ಹಾವೇರಿ

ಆಸಕ್ತಿಯಿಂದ ಉನ್ನತ ಸಂಶೋಧನೆ

Published On :

ಹಾವೇರಿ: ನಮ್ಮ ಸುತ್ತಲಿನ ಜಗತ್ತಿನಲ್ಲಿ ಗೋಚರಿಸುವ ಭೌತಿಕ ವಸ್ತುಗಳಾದ ಘನ, ದ್ರವ ಹಾಗೂ ಅನಿಲ ಒಂದಿಲ್ಲೊಂದು ರೀತಿಯಿಂದ ತಮ್ಮ ವಿಭಿನ್ನ ಸ್ಥಿತಿಗಳಲ್ಲಿ ಮಾನವನ ಸೇವೆಗಾಗಿ ಮೀಸಲಾಗಿದ್ದು, ಇವುಗಳ ಬಗ್ಗೆ ಯುವಕರು ಹೆಚ್ಚು ಆಸಕ್ತಿ ವಹಿಸಿದರೆ ಉನ್ನತ ಸಂಶೋಧನೆ ಹೊರಹೊಮ್ಮುವುದು ಸಾಧ್ಯ ಎಂದು ಬೆಂಗಳೂರಿನ ವಿಜ್ಞಾನಿ ಡಾ೤ ಚನ್ನಬಸವೇಶ್ವರ ಏಳಮಗ್ಗದ ಅಭಿಪ್ರಾಯಪಟ್ಟರು.
ಇಲ್ಲಿನ ಗುದ್ಲೆಪ್ಪ ಹಳ್ಳಿಕೇರಿ ಕಾಲೇಜಿನ ವಿಜ್ಞಾನ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 27ನೇ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ಸ್ಪಟಿಕಗಳಲ್ಲಿ ದ್ರವದ ಗುಣಗಳನ್ನು ಕಾಣಬಹುದೇ ವಿಷಯ ಕುರಿತು ಮಾತನಾಡಿದರು. ಅಂಕಿ-ಅಂಶಗಳನ್ನು ಸೂಚಿಸುವ ಯಾವುದೇ ವಸ್ತು ಇಂದು ದ್ರವ ಸ್ಫಟಿಕವಾಗಿ ಕಾರ್ಯನಿರ್ವಹಿಸುತ್ತಿದೆ. ಇವುಗಳ ಬಗ್ಗೆ ಯುವಜನತೆ ಒಟ್ಟಾಗಿ ಕೆಲಸ ಮಾಡಿದರೆ ಮಾತ್ರ ಜಪಾನ ದೇಶದ ತಾಂತ್ರಿಕತೆಯನ್ನು ಭಾರತ ಮೀರಿಸಬಹುದು ಎಂದರು.
 ಪ್ರೊ. ಎನ್.ವಿ. ಕಂಬಾಳಿಮಠ ಅಧ್ಯಕ್ಷತೆ ವಹಿಸಿದ್ದರು. ವಿಜ್ಞಾನ ಸಂಘದ ಕಾರ್ಯಾಧ್ಯಕ್ಷ ಗೌಸಮುದ್ದೀನ ಯಣ್ಣಿ, ಪದವಿಪೂರ್ವ ಕಾಲೇಜು ಪ್ರಾಚಾರ್ಯ ಡಾ. ಸಿ. ಮಲ್ಲಣ್ಣ ಉಪಸ್ಥಿತರಿದ್ದರು.
27ನೇ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಹಾವೇರಿ ಜಿಲ್ಲೆಯ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಇಂಧನ ಅಭಾವ, ಸಂಭವನೀಯ ಪರಿಹಾರಗಳು ವಿಷಯ ಕುರಿತ ಭಾಷಣ ಸ್ಪರ್ಧೆಯಲ್ಲಿ ಅನುಕ್ರಮವಾಗಿ ಶ್ವೇತಾ ಗಿಟ್ಟೆ, ಚಂದ್ರಕಲಾ ಎಲ್, ಶ್ವೇತಾ ಅರಳಿ ಮೂರು ನಗದು ಬಹುಮಾನಗಳನ್ನು ಪಡೆದುಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.