು ಮಾಡುವುದಾಗಿ ಹೇಳಿದರು.
ಮುಖ್ಯ ಅತಿಥಿಗಳಾಗಿ ಪ್ರತಾಪಸಿಂಗ್ ನರಗುಂದ, ಪರಶುರಾಮ ಸಿಂಗ್, ಮಾಲತೇಶ ಬಾಬುಸಿಂಗ್‌ನವರ, ಲೀಲಾವತಿ ಹೊಳಲ, ಶಂಕರ ಸಿಂಗ್, ವೆಂಕಟಸಿಂಗ್ ಕಾರಟಗಿ, ಪ್ರಕಾಶಸಿಂಗ್ ಧಾರವಾಡ, ಹನುಮಂತ ಸಿಂಗ್ ರಜಪೂತ, ರಾಮಸಿಂಗ್ ಸವದತ್ತಿ, ವೀಣಾಬಾಯಿ ಖಾರದ ಇದ್ದರು.
ಸಮಾರಂಭದಲ್ಲಿ ನೂತನವಾಗಿ ಚುನಾಯಿತರಾದ ಮಾಲತೇಶ ಬಾಬುಸಿಂಗ್‌ನವರ, ಸಮಾಜದ ಮುಖಂಡರಾದ ಶೇಖರಸಿಂಗ್ ಧಾರವಾಡ, ಪ್ರಮೀಳಾ ಅವರನ್ನು ಸನ್ಮಾನಿಸಲಾಯಿತು. ತುಳಸಾಬಾಯಿ ರಜಪೂತ ಪ್ರಾರ್ಥಿಸಿದರು.
ಅಶೋಕ ಸಿಂಗ್ ರಜಪೂತ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಫಕ್ಕೀರಸಿಂಗ್ ಹಾಗೂ ಜ್ಯೋತಿ ರಜಪೂತ ನಿರೂಪಿಸಿದರು. ಲಕ್ಷ್ಮಣಸಿಂಗ್ ರಜಪೂತ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

