ಹೆದ್ದಾರಿ ಅಗಲೀಕರಣ, ಆಸ್ಪತ್ರೆ ಮೇಲ್ದರ್ಜೆಗೇರಿಸಿ
ರಾಣಿಬೆನ್ನೂರು: ತಾಲೂಕಿನ ತುಮ್ಮಿನಕಟ್ಟಿ ಗ್ರಾಮದಲ್ಲಿ ಹಾದು ಹೋಗಿರುವ ಹಲಗೇರಿ-ಹುಲಿಕಲ್ಲ ರಾಜ್ಯ ಹೆದ್ದಾರಿ ಅಗಲಿಕರಣ ಮತ್ತು ತುಮ್ಮಿನಕಟ್ಟಿ ಸಾರ್ವಜನಿಕ ಆಸ್ಪತ್ರೆ ಮೇಲ್ದರ್ಜೆಗೇರಿಸುವಂತೆ ಆಗ್ರಹಿಸಿ ಸ್ವಾಭಿಮಾನಿ ಕರವೇ ಗ್ರಾಮ ಘಟಕ ಹಾಗೂ ತಾಲೂಕು ಘಟಕ ಕಾರ್ಯಕರ್ತರು ಗ್ರಾಪಂ ಕಾರ್ಯಾಲಯದ ಎದುರು ಧರಣಿ ನಡೆಸಿದರು.
ಗ್ರಾಮದ ದುರ್ಗಾದೇವಿ ದೇವಸ್ಥಾನ ಬಳಿ ಸೇರಿದ್ದ ಸ್ವಾಭಿಮಾನಿ ಕರವೇ ಮತ್ತು ವಿವಿಧ ಸಂಘ-ಸಂಸ್ಧೆಗಳ ಕಾರ್ಯಕರ್ತರು ದೇವಸ್ಧಾನದಿಂದ ಗ್ರಾಪಂವರೆಗೆ ಪ್ರತಿಭಟನೆ ನಡೆಸಿ ಗ್ರಾಪಂ ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಗ್ರಾಮ ಪಂಚಾಯ್ತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಸ್ವಾಭಿಮಾನಿ ಕರವೇ ತಾಲೂಕಾಧ್ಯಕ್ಷ ಸಿದ್ದಾರೂಢ ಗುರಂ ಮಾತನಾಡಿ, ತಾಲೂಕಿನಿಂದ 24 ಕಿಮಿ ದೂರದ ತುಮ್ಮಿನಕಟ್ಟಿ ತಾಲೂಕಿನಲ್ಲೇ ದೊಡ್ಡ ಗ್ರಾಮ. ಗ್ರಾಮದಲ್ಲಿ ಹಾದು ಹೋಗಿರುವ ಹಲಗೇರಿ-ಹುಲಿಕಲ್ಲ ರಾಜ್ಯ ಹೆದ್ದಾರಿ ಅಗಲಿಕರಣವಾಗಬೇಕು. ಈ ಕುರಿತಂತೆ ಕಳೆದ 3 ವರ್ಷಗಳಿಂದ ಲೋಕೋಪಯೋಗಿ ಮಾಜಿ ಸಚಿವ ಸಿ.ಎಂ. ಉದಾಸಿ ಅವರಿಗೆ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಈ ಕುರಿತಂತೆ ಗ್ರಾಪಂ ಸಹ ಸಹಮತ ವ್ಯಕ್ತಪಡಿಸಿ ಪತ್ರವನ್ನೂ ಸರ್ಕಾರಕ್ಕೆ ರವಾನಿಸಿದೆ. ಅಲ್ಲದೇ ಸಾರ್ವಜನಿಕ ಆಸ್ಪತ್ರೆ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಸ್ವಾಭಿಮಾನಿ ಕರವೇ ತುಮ್ಮಿನಕಟ್ಟಿ ಗ್ರಾಮ ಘಟಕದ ಅಧ್ಯಕ್ಷ ಮಡಿವಾಳಪ್ಪ ಮಡಿವಾಳರ ಮಾತನಾಡಿ, ಪಶು ಆಸ್ಪತ್ರೆ ಮೇಲ್ದರ್ಜೆಗೇರಿಸಬೇಕು, ಗ್ರಾಮದಲ್ಲಿ ಸಾರ್ವಜನಿಕ ಅನುಕೂಲಕ್ಕಾಗಿ ಮಹಿಳಾ ಹಾಗೂ ಪುರುಷ ಶೌಚಾಲಯ ಮತ್ತು ಮೂತ್ರಾಲಯಗಳನ್ನು ನಿರ್ಮಿಸಬೇಕೆಂದರು.
ಪ್ರತಿಭಟನೆಯಲ್ಲಿ ಗ್ರಾಮಸ್ದರಾದ ತಿಮ್ಮಣ್ಣ ವೆಂಕಣ್ಣನವರ, ಪರಸಪ್ಪ ಶೆಟ್ಟರ್, ಶಿವಕುಮಾರ ಗುರಂ, ಮೃತ್ಯುಂಜಯ ಈರಣ್ಣನವರ, ರಮೇಶ ಮಡಿವಾಳರ, ಕೊಟ್ರಪ್ಪ ಗಾಡಬಸಪ್ಪನವರ, ಬಸವರಾಜ ನೆಶ್ವಿ, ಇನ್ನಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

