ಹಾವೇರಿ

ನಿವೃತ್ತ ಸಿಬ್ಬಂದಿಗೆ ಸನ್ಮಾನ

Published On :

ಶಿಗ್ಗಾಂವಿ:  ಒಳ್ಳೆಯ ರೀತಿ ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿ ತಮ್ಮ ವಿಶ್ರಾಂತಿ ಜೀವನಕ್ಕೆ ಶಾಂತಿ ಸುಖ ದೊರೆಯಲಿ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಿ. ರೇವಣ್ಣ ಹೇಳಿದರು. ಪಟ್ಟಣದ ತಾಪಂ ಸಭಾಭವನದಲ್ಲಿ ನಿವೃತ್ತಿ ಹೊಂದಿದ ಸಿಬ್ಬಂದಿಗಳಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನೌಕರರು ಎಷ್ಟೋ ದಿನಗಳ ಸೇವೆ ಮಾಡಿದರೂ ಒಂದು ದಿನ ನಿವೃತ್ತರಾಗಬೇಕು. ಆದರೆ, ನಾವು ಮಾಡಿದ ಸೇವೆಯು ಸಾರ್ವಜನಿಕರಿಗೆ ತೃಪ್ತಿ ತರುವಂತೆ ಮಾಡಿದಾಗ ನಮ್ಮ ಸೇವೆಯು ಸಾರ್ಥಕವಾಗುತ್ತದೆ. ಅವರ ನಿವೃತ್ತಿ ಜೀವನದಲ್ಲಿ ಇನ್ನು ಹೆಚ್ಚಿನ ಸೇವೆ ಮಾಡಲು ಆರೋಗ್ಯ, ನೆಮ್ಮದಿ ದೊರಯಲಿ ಎಂದು ಹಾರೈಸಿದರು.  ಬಸವನಾಳ, ಶಿಶುವಿನಾಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್. ಪಲ್ಲನ, ಎಂ.ಎಲ್. ಡೊಳ್ಳಿನ, ಹೋತನಳಿ ಗ್ರಾಪಂ ಕಾರ್ಯದರ್ಶಿ ಜಿ.ವೈ. ರಾಮಗೇರಿ ಡಿ ವರ್ಗದ ನೌಕರರಾದ ಕರಿಯಪ್ಪ ಮಾದರ ಅವರನ್ನು ಸನ್ಮಾನಿಸಲಾಯಿತು.  ತಾಪಂ ವ್ಯವಸ್ಥಾಪಕ ವಿ.ಎಂ. ಕಿವುಡನವರ, ಹಿರಿಯ ಲೆಕ್ಕಾಧಿಕಾರಿ ಕೆ.ಆರ್. ರಿತ್ತಿ, ತಾಪಂ ಎಲ್ಲ ಸಿಬ್ಬಂದಿ, ಎಲ್ಲ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು ಇದ್ದರು.

ಡೆಂಘೀ ಹರಡದಂತೆ ನಿಗಾವಹಿಸಿ
ಶಿಗ್ಗಾಂವಿ:  ಡೆಂಘೀ ಜ್ವರ ವೈರಸ್ಸಿಂದ ಹರಡುತ್ತದೆ. ಸೋಂಕು ಹೊಂದಿದ ಈಡಿಸ್ ಇಜಿಪ್ಟೈ ಸೊಳ್ಳೆ ಕಚ್ಚುವಿಕೆಯಿಂದ ಹರಡುತ್ತದೆ. ಸಾಮಾನ್ಯವಾಗಿ ಈ ಸೊಳ್ಳೆಯು ಹಗಲಿನಲ್ಲಿ ಕಚ್ಚುತ್ತದೆ. ಸೊಳ್ಳೆ ಹೆಚ್ಚಿನ ಮಟ್ಟಿಗೆ ಮನೆಯಲ್ಲಿರುವ ನೀರು ಶೇಖರಣೆ ಸಾಮಗ್ರಿಗಳ ಮೇಲೆ ಕುಳಿತುಕೊಳ್ಳದಂತೆ ನಿಗಾವಹಿಸಿ ಎಂದು ಹಾವೇರಿ ಜಿಲ್ಲಾ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ, ಗ್ರಾಪಂ ಸದಸ್ಯ ಶೇಕಣ್ಣ ಗಣಾಚಾರಿ ಹೇಳಿದರು. ತಾಲೂಕಿನ ಹುಲಗೂರು ಗ್ರಾಮದಲ್ಲಿ ಡೆಂಘೀ ಜ್ವರ ನಿಯಂತ್ರಣ ಕುರಿತು ಏರ್ಪಡಿಸಿದ್ದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ನೀರು ಶೇಖರಣೆಯ ಹಂಡೆ, ಹರವಿ, ನೀರಿನ ಟ್ಯಾಂಕ್, ಹೂವಿನ ಕುಂಡಗಳು, ಮನೆಯ ಸುತ್ತಮುತ್ತ ಬಿಸಾಡಿದ ತೆಂಗಿನ ಚಿಪ್ಪುಗಳು, ಹಳೆಯ ಟೈರ್, ಪ್ಲಾಸ್ಟಿಕ್ ಕಪ್ಪುಗಳು, ಎಳೆನೀರಿನ ಚಿಪ್ಪು ಇತರೆ ನೀರಿನ ಸಂಗ್ರಹಗಾರಗಳಲ್ಲಿ ನೀರು ಸಂಗ್ರಹವಾಗಿ ನಿಂತ ನೀರಿನಲ್ಲಿ ಈಡಿಸ್ ಸೊಳ್ಳೆಗಳು ಉತ್ಪತ್ತಿಯಾಗಲು ಕಾರಣವಾಗುತ್ತದೆ. ಈ ಉತ್ಪತ್ತಿ ತಾಣಗಳನ್ನು ನಾಶಪಡಿಸಿ, ಇದರ ನಿಯಂತ್ರಣಕ್ಕೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎಂದರು. ಗ್ರಾಪಂ, ಪ್ರಾಥಮಿಕ ಆರೋಗ್ಯ ಕೇಂದ್ರ ಸಿಬ್ಬಂದಿ, ಖಾದರಲಿಂಗ ಪ್ರೌಢಶಾಲೆ ಕನ್ನಡ ಉರ್ದು ಶಾಲೆಗಳ ಶಿಕ್ಷಕರು, ಮಕ್ಕಳು, ಉಪಾಧ್ಯಕ್ಷರು ಹಾಗೂ ಊರ ನಾಗರಿಕರು, ಅಂಗನವಾಡಿ ಕಾರ್ಯಕರ್ತೆಯರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.