ಸಮಾಜ ಸುಧಾರಣೆಯಿಂದ ಸದೃಢ ಭಾರತ
ಕನ್ನಡಪ್ರಭ ವಾರ್ತೆ, ಹಾವೇರಿ, ಮಾ. 18
ವಿದ್ಯಾರ್ಥಿ ಜೀವನದ ನಂತರ ಒಳ್ಳೆಯ ಉದ್ಯೋಗ ಪಡೆದು ಅಭಿವೃದ್ಧಿ ಹೊಂದುವುದಷ್ಟೇ ಅಲ್ಲದೆ ತಮ್ಮ ಸುತ್ತಲಿನ ಸಮಾಜವನ್ನು ಸಹ ಅಭಿವೃದ್ಧಿಪಡಿಸಿದಾಗ ಮಾತ್ರ ಸದೃಢ ಭಾರತ ನಿರ್ಮಾಣ ಸಾಧ್ಯ ಎಂದು ವಿದ್ಯಾಪೋಷಕ ಜಿಲ್ಲಾ ಸಂಯೋಜಕ ನಾಗರಾಜ ಗಡಗಿ ಅಭಿಪ್ರಾಯಪಟ್ಟರು.
ಇಲ್ಲಿನ ವಿದ್ಯಾಪೋಷಕ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ವಿದ್ಯಾಪೋಷಕ ಬಳಗ ಕಾರ್ಯಕ್ರಮದಲ್ಲಿ ಪದವಿ ಕೊನೆಯ ಹಂತದ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಇಂದಿನ ವಿದ್ಯಾರ್ಥಿಗಳೇ ನಾಳಿನ ನಾಯಕರು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಇಂದಿನಿಂದಲೇ ನಾಯಕತ್ವ ಗುಣಗಳನ್ನು ಅಳವಡಿಸಿಕೊಳ್ಳಬೇಕು ಹಾಗೂ ಗಳಿಸಬೇಕು ಎಂದರು.
ವಿದ್ಯಾಪೋಷಕದ ಅಧಿಕಾರಿ ರತ್ನಾ ಹಿಪ್ಪರಗಿ ಮಾತನಾಡಿ, ಸಂದರ್ಶನ ಎದುರಿಸುವ ಕಲೆ, ಪದವಿಯ ನಂತರದ ಅವಕಾಶಗಳ ಬಗ್ಗೆ ಅಲ್ಲದೇ ವಿದ್ಯಾಪೋಷಕದಿಂದ ಸಹಾಯ ಪಡೆದ ವಿದ್ಯಾರ್ಥಿಗಳು ನಂತರದಲ್ಲಿ ವಿದ್ಯಾಪೋಷಕಕ್ಕೆ ಯಾವ ರೀತಿ ಸೇವೆ ಸಲ್ಲಿಸಬಹುದು ಎಂಬ ಬಗ್ಗೆ ವಿವರಿಸಿದರು.
ವಿದ್ಯಾಪೋಷಕದ ಹಳೆಯ ವಿದ್ಯಾರ್ಥಿ ಗಣೇಶ ವಲ್ಲಮದಾಸರ ಮಾತನಾಡಿ, ಪದವಿ ನಂತರ ತಾವು ಸಂದರ್ಶನಗಳನ್ನು ಎದುರಿಸಿದ ಬಗ್ಗೆ ತಮಗೆ ವಿದ್ಯಾಪೋಷಕದಿಂದ ಆದ ಸಹಾಯದ ಬಗ್ಗೆ ಅಲ್ಲದೇ ತಾವು ಈಗ ವಿದ್ಯಾಪೋಷಕಕ್ಕೆ ಮಾಡುತ್ತಿರುವ ಸಹಾಯದ ಬಗೆಯನ್ನು ವಿವರಿಸಿದರು.
ಸಂತೋಷ ಮಾತನವರ ಸ್ವಾಗತಿಸಿದರು. ಪ್ರಕಾಶ ಹೊಸಮನಿ ನಿರ್ವಹಿಸಿ, ವಂದಿಸಿದರು. ಸ್ವಯಂಸೇವಕರಾದ ಪ್ರೊ. ನಂದರಗಿ, ಪ್ರೊ. ದೊಡ್ಡಮನಿ, ಹೊನ್ನಪ್ಪ ಬಾರಕೇರ, ನಾಗರಾಜ, ಶಿಲ್ಪಾ ಕಂಠಿ ಮೊದಲಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

