ಬೆಳೆವಿಮೆ ಸದುಪಯೋಗಪಡಿಸಿಕೊಳ್ಳಿ: ಅಮೃತೇಶ್ವರ
ಹಾನಗಲ್ಲ: ತಾಲೂಕಿನಲ್ಲಿ ಮುಂಗಾರು ಹಂಗಾಮಿಗೆ ಹೋಬಳಿ ಮಟ್ಟದಲ್ಲಿ ಬೆಳೆವಿಮೆ ಮಾಡಿಸಲು ಆಗಸ್ಟ್ 31ರ ವರೆಗೆ ಅವಕಾಶವಿದ್ದು, ತಾಲೂಕಿನ ರೈತರು ಇದರ ಸದುಪಯೋಗಪಡೆಯಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ಎನ್.ಜಿ. ಅಮೃತೇಶ್ವರ ಮನವಿ ಮಾಡಿದ್ದಾರೆ.
ರಾಷ್ಟ್ರೀಯ ಕೃಷಿ ಯೋಜನೆಯನ್ನು ಮುಂಗಾರು ಹಂಗಾಮಿನಲ್ಲಿ ಅನುಷ್ಠಾನಗೊಳಿಸಲು ಹೋಬಳಿವಾರು ಬೆಳೆಗಳ ಘೋಷಣೆ ಮಾಡಲಾಗಿದೆ. ರಾಷ್ಟ್ರೀಯ ಕೃಷಿ ವಿಮಾ ಯೋಜನೆಯಲ್ಲಿ ತಾಲೂಕಿನ ಅಕ್ಕಿಆಲೂರು, ಬೊಮ್ಮನಹಳ್ಳಿ ಹಾಗೂ ಹಾನಗಲ್ಲ ಹೋಬಳಿಯ ರೈತರು ಬೆಳೆ ಬಿತ್ತಿದ ಅಥವಾ ನಾಟಿ ಮಾಡಿದ 30 ದಿವಸಗಳೊಳಗಾಗಿ ಅಥವಾ ಆಗಸ್ಟ್ 31ರೊಳಗಾಗಿ ವಿಮಾ ಕಂತನ್ನು ಪಾವತಿಸಬಹುದಾಗಿದೆ.
ಅಕ್ಕಿಆಲೂರು ಹೋಬಳಿಗೆ ನೀರಾವರಿ ಬತ್ತ, ಮುಸುಕಿನ ಜೋಳ ಹಾಗೂ ಮಳೆಯಾಶ್ರಿತ ಬತ್ತ, ರಾಗಿ, ಜೋಳ, ಮುಸುಕಿನ ಜೋಳ, ಸೋಯಾ ಅವರೆ, ಶೆಂಗಾ ಬೆಳೆ ವಿಮೆಗೊಳಪಡಲಿವೆ. ಬೊಮ್ಮನಹಳ್ಳಿ ಹೋಬಳಿಗೆ ನೀರಾವರಿ ಬತ್ತ, ಮುಸುಕಿನ ಜೋಳ ಹಾಗೂ ಮಳೆಯಾಶ್ರಿತ ಬತ್ತ, ಜೋಳ, ಮುಸುಕಿನ ಜೋಳ, ಸೋಯಾಅವರೆ, ಶೆಂಗಾ ಬೆಳೆಗಳು ವಿಮೆಗೊಳಪಡಲಿವೆ. ಹಾನಗಲ್ಲ ಹೋಬಳಿಯಲ್ಲಿ ನೀರಾವರಿ ಬತ್ತ, ಮುಸುಕಿನ ಜೋಳ ಹಾಗೂ ಮಳೆಯಾಶ್ರಿತ ಬತ್ತ, ರಾಗಿ, ಜೋಳ, ಮುಸುಕಿನ ಜೋಳ ಬೆಳೆಗಳನ್ನು ವಿಮೆಗೊಳಪಡಿಸಲಾಗಿದೆ.
ದಾಖಲೆಗಳು: ಬೆಳೆ ಸಾಲ ಪಡೆಯದೆ ಇರುವ ರೈತರು ತಮ್ಮ ಅರ್ಜಿಯೊಂದಿಗೆ ಪಹಣಿಪತ್ರಿಕೆ, ಅಖಾತೆ, ಬ್ಯಾಂಕ್ ಪಾಸ್ಪುಸ್ತಕ, ಗ್ರಾಮ ಲೆಕ್ಕಾಧಿಕಾರಿಗಳಿಂದ ಪಡೆದ ಬೆಳೆ ದೃಢೀಕರಣ ಪತ್ರ, ಕಂದಾಯ ರಸೀದಿ ನೀಡಬೇಕು.
ಏಪ್ರಿಲ್ 1ರಿಂದ ಆಗಸ್ಟ್ 30ರೊಳಗೆ ಬೆಳೆ ಸಾಲ ಮಂಜೂರಾಗಿದ್ದರೆ, ಅಂತಹ ರೈತರನ್ನು ಕಡ್ಡಾಯವಾಗಿ ಯೋಜನೆಯಡಿ ಒಳಪಡಿಸಲು ಸೂಚಿಸಲಾಗಿದೆ.
ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಬೆಳೆ ವಿಮಾ ಕಂತಿನಲ್ಲಿ ಶೇ. 10ರಷ್ಟು ರಿಯಾಯತಿ ನೀಡಲಾಗುವದು. ಬೆಳೆ ಸಾಲ ಪಡೆಯದ ರೈತರು ಪ್ರಾಯೋಗಿಕ ಹವಾಮಾನ ವಿಮಾ ಯೋಜನೆ ಅಥವಾ ರಾಷ್ಟ್ರೀಯ ಕೃಷಿ ವಿಮಾ ಯೋಜನೆಯ ಯಾವುದಾದರು ಒಂದು ಯೋಜನೆಯನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬಹುದು. ಎರಡೂ ಯೋಜನೆಯಲ್ಲೂ ಭಾಗವಹಿಸಲು ಬರುವುದಿಲ್ಲ ಎಂದು ತಿಳಿಸಿರುವ ಅವರು, ಪ್ರಾಯೋಗಿಕ ಹವಾಮಾನ ವಿಮಾ ಯೋಜನೆಯಡಿ ವಿಮಾ ಕಂತು ತುಂಬಲು ಜುಲೈ 31 ಹಾಗೂ ರಾಷ್ಟ್ರೀಯ ಕೃಷಿ ವಿಮಾ ಯೋಜನೆಯಡಿ ವಿಮಾ ಕಂತು ತುಂಬಲು ಆಗಸ್ಟ್ 31 ಅಂತಿಮ ದಿನವಾಗಿರುತ್ತದೆ ಎಂದು ಸಹಾಯಕ ಕೃಷಿ ನಿರ್ದೇಶಕ ಎನ್.ಜಿ. ಅಮೃತೇಶ್ವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

