ಗುಣಾತ್ಮಕ ಮೌಲ್ಯ ಅಳವಡಿಸಿಕೊಳ್ಳಿ: ಪ್ರಕಾಶನಂದಶ್ರೀ
ಹಿರೇಕೆರೂರು: ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರಿಗೆ ಗೌರವದ ಸ್ಥಾನವಿದೆ. ಬಹು ಜನ್ಮಗಳ ಪುಣ್ಯದ ಫಲದಿಂದ ಶಿಕ್ಷಕರಾಗಲು ಸಾದ್ಯವಿದೆ. ಶಿಕ್ಷಕರ ವರ್ತನೆ ವಿದ್ಯಾರ್ಥಿಗಳ ಮೇಲೆ ಗಂಭೀರ ಪರಿಣಾಮ ಬೀಳುವ ಇಂದಿನ ದಿನಗಳಲ್ಲಿ ಶಿಕ್ಷಕರು ಗುಣಾತ್ಮಕ ಮೌಲ್ಯಗಳನ್ನು ಅಳವಡಿಸಿಕೊಂಡು ಆದರ್ಶ ರೂಢಿಸಿಕೊಳ್ಳಬೇಕೆಂದು ರಾಣಿಬೆನ್ನೂರಿನ ರಾಮಕೃಷ್ಣಾಶ್ರಮದ ಪ್ರಕಾಶನಂದ ಶ್ರೀಗಳು ಕರೆ ನೀಡಿದರು.
ಪಟ್ಟಣದ ಗುರುಭವನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯಗಳ ಆಶ್ರಯದಲ್ಲಿ ಆಯೋಜಿಸಿದ್ದ ಮೌಲ್ಯ ಶಿಕ್ಷಣ ಮತ್ತು ವ್ಯಕ್ತಿತ್ವ ವಿಕಸನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ವೃತ್ತಿ ಬದ್ಧತೆ ಇರಲಿ: ಆಧುನಿಕ ತಂತ್ರಜ್ಞಾನದ ಇಂದಿನ ದಿನಗಳಲ್ಲಿ ವಿಜ್ಞಾನಿ, ಎಂಜಿನೀಯರ, ಸೈನಿಕ, ವೈದ್ಯರನ್ನು ನಿರ್ಮಿಸುವಲ್ಲಿ ಶಿಕ್ಷಕರ ಪಾತ್ರ ಅಮೋಘವಾಗಿದೆ. ಶಿಕ್ಷಣ ಕ್ಷೇತ್ರ ಸಮಾಜಕ್ಕೆ ಅದ್ಬುತ ಕೊಡುಗೆ ನೀಡಿದೆ. ಶಿಕ್ಷಕರು ವಿನಯಪೂರ್ವಕವಾಗಿ ವೃತ್ತಿಯನ್ನು ಪ್ರೀತಿಸುವ ಮೂಲಕ ಬೋಧನೆ ಮಾಡಿದಾಗ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯ. ಕಾರಣ ವೃತ್ತಿ ಬದ್ಧತೆ ರೂಢಿಸಿಕೊಂಡು ಸನ್ಮಾರ್ಗದಲ್ಲಿ ಸಮಾಜ ಮುನ್ನಡೆಸುವಂತೆ ತಿಳಿಸಿದರು.
ಧೈರ್ಯ, ಸೌಜನ್ಯತೆ ಅಗತ್ಯ: ಡಿಡಿಪಿಐ ಎಸ್.ಬಿ. ಕೊಡ್ಲಿ ಗುರುಕಾರುಣ್ಯ ಕವನ ಸಂಕಲನ ಬಿಡುಗಡೆಗೊಳಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಶಿಕ್ಷಕರಿಗೆ ಹಲವಾರು ತರಬೇತಿ ನೀಡುವ ಮೂಲಕ ಅವರಲ್ಲಿ ಧೈರ್ಯ, ಸಾಹಸ, ಸೌಜನ್ಯಗಳನ್ನು ಮೂಡಿಸಲಾಗುತ್ತಿದೆ.
ಮಾನವೀಯ ಮೌಲ್ಯ ಬೆಳೆಸಿ: ಗುರುಗಳು ತಮ್ಮ ಮನದಾಳದಲ್ಲಿರುವ ಇಂಗಿತವನ್ನು ವರ್ರ್ಗದ ಕೊಠಡಿಗಳಲ್ಲಿ ಬಿತ್ತುವ ಮೂಲಕ ಮಕ್ಕಳಲ್ಲಿ ಉತ್ತಮ ವ್ಯಕ್ತಿತ್ವ ಹಾಗೂ ಸಾಮಾಜಿಕ ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು ಎಂದರು. ಸರಳ ಜೀವನ, ಉದಾತ್ತ ವಿಚಾರ, ಆದರ್ಶ ಶಿಕ್ಷಕರ ಮೂಲ ಬದ್ಧತೆಗಳಾಗಬೇಕು. ಪ್ರಭಾವಯುವ ಬೋಧನೆಯ ಶಿಕ್ಷಕ ಸಮಾಜದ ಬದಲಾವಣೆಯ ಹರಿಕಾರ ಎಂದರು.
ನಿವೃತ್ತರಾದ ಶಿಕ್ಷಣ ಸಂಯೋಜಕ ಎಚ್.ವೈ. ಪೂಜಾರ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಅತಿಥಿಗಳಾಗಿ ಡಯಟ್ ಪ್ರಾಚಾರ್ಯ ಎಂ.ಡಿ. ಬಳ್ಳಾರಿ, ಬಿಇಓ ಎಂ.ಸಿ. ಆನಂದ, ಸಮನ್ವಯಾಧಿಕಾರಿ ಎನ್. ಸುರೇಶಕುಮಾರ, ಎಂ.ಆರ್. ಮಕಾಂದಾರ, ಆರ್.ಎಸ್. ಗೊಂಬಿ, ಅಕ್ಷರ ದಾಸೋಹ ಅಧಿಕಾರಿ ಟಿ.ಆರ್. ಮೂಡಿ, ಬಿ.ಪಿ. ಬಿದರಿ, ಎಚ್.ಎಂ. ಗೋಣಗೇರಿ, ಸಿ.ಎಸ್. ಬಿದರಿ ಇತರರು ಉಪಸ್ಥಿತರಿದ್ದರು. ಶಿಕ್ಷಣ ಸಂಯೋಜಕ ಎಂ.ಎಸ್. ದೀವಿಗಿಹಳ್ಳಿ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

