ಹಾವೇರಿ

ಶಿವಲಿಂಗ ಶ್ರೀ ಶೈಕ್ಷಣಿಕ ಚಿಂತನೆ ದಾರಿದೀಪ

Published On :

ಹಾವೇರಿ: ಹುಕ್ಕೇರಿಮಠದ ಶಿವಲಿಂಗ ಶ್ರೀಗಳು ತನ್ನ ಜೀವಿತಾವಧಿಯಲ್ಲಿ ಸಾಹಿತ್ಯಿಕ, ಆಧ್ಯಾತ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕಾರ್ಯಗಳೊಂದಿಗೆ ಅಭಿವೃದ್ದಿ ಪರ ಚಿಂತನೆ ನಡೆಸುತ್ತಿದ್ದುದು ನಮಗೆ ದಾರಿದೀಪ. ರಕ್ತದಾನ ಶಿಬಿರದ ಮೂಲಕ ಅವರ ಜಯಂತಿ ಆಚರಣೆ ನಿಜಕ್ಕೂ ಅರ್ಥಪೂರ್ಣ ಮತ್ತು ಸಾರ್ಥಕತೆ ತಂದುಕೊಟ್ಟಿದೆ ಎಂದು ಹುಕ್ಕೇರಿಮಠದ ಸದಾಶಿವ ಶ್ರೀಗಳು ಸಂತಸ ವ್ಯಕ್ತಪಡಿಸಿದರು.
ಶಿವಲಿಂಗ ಶ್ರೀಗಳ 96ನೇ ಜಯಂತಿ ಅಂಗವಾಗಿ ಶ್ರೀಮಠದ ವಿವಿಧ ಅಂಗ ಸಂಸ್ಥೆ ಹಾಗೂ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಗಳು ಹಾಗೂ ಮಹಿಳಾ ಮಹಾವಿದ್ಯಾಲಯದ ವಾರ್ಷಿಕ ಚಟುವಟಿಕೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಮಹಿಳಾ ಮಹಾವಿದ್ಯಾಲಯದ ನೂತನ ಪ್ರಯೋಗಾಲಯ ಉದ್ಘಾಟಿಸಿದ ಗುರುಸಿದ್ದೇಶ್ವರ ಶ್ರೀಗಳು ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಬಂದಿದೆ. ಅಲ್ಲದೇ ಮಹಿಳೆಯರ ಉನ್ನತ ಶಿಕ್ಷಣಕ್ಕೆ ಶ್ರೀಮಠ ಒತ್ತು ನೀಡಿರುವುದು ಮಾದರಿ.
ಮಹಾತ್ಮರ ತತ್ವ ಅಳವಡಿಸಿಕೊಳ್ಳಿ: ಆದರ್ಶ ವ್ಯಕ್ತಿಗಳ ಜೀವನ ಮಾದರಿಗಳನ್ನು ಅನುಸರಿಸಿ ಅವರು ತೋರಿದ ಮಾರ್ಗದಲ್ಲಿ ನಡೆದು ಬದುಕನ್ನು ಸಾರ್ಥಕಪಡಿಸಿಕೊಳ್ಳುವುದು ನಮ್ಮೇಲ್ಲರ ಜವಾಬ್ದಾರಿ. ಉಸಿರು ಹೋಗುವ ಮುನ್ನವೇ ಹೆಸರು ಚಿರಸ್ಥಾಯಿಯಾಗಿಸಿಕೊಂಡ ಮಹಾತ್ಮರನ್ನು ನೆನೆದು ಬಾಳನ್ನು ಹಸನು ಮಾಡಿಕೊಳ್ಳುವಂತೆ ಸಲಹೆ ಮಾಡಿದರು.
ಸಮಸ್ಯೆ ಸವಾಲಾಗಿ ಸ್ವೀಕರಿಸಿದವನೆ ಜಯಶಾಲಿ: ಕವಿವಿ ಮನಃಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ೤ ವಿಜಯಲಕ್ಷ್ಮೀ ಅಮ್ಮಿನಬಾವಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಎಲ್ಲರಲ್ಲೂ ಸಕಾರಾತ್ಮಕ ಆಲೋಚನೆಗಳು ಬರಬೇಕಿದೆ. ಪ್ರಚೋದಕ ಶಕ್ತಿ ಇಲ್ಲದೇ ಪ್ರಚೋದನೆ ಬರಲು ಸಾಧ್ಯವಿಲ್ಲ.
ಶ್ರೀಮಠದ ಸ್ವಾಮೀಜಿಯ ಆಧ್ಯಾತ್ಮ ಶಕ್ತಿಯ ಪ್ರಚೋದಕತೆಯ ಬಲದಿಂದ ಇಲ್ಲಿ ಏನೆಲ್ಲಾ ಅಭಿವೃದ್ಧಿ ಸಾಧಿಸಲು ಸಾಧ್ಯವಾಗಿದೆ. ದಿನನಿತ್ಯದ ಆಲೋಚನೆಗಳು ಉತ್ತಮವಾಗಿರಬೇಕು. ಸಮಸ್ಯೆಗಳನ್ನು ಸವಾಲುಗಳಾಗಿ ಸ್ವೀಕರಿಸಿದವನೇ ನಿಜವಾದ ಜಯಶಾಲಿ ಎಂದರು. ಇದೇ ಸಂದರ್ಭ ಇಜಾರಿಲಕಮಾಪುರದ ಶಿಕ್ಷಣ ತಜ್ಞ ಮಾಳಗಿ ಮಾಲತೇಶ್ವರ ಅವರನ್ನೂ ಸನ್ಮಾನಿಸಲಾಯಿತು. ಬಳಿಕ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದ ವಿದ್ಯಾರ್ಥಿನಿಯರನ್ನು ಪುರಸ್ಕರಿಸಿ, ಗೌರವಿಸಲಾಯಿತು. ವಿದ್ಯಾಪೀಠದ ಚೇರಮನ್ ಪಿ.ಡಿ. ಶಿರೂರು, ಸದಸ್ಯರಾದ ವೀರಣ್ಣ ಅಂಗಡಿ, ಎಸ್.ಎಸ್. ಹುರಳಿಕುಪ್ಪಿ, ಸಿ.ವಿ. ಅಂಗಡಿ, ಶಿವಯೋಗಿ ವಾಲಿಶೆಟ್ಟರ್, ಇತರರು ಉಪಸ್ಥಿತರಿದ್ದರು. ಪ್ರಾಚಾರ್ಯೆ ಡಾ೤ ಸವಿತಾ ಹಿರೇಮಠ ಪ್ರಾಸ್ತಾವಿಕ ಮಾತನಾಡಿದರು. ಪುನೀತಾ ಹಿರೇಮಠ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಪುಷ್ಪಾ ಶೆಲವಡಿಮಠ ನಿರ್ವಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.