ಹಾವೇರಿ

ಕಾವಲು ಸಮಿತಿಯಂತೆ ಕಾರ್ಯನಿರ್ವಹಣೆ: ಡಾ. ಜೆ.ಆರ್. ಗುಡಿ

Published On :

ಹಾವೇರಿ: ನಗರ ಸುಧಾರಣಾ ಸಮಿತಿ ಮೊದಲಿಗಿಂತ ಪ್ರಸಕ್ತ ಹೆಚ್ಚು ಸಕ್ರಿಯವಾಗಿದ್ದು, ನಗರದ ಅಭಿವೃದ್ಧಿ ಕುರಿತಂತೆ ಹಾಗೂ ನಗರಸಭೆ ಕಾರ್ಯವೈಖರಿಯನ್ನು ಸೂಕ್ತವಾಗಿ ಆಗಾಗ್ಗೆ ಪರಿಶೀಲಿಸಲು ಕಾವಲು ಸಮಿತಿಯಂತೆ ಕಾರ್ಯನಿರ್ವಹಿಸುವುದಾಗಿ ನಿರ್ಧರಿಸಲಾಗಿದೆ ಎಂದು ನಗರ ಸುಧಾರಣಾ ಸಮಿತಿ ಅಧ್ಯಕ್ಷ ಡಾ. ಜೆ.ಆರ್. ಗುಡಿ ತಿಳಿಸಿದರು.
ಈ ಕುರಿತಂತೆ ನಗರ ಸುಧಾರಣಾ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಚುನಾವಣಾ ನಂತರ ಮಾಡಬೇಕಾದ ಕ್ರಮಗಳ ಕುರಿತು ಚರ್ಚಿಸಲಾಯಿತು. ನಗರದ ನೈರ್ಮಲ್ಯ ಮತ್ತು ನೀರಿನ ವಿತರಣೆ ಹಾಗೂ ಬಹುತೇಕ ಭಾಗಗಳಲ್ಲಿ ಅಪೂರ್ಣವಾಗಿರುವ ರಸ್ತೆಗಳ ಬಗ್ಗೆ ನಗರಸಭೆಯ ಆಯುಕ್ತರು ಮತ್ತು ಆಡಳಿತಾಧಿಕಾರಿಗಳು ಗಮನ ಹರಿಸುವಂತೆ ಒತ್ತಾಯಿಸುವ ನಿರ್ಣಯ ಕೈಗೊಳ್ಳಲಾಯಿತು, ಚರಂಡಿ ಹಾಗೂ ರಸ್ತೆಗಳನ್ನು ಆಗಾಗ್ಗೆ ಸ್ವಚ್ಛಗೊಳಿಸುವುದು, ನೀರು ಪೂರೈಕೆ ಕುರಿತಂತೆ ಚರ್ಚಿಸಲಾಯಿತು.
ಬೇಸಿಗೆ ಆರಂಭವಾಗಿದ್ದು, ಕರ್ಜಗಿಯಲ್ಲಿ ಬ್ಯಾರೇಜ್ ಹತ್ತಿರದ ನೀರು ಬಹಳಷ್ಟು ಕಡಿಮೆಯಾಗಿದೆ ಮತ್ತು ಕಂಚಾರಗಟ್ಟಿ ಬಳಿಯ ಜಾಕ್‌ವೆಲ್‌ನ ಬಳಿ ಮರಳಿನ ಬಾಂದಾರು ಅಲ್ಲಲ್ಲಿ ಕಿತ್ತು ಹೋಗಿದ್ದು, ಹಾವೇರಿ ನಗರಕ್ಕೆ ಪೂರೈಕೆಯಾಗುವ ನೀರಿನ ಸಂಗ್ರಹ ದಿನೇ ದಿನೇ ಕಡಿಮೆಯಾಗುತ್ತಿದೆ.
ಹಾವೇರಿಯ ಜನ ನೀರಿಗಾಗಿ ಪರದಾಡುವ ಪ್ರಸಂಗ ಮತ್ತೆ ಎದುರಾಗಿದೆ. ಕಾರಣ ನಗರಾಯುಕ್ತರು ಮತ್ತು ಆಡಳಿತಾಧಿಕಾರಿಗಳು ತುರ್ತು ಕ್ರಮ ಕೈಗೊಂಡು ಹಾವೇರಿಯ ಜನರಿಗೆ ನೀರು ಪೂರೈಸಬೇಕೆಂದು ಸಭೆಯ ಮೂಲಕ ಒತ್ತಾಯಿಸಲಾಯಿತಲ್ಲದೆ, 15 ದಿನಗಳಲ್ಲಿ ಕಾರ್ಯಪ್ರವೃತ್ತರಾಗಿ ನಗರಕ್ಕೆ ಸಮರ್ಪಛಕವಾಗಿ ನದಿ ನೀರು ಪೂರೈಸಬೇಕು. ಇಲ್ಲದಿದ್ದಲ್ಲಿ ಜನಬೆಂಬಲದೊಂದಿಗೆ ಹಾವೇರಿ ಬಂದ್‌ಗೆ ಕರೆ ನೀಡಬೇಕಾಗುತ್ತದೆ ಎಂದು ನಗರಸಭೆಗೆ ಎಚ್ಚರಿಸಿದ್ದಾರೆ.
ಸಭೆಯಲ್ಲಿ ಎಂ.ಎಸ್. ಕೋರಿಶೆಟ್ಟರ್, ಡಾ. ಸತೀಶ ಪಂಡಿತ, ಟಿ.ಬಿ. ಕುಲಕರ್ಣಿ, ಎಂ.ಡಿ. ಪೂಜಾರ, ಗಣೇಶಣ್ಣ ಹೂಗಾರ, ನವೀನ ತೋಟಣ್ಣನವರ, ಕೃಷ್ಣಮೂರ್ತಿ ಕಳಂಜಿ ಮತ್ತು ಶಂಭುಲಿಂಗ ಹತ್ತಿ, ಇನ್ನಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.