ಹಾವೇರಿ

ಗೊಂಬೆಗೌಡರ ಕಲೆ ಕೊಂಡಾಡಿದ ಜಾನಪದ ಅಕಾಡೆಮಿ ಅಧ್ಯಕ್ಷ ಡಾ. ಬಾನಂದೂರು ಕೆಂಪಯ್ಯ

Published On :

ರಾಣಿಬೆನ್ನೂರು: ಸುಮಾರು 450 ವರ್ಷಗಳಷ್ಟು ಹಳೆಯದಾದ ಹಾಗೂ ನಾಡಿನ ಇತಿಹಾಸ ಪರಂಪರೆ ಮೂಲವೆಂದು ಕರೆಯಲ್ಪಡುವ ಸೂತ್ರದ ಗೊಂಬೆಯಾಟವನ್ನು 106 ವರ್ಷಗಳ ಕಾಲ ದೇಶ, ವಿದೇಶಗಳಲ್ಲಿ ಪ್ರದರ್ಶಿಸುತ್ತ ಕಲೆ ಉಳಿವಿಗಾಗಿ ಜೀವವನ್ನೇ ಮುಡಿಪಾಗಿಟ್ಟಿರುವ ಅಂತರವಳ್ಳಿ ಗ್ರಾಮದ ಗೊಂಬೆಗೌಡರ ಮನೆತನದ ಹೆಸರನ್ನು ಗಿನ್ನಿಸ್ ಪುಸ್ತಕಕ್ಕೆ ಸೇರಿಸಬೇಕೆಂದು ಸರ್ಕಾರಕ್ಕೆ ಪತ್ರ ಬರೆಯುವುದಾಗಿ ರಾಜ್ಯ ಜಾನಪದ ಅಕಾಡೆಮಿ ಅಧ್ಯಕ್ಷ ಡಾ. ಬಾನಂದೂರು ಕೆಂಪಯ್ಯ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ರ್ನಾಟಕ ಜಾನಪದ ಅಕಾಡೆಮಿ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಸೂತ್ರದ ಗೊಂಬೆ ಕಲಾವಿದರಾದ ತಾಲೂಕಿನ ಅಂತರವಳ್ಳಿ ಗ್ರಾಮದ ದಿ. ಹನುಮನಗೌಡ ರಾಮನಗೌಡ ಜೀವನಗೌಡ್ರ ಜನ್ಮ ಶತಮಾನೋತ್ಸವ ನಿಮಿತ್ತ ಅಂತರವಳ್ಳಿ ಗ್ರಾಮದ ಬಯಲು ರಂಗಮಂದಿರದಲ್ಲಿ ಬುಧವಾರ ಏರ್ಪಡಿಸಿದ್ದ ಜಿಲ್ಲಾ ಜಾನಪದ ಕಲಾಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹನುಮನಗೌಡ ಕಲೆಗೆ ಮೆಚ್ಚುಗೆ ಭಾರತ ಇತಿಹಾಸ ಪರಂಪರೆ ಹಾಗೂ ಕಲಾ ಸಂಸ್ಕೃತಿಯನ್ನು ನಾಡಿನ ಜನರಿಗೆ ತಿಳಿಸುವ ಪುರಾತನ ಕಲೆಗಳಲ್ಲೊಂದಾದ ಹಾಗೂ 450 ವರ್ಷಗಳಷ್ಟು ಹಳೆಯ ಗೊಂಬೆಯಾಟದ ಕಲೆಯನ್ನು ಇದುವರೆಗೂ ಜೀವತಂವಾಗಿರಿಸಿಕೊಂಡಿರುವ ಅಂತರವಳ್ಳಿ ಗ್ರಾಮದ ಹನುಮನಗೌಡ ರಾಮನಗೌಡ ಜೀವನಗೌಡ್ರ ಕಲೆ ಪ್ರದರ್ಶಿಸಿ ತಮ್ಮ ಮನೆತನದ ಹೆಸರೇ ಗೊಂಬೆಗೌಡರ ಮನೆತನವೆಂಬ ಹೆಸರು ಬರಲು ಕಾರಣರಾಗಿರುವುದು ಶ್ಲಾಘನಿಯ ಎಂದರು.
ಕಲಾವಿದರು, ವಾದ್ಯ ಖರೀದಿಗೆ ಧನಸಹಾಯ: ದೇಶದ ಬೊಂಬೆಯಾಟ ಪರಂಪರೆ ಉಳಿಸಿ ಬೆಳೆಸುವ ಸೂತ್ರದ ಗೊಂಬೆಯಾಟ ಕಲೆಗೆ ಜೀವನವನ್ನೇ ಮುಡಿಪಾಗಿಟ್ಟು, ಸಾರ್ಥಕ ಸೇವೆ ಸಲ್ಲಿಸುತ್ತಿರುವ ಜೀವನಗೌಡರ ಹೆಸರನ್ನು ಗಿನ್ನಿಸ್ ಪುಸ್ತಕದಲ್ಲಿ ಸೇರ್ಪಡೆಗೊಳಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ನಾಡಿನ ಕಲೆ ಉಳಿಸಿ ಬೆಳೆಸುವ ಕಲಾವಿದರು ಬಳಸುವ ಚರ್ಮ ವಾದ್ಯಗಳ ಖರೀದಿ, ಕಲಾವಿದರಿಗೆ ಅಕಾಡೆಮಿಯಿಂದ ದನ ಸಹಾಯ ಮಾಡುವುದಾಗಿ ಡಾ. ಬಾನಂದೂರು ಕೆಂಪಯ್ಯ ತಿಳಿಸಿದರು.
ಹಿರೇಕೆರೂರು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಹೇಮರಡ್ಡಿ ಮುದಿರಡ್ಡೇರ ಅಧ್ಯಕ್ಷತೆ ವಹಿಸಿದ್ದರು. ಗೊಂಬೆಗೌಡರೆಂದೇ ಖ್ಯಾತಿ ಪಡೆದಿರುವ ಹನುಮನಗೌಡ ಜೀವನಗೌಡರ ವ್ಯಕ್ತಿತ್ವದ ಕುರಿತು ಡಾ. ಆರ್.ಎಂ. ಕುಬೇರಪ್ಪ, ಜೀವನಗೌಡರ ಮನೆತನದಿಂದ ದೇಶಾದ್ಯಂತ ಗೊಂಬೆ ಪ್ರದರ್ಶನ ಕುರಿತಂತೆ ನಿವೃತ್ತ ಶಿಕ್ಷಕ ಲಿಂಗರಾಜ ಕಮ್ಮಾರ ಮಾತನಾಡಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸದಸ್ಯ ಸೋಮನಗೌಡ ಹಾದೀಮನಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾ ಸಹಾಯಕ ನಿರ್ದೇಶಕಿ ಶಶಿಕಲಾ ಹುಡೇದ, ಅಕಾಡೆಮಿ ರಜಿಸ್ಟ್ರಾರ್ ಬಿ.ಎನ್. ಪರಡ್ಡಿ ಇತರರು ಉಪಸ್ಥಿತರಿದ್ದರು. ಗೊಂಬೆಯಾಟದ ಕಲಾವಿದೆ ಭಾಗೀರಥಿ ಜೀವನಗೌಡ್ರ, ಆರ್.ಎಚ್. ಜೀವನಗೌಡ್ರ ಹಾಗೂ ರಾಜ್ಯ ಪ್ರಶಸ್ತಿ ವಿಜೇತ ಕಲಾವಿದರನ್ನು ಸನ್ಮಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.