ಹಾವೇರಿ

ರಾಷ್ಟ್ರೀಯ ವಿಜ್ಞಾನದಿನಾಚರಣೆ

Published On :

ಸವಣೂರು: ಮಕ್ಕಳಲ್ಲಿ ಶಾಲಾ ಹಂತದಲ್ಲೇ ವೈಜ್ಞಾನಿಕ ಮನೋಭಾವ ಮೂಡಿಸಬೇಕು. ಪ್ರತಿಯೊಂದು ವಿಷಯದಲ್ಲೂ ವೈಜ್ಞಾನಿಕ ಕಾರಣಗಳನ್ನು ಹುಡುಕುವ ಕುತೂಹಲ ಬೆಳೆಸಬೇಕು ಎಂದು ತೊಂಡೂರ ಗ್ರಾಪಂ ಅಧ್ಯಕ್ಷ ರಾಚಪ್ಪ ಬಶೆಟ್ಟಪ್ಪನವರ ಸಲಹೆ ಮಾಡಿದರು. ಅವರು ಸವಣೂರು ತಾಲೂಕಿನ ಹೊಸಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿಜ್ಞಾನ ಪುಸ್ತಕಗಳ ಅಧ್ಯಯನಕ್ಕೆ ಆದ್ಯತೆ ನೀಡುವಂತೆ ಸೂಚಿಸಿದರು. ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯ ವೀರಭದ್ರಪ್ಪ ವಹಿಸಿದ್ದರು. ತೊಂಡೂರ ಗ್ರಾಪಂ ಸದಸ್ಯ ಶ್ರೀಕಾಂತ ದೊಡ್ಡೂರ, ಮಾಜಿ ತಾಪಂ ಅಧ್ಯಕ್ಷ ಸೋಮಣ್ಣ ಅಮ್ಮನವರ, ಎಸ್.ಎಂ. ಹಿರೇಮನಿ, ಸಿ.ಎಂ. ಬಡಿಗೇರ, ಬಸಪ್ಪ ದೊಡ್ಡೂರ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು. ಪ್ರಾಸ್ತಾವಿಕವಾಗಿ ಶಶಿಧರ ಮಾತನಾಡಿದರು. ಎನ್.ನಾಗರಾಜ, ವಿಜ್ಞಾನ ಬೆಳವಣಿಗೆಯ ಪ್ರಮುಖ ಘಟ್ಟಗಳನ್ನು ವಿವರಿಸಿದರು. ಆರ್.ವೈ. ಕಳ್ಳಿಮನಿ, ಸಿ.ವಿ. ರಾಮನ್ ಅವರ ಜೀವನಾದರ್ಶಗಳನ್ನು ವಿವರಿಸಿದರು. ವಿಜ್ಞಾನ ವಸ್ತು ಪ್ರದರ್ಶನವನ್ನು ಸೋಮಣ್ಣ ಅಮ್ಮನವರ ಉದ್ಘಾಟಿಸಿದರು. ವಿಜ್ಞಾನ ವಸ್ತುಗಳ ವೀಕ್ಷಣೆ, ವಿದ್ಯಾರ್ಥಿಗಳಿಂದ ವಿವರಣೆ ಜರುಗಿತು. ಆರ್.ವಿ ಅಂಗಡಿ ಸ್ವಾಗತಿಸಿದರು. ಎನ್.ಎ. ತೆಂಬದ ವಂದಿಸಿದರು. ಆರ್.ಗಂಗಾಧರ, ಎಸ್.ಎನ್. ಪೂಜಾರ, ಎಸ್.ಎಸ್.ಕಲ್ಯಾಣಕರ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.