ಕನ್ನಡ-ಸಂಸ್ಕೃತಿ ಸಮ್ಮೇಳನಕ್ಕೆ ಡಾ ಶ್ರೀನಿವಾಸ ರಿತ್ತಿ ಅಧ್ಯಕ್ಷ
ಹಾವೇರಿ: ಅಖಿಲ ಕರ್ನಾಟಕ ಕನ್ನಡ ಸಂಸ್ಕೃತಿ ಸಮ್ಮೇಳನದ 17 ಸಮ್ಮೇಳನಾಧ್ಯಕ್ಷರಾಗಿ ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ಮತ್ತು ಶಾಸನಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಹಾಗೂ ಶಾಸನ ತಜ್ಞ ಡಾ ಶ್ರೀನಿವಾಸ ರಿತ್ತಿ ಆಯ್ಕೆಯಾಗಿದ್ದಾರೆ ಎಂದು ಕವಿವಿ ಕನ್ನಡ ಅಧ್ಯಯನ ಪೀಠದ ಅಧ್ಯಕ್ಷೆ ಡಾ ಮಧು ವೆಂಕಾರೆಡ್ಡಿ ತಿಳಿಸಿದರು.
ಇಲ್ಲಿನ ವಾರ್ತಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1997ರಿಂದ ಕವಿವಿ ಕನ್ನಡ ಅಧ್ಯಯನ ಪೀಠದಿಂದ ಸಂಸ್ಕೃತಿ ಸಮ್ಮೇಳನಗಳನ್ನು ರಾಜ್ಯಾದ್ಯಂತ ಹಾಗೂ ಹೊರ ರಾಜ್ಯಗಳಲ್ಲೂ ಆಯೋಜಿಸುತ್ತಲೇ ಬರಲಾಗಿದೆ. ಈ ಸಮ್ಮೇಳನದಲ್ಲಿ ಕನ್ನಡ-ಸಾಹಿತ್ಯ, ಸಂಸ್ಕೃತಿ, ದೇವಾಲಯಗಳು, ಭಾಷೆ, ಬುಡಕಟ್ಟು ಸಂಸ್ಕೃತಿ ಅಧ್ಯಯನ, ಗಡಿಯಾಚೆಯ ಕರ್ನಾಟಕ, ಕನ್ನಡ ಹಾಗೂ ಅಲ್ಲಿನ ಸಂಸ್ಕೃತಿಗಳ ಕುರಿತಂತೆ ಬೆಳಕು ಚೆಲ್ಲುವಲ್ಲಿ ಈ ಸಮ್ಮೇಳನ ಯಶಸ್ವಿಯಾಗಿದೆ.
ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷೆ, ಸಾಹಿತ್ಯ, ದೇಸೀಯ ಚಿಂತನೆ, ವಿಮರ್ಶೆ, ಮಹಿಳಾ ಸಾಹಿತ್ಯ ಹಾಗೂ ಸಂಸ್ಕೃತಿಗಳ ಕುರಿತಂತೆ ಚಿಂತನೆಗಳು ಸಾಗಿ ಬಂದಿವೆ ಎಂದರು.
ಕವಿವಿಯ ಡಾ ಆರ್.ಸಿ. ಹಿರೇಮಠ ಅಧ್ಯಯನ ಪೀಠ ಹಾಗೂ ಹಾವೇರಿಯ ಕವಿವಿ ರಾಜೀವಗಾಂಧಿ ಸ್ನಾತಕೋತ್ತರ ಕೇಂದ್ರ, ಕೆರಿಮತ್ತಿಹಳ್ಳಿ ಆಶ್ರಯದಲ್ಲಿ ಮಾ. 9 ಹಾಗೂ 10ರಂದು 17ನೇ ಸಂಸ್ಕೃತಿ ಸಮ್ಮೇಳನ ಕವಿವಿ ಸ್ನಾತಕೋತ್ತರ ಕೇಂದ್ರದ ಆವರಣದಲ್ಲಿ ಜರುಗಲಿದೆ ಎಂದರು.
9ರಂದು ಬೆಳಗ್ಗೆ 9ಕ್ಕೆ ಸಮ್ಮೇಳನಾಧ್ಯಕ್ಷರ ಸಾಂಪ್ರದಾಯಿಕ ಮೆರವಣಿಗೆ ಸ್ನಾತಕೋತ್ತರ ಕೇಂದ್ರದ ಆವರಣದಿಂದ ಕೇಂದ್ರದವರೆಗೆ ಜರುಗಲಿದೆ. ಮಾಜಿ ಸಚಿವ ಸಿ.ಎಂ. ಉದಾಸಿ ಉದ್ಘಾಟಿಸುವರು. ಕವಿವಿ ಕುಲಪತಿ ಡಾ. ಎಚ್.ಬಿ. ವಾಲಿಕಾರ ಅಧ್ಯಕ್ಷತೆ ವಹಿಸುವರು. ಸ್ನಾತಕೋತ್ತರ ಕೇಂದ್ರದ ಆಡಳಿತಾಧಿಕಾರಿ ಟಿ.ಎಂ. ಭಾಸ್ಕರ ಉಪಸ್ಥಿತರಿರುವರು.
ಮಧ್ಯಾಹ್ನ 12ಕ್ಕೆ ತಿರುಳ್ಗನ್ನಡ ನಾಡು- ಐತಿಹಾಸಿಕ ಪರಿಸರ ಎಂಬ ವಿಷಯ ಕುರಿತಂತೆ ಗೋಷ್ಠಿ ಜರುಗಲಿದೆ. ಡಾ ಈರಣ್ಣ ಪತ್ತಾರ ಅಧ್ಯಕ್ಷತೆ ವಹಿಸುವರು. ಭೌಗೋಳಿಕ ಪರಿಸರ ಕುರಿತಂತೆ ಡಾ. ಎಂ.ಜಿ. ಮಂಜುನಾಥ, ಆಡಳಿತ ವಿಭಾಗ- ಡಾ ಅಪ್ಪಣ್ಣ ಹಂಜೆ, ರಾಜಕೀಯ ಚರಿತ್ರೆ - ಡಾ ಈರಣ್ಣ ಪತ್ತಾರ ಮಾತನಾಡುವರು. ಮಧ್ಯಾಹ್ನ 2ಕ್ಕೆ ತಿರುಳ್ಗನ್ನಡ ನಾಡು- ಧಾರ್ಮಿಕ ಪರಿಸರ ಕುರಿತಂತೆ ಡಾ ಭೋಜರಾಜ ಪಾಟೀಲ ಅಧ್ಯಕ್ಷತೆಯಲ್ಲಿ 2ನೇ ಗೋಷ್ಠಿ ಜರುಗಲಿದೆ. ಡಾ ಧನವಂತ ಹಾಜವಗೋಳ, ಡಾ ಪಂಡಿತ ರಾಠೋಡ, ಡಾ ಶ್ರೀನಿವಾಸ ಪಾಡಿಗಾರ ಉಪನ್ಯಾಸ ನೀಡುವರು.
ಸಂಜೆ 5.30ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. 10ರಂದು ತಿರುಳ್ಗನ್ನಡ ನಾಡು- ಭಾಷೆ, ಸಾಹಿತ್ಯ ಕುರಿತಂತೆ ಡಾ ಶಾಂತಿನಾಥ ದಿಬ್ಬದ ಅಧ್ಯಕ್ಷತೆಯಲ್ಲಿ 3ನೇ ಗೋಷ್ಠಿ ಬೆಳಗ್ಗೆ 10ಕ್ಕೆ ಜರುಗಲಿದೆ. ಡಾನಂಜುಂಡಸ್ವಾಮಿ, ಡಾ ಮುದೇನೂರ ನಿಂಗಪ್ಪ ಪಾಲ್ಗೊಳ್ಳುವರು. ಮಧ್ಯಾಹ್ನ 12ಕ್ಕೆ ತಿರುಳ್ಗನ್ನಡ ನಾಡು- ಸಾಮಾಜಿಕ ಪರಿಸರ ಕುರಿತಂತೆ ಡಾ ಷಡಕ್ಷರಯ್ಯ ಅಧ್ಯಕ್ಷತೆಯಲ್ಲಿ ಶಾಂತಾ ಇಮ್ರಾಪುರ, ಹನುಮಾಕ್ಷಿ ಗೋಗಿ ಉಪನ್ಯಾಸ ನೀಡುವರು.
ಮಧ್ಯಾಹ್ನ 3ಕ್ಕೆ ಸಮಾರೋಪ ಸಮಾರಂಭ ಜರುಗಲಿದೆ. ಅತಿಥಿಗಳಾಗಿ ಕವಿವಿ ಕುಲಸಚಿವ ಡಾ. ಜಿ.ಬಿ. ನಂದನ ಆಗಮಿಸುವರು. ನಮಾರೋಪ ನುಡಿಯನ್ನು ಮೈಸೂರು ವಿವಿಯ ಪ್ರಾಧ್ಯಾಪಕ ಡಾ ಎನ್.ಎಸ್. ತಾರಾನಾಥ ನುಡಿಯಲಿದ್ದಾರೆ. ಕನ್ನಡ ಅಧ್ಯಯನ ಪೀಠದ ಅಧ್ಯಕ್ಷೆ ಡಾ ಮಧು ವೆಂಕಾರೆಡ್ಡಿ ಅಧ್ಯಕ್ಷತೆ ವಹಿಸುವರು ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಮ್ಮೇಳನ ಕಾರ್ಯಾಧ್ಯಕ್ಷ ಡಾ ಜೆ.ಎಂ. ನಾಗಯ್ಯ, ಕಾರ್ಯದರ್ಶಿ ಡಾ ಕೃಷ್ಣಾ ನಾಯಕ, ಸ್ನಾತಕೋತ್ತರ ಕೇಂದ್ರದ ಆಡಳಿತಾಧಿಕಾರಿ ಡಾ. ಟಿ.ಎಂ. ಭಾಸ್ಕರ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

