ಅನುಸೂಚಿತ ಜಾತಿಗಳ ಆಯೋಗ ಸಭೆಗೆ 200 ಡಿಎಸ್ಸೆಸ್ ಕಾರ್ಯಕರ್ತರು
ಹಾನಗಲ್ಲ: ರಾಷ್ಟ್ರೀಯ ಅನುಸೂಚಿತ ಜಾತಿಗಳ ಆಯೋಗ ಜು. 2ರಂದು ಬೆಂಗಳೂರಿನಲ್ಲಿ ಕರೆದಿರುವ ಸಭೆಗೆ ಜಿಲ್ಲೆಯ 200ಕ್ಕೂ ಅಧಿಕ ಡಿಎಸ್‌ಎಸ್ ಕಾರ್ಯಕರ್ತರು ತೆರಳಲಿದ್ದಾರೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾವೇರಿ ಜಿಲ್ಲಾ ಸಂಚಾಲಕ ನಿಂಗಪ್ಪ ಗಾಳೆಮ್ಮನವರ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪರಿಶಿಷ್ಟ ಜಾತಿಯಲ್ಲಿ ಇರುವ ಜಾತಿಗಳ ಹೆಸರನ್ನು ಸೇರ್ಪಡೆಗೊಳಿಸುವುದು ಹಾಗೂ ತೆಗೆದು ಹಾಕುವ ಕುರಿತು ಆಯೋಗ ನಡೆಸುತ್ತಿರುವ ಸಭೆಯಲ್ಲಿ ವಿವಿಧ ಸಮಾಜಗಳಿಗೆ ಆಗುವ ಅನ್ಯಾಯ ಖಂಡಿಸಿ ಹೇಳಿಕೆ ನೀಡಲು ತೆರಳುತ್ತಿರುವುದಾಗಿ ತಿಳಿಸಿದ್ದಾರೆ.
ಪ. ಜಾತಿಯಲ್ಲಿರುವ ಜಾತಿಗಳ ಹೆಸರನ್ನು ಸೇರ್ಪಡೆ ಹಾಗೂ ಕೈಬಿಡುವ ವಿಷಯದ ಕುರಿತು ಆಯೋಗ ಚರ್ಚಿಸುವುದನ್ನು ಬಿಟ್ಟು ಎಲ್ಲ ಸಮುದಾಯಗಳು ಪರಿಶಿಷ್ಟ ಸೌಲಭ್ಯ ಪಡೆಯುವ ರಂಗನಾಥ ಮಿಶ್ರಾ ವರದಿಯನ್ನು ಕೂಡಲೆ ಸರ್ಕಾರ ಕೈಬಿಡಬೇಕೆಂದು ಆಗ್ರಹಿಸಿದ್ದಾರೆ.
ಜುಲೈ 1ರಂದು ಡಿಎಸ್‌ಎಸ್ ಮುಖಂಡರಾದ ರವಿ ಓಲೇಕಾರ, ಆನಂದ ಗುರೂಜಿ, ಭರ್ಮಪ್ಪ ಹರಿಜನ, ಪರಮೇಶ್ವರ ನಾಯಕ, ಹನುಮಂತಪ್ಪ ವಡ್ಡರ, ರಾಜು ಗಾಡಿಗೇರ ನೇತೃತ್ವದಲ್ಲಿ ಹಾವೇರಿ ಜಿಲ್ಲೆಯಿಂದ ನೂರಾರು ಸಮಾಜ ಮುಖಂಡರು ಬೆಂಗಳೂರಿಗೆ ತೆರಳಿ ಆಯೋಗದ ಸಭೆಯಲ್ಲಿ ಪಾಲ್ಗೊಂಡು ಹಿಂದುಳಿದ ಸಮಾಜಗಳಿಗೆ ಆಗುವ ಅನ್ಯಾಯಗಳ ಕುರಿತು ಆಯೋಗದ ಗಮನ ಸೆಳೆಯಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

