ಮಕ್ಕಳ ಕಲಿಕೆಗೆ ಉತ್ತಮ ವಾತಾವರಣ ಕಲ್ಪಿಸಿ
ಹಾವೇರಿ: ಮಕ್ಕಳ ಕಲಿಕೆಗೆ ಶಾಲಾ ಆವರಣದಲ್ಲಿ ಕಂಗೊಳಿಸುವ ಕೈತೋಟದ ವಾತಾವರಣ ಇದ್ದಾಗ ಕಲಿಕೆ ಇನ್ನೂ ಹೆಚ್ಚು ಅಚ್ಚುಮೆಚ್ಚಿನದಾಗುವುದು. ಅಂತಹ ವಾತಾವರಣಕ್ಕೆ ಪೂರಕವಾಗಿ ಸರ್ವ ಶಿಕ್ಷಣ ಅಭಿಯಾನ ಸಾಕಷ್ಟು ಅನುದಾನ ನೀಡಿದ್ದು, ಅದರ ಸದುಪಯೋಗವನ್ನು ಶಾಲೆಗಳು ಮಾಡಿಕೊಳ್ಳಬೇಕೆಂದು ಜಿಲ್ಲಾ ಶಿಕ್ಷಕರ ತರಬೇತಿ ಕೇಂದ್ರದ ಪ್ರಾಂಶುಪಾಲ ಎಮ್.ಡಿ. ಬಳ್ಳಾರಿ ಹೇಳಿದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾಡಳಿತ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಮಂಗಳವಾರ ಜಿಲ್ಲಾ ಗುರುಭವನದಲ್ಲಿ ಜರುಗಿದ ಜಿಲ್ಲಾ ಪರಿಸರ ಮಿತ್ರ ಶಾಲೆ-2013 ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಒಂದು ಗಿಡ ಕಡಿದರೆ ಅದರಿಂದಾಗುವ ನಷ್ಟದ ಅರಿವು ನಮ್ಮಲ್ಲಿರಬೇಕು ಹಾಗೂ ಮಕ್ಕಳಲ್ಲಿಯೂ ಆರಂಭದಲ್ಲಿಯೇ ಇಂತಹ ಪರಿಸರ ಶಿಕ್ಷಣವನ್ನು ಶಿಕ್ಷಕರು ಮತ್ತು ಪಾಲಕರು ನೀಡಬೇಕೆಂದು ತಿಳಿಸಿದರು.
ನೈಸರ್ಗಿಕ ಸಂಪತ್ತು ಉಳಿಸಿ: ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ ಈ. ಪ್ರಕಾಶರವರು, ಪ್ರಕೃತಿದತ್ತವಾಗಿ ಸಿಕ್ಕ ನೀರು, ಖನಿಜ, ಇಂಧನ, ವಿದ್ಯುತ್ ಯಥೇಚ್ಛ ಬಳಕೆಯಿಂದಾಗಿ ಅವಸಾನದ ಸ್ಥಿತಿಗೆ ಬಂದು ನಿಂತಿದ್ದೇವೆ. ಕಾರಣ ಪರಿಸರ ಸ್ನೇಹಿಯಾಗಿ ಪ್ರಕೃತಿ ಕಾಪಾಡುವ ದಿಶೆಯಲ್ಲಿ ಯೋಚಿಸಬೆಕಾಗಿದೆ ಎಂದರು.
ಮರಗಳನ್ನು ರಕ್ಷಿಸಿ: ಮುಖ್ಯ ಅತಿಥಿ ಪರಿಸರವಾದಿ ಮಾಧುರಿ ದೇವಧರ ಮಾತನಾಡಿ, ಒಂದು ಗಿಡ ನೆಟ್ಟರೆ ಮುಂದೊಂದು ದಿನ ಅಲ್ಲೊಂದು ಸಂಸ್ಕೃತಿ ನಿರ್ಮಾಣವಾಗುತ್ತದೆ. ಜನರಿಗೆ ನೆರಳು, ಹಕ್ಕಿಗಳಿಗೆ ತಾಣ, ಹಣ್ಣು ಹಂಪಲಗಳನ್ನು ನೀಡುವ ಮರ ನಿಜವಾದ ಅರ್ಥದಲ್ಲಿ ಕಲ್ಪವೃಕ್ಷ. ಗಿಡಗಳು ಮಕ್ಕಳಿದ್ದಂತೆ ಅವುಗಳ ಲಾಲನೆ-ಪಾಲನೆಯನ್ನು ಮಕ್ಕಳಂತಯೇ ಮಾಡಬೇಕೆಂದರು. ಪ್ರಶಸ್ತಿ ಪುರಸ್ಕೃತ ಶಾಲೆಗಳ ಸಾಧನೆಗಳನ್ನು ಚಿತ್ರ ಸಹಿತ ಪರಿಚಯಿಸುವ ಕನಸು-ನನಸು ಎಂಬ ಸಚಿತ್ರ ಕಿರುಪುಸ್ತಕವನ್ನು ಮಾಧುರಿ ದೇವಧರ ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಪರಿಸರ ಮಿತ್ರ ಪ್ರಶಸ್ತಿ ಪುರಸ್ಕೃತ ಶಾಲೆ ಸುಧಾರಣಾ ಸಮಿತಿ ಅಧ್ಯಕ್ಷ ಎಸ್.ಬಿ. ಬಂಕಾಪುರ, ಸದಸ್ಯರಾದ ಬಸನಗೌಡ ಪಾಟೀಲ್, ಸುಭಾಷ ಅರಳೇಶ್ವರ, ಮುದ್ದಪ್ಪ ಬಾಣದ, ಮಂಜು ಅರಳೇಶ್ವರ, ಮಲ್ಲೇಶ ಕೂಡ್ಲೇರ, ಈರಯ್ಯ ಹಿರೇಮಠ ಹಾಗೂ ಶಾಲೆ ಮುಖ್ಯಾಧ್ಯಾಪಕ ಜಗದೀಶ ಗೂಳಿಯವರ ಇದ್ದರು.
ಪರಿಸರ ಮಿತ್ರ ಶಾಲಾ ಆಯ್ಕೆ ಸಮಿತಿ ಸದಸ್ಯ ಹನುಮಂತಗೌಡ ಗೊಲ್ಲರ ಆಯ್ಕೆ ವಿಧಾನ ಮತ್ತು ಪ್ರಕ್ರಿಯೆಗಳ ಕುರಿತು ಪ್ರಾಸ್ತಾವಿಕ ಮಾತನಾಡಿದರು. ಸಮಾರಂಭದಲ್ಲಿ ಜಿಲ್ಲೆಯ 21 ಶಾಲೆಗಳ ಆಯ್ದ ಶಿಕ್ಷಕರು, ಮಕ್ಕಳು ಹಾಗೂ ಶಾಲಾ ಸುಧಾರಣಾ ಸಮಿತಿ ಸದಸ್ಯರು ಭಾಗವಹಿಸಿದ್ದರು.
ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಸ್ವಾಗತಿಸಿದರು. ನಾಗರಾಜ ನಡುವಿನಮಠ ನಿರೂಪಿಸಿದರು. ಶಿವಾನಂದ ದೊಡ್ಡಮನಿ ಪರಿಚಯಿಸಿದರು. ಮುತ್ತುರಾಜ ಮಾದರ ವಂದಿಸಿದರು.
2012-13ನೇ ಸಾಲಿನ ಜಿಲ್ಲೆಯ ಅತ್ಯುತ್ತಮ ಪರಿಸರ ಮಿತ್ರ ಶಾಲೆಯಾಗಿ ಹಾನಗಲ್ ತಾಲೂಕು ಗಡೆಗುಂಡಿಯಲ್ಲಾಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಪಡೆಯಿತು. ಉಳಿದಂತೆ ಜಿಲ್ಲೆಯ 10 ಶಾಲೆಗಳಿಗೆ ಹಸಿರು ಮಿತ್ರ ಹಾಗೂ 10 ಶಾಲೆಗಳಿಗೆ ಕಿತ್ತಳೆ ಶಾಲೆಗಳೆಂದು ಪ್ರಶಸ್ತಿ ಪ್ರದಾನ ಮಾಡಲಾಯಿತು.
2012-13ನೇ ಸಾಲಿನ ಪ್ರಶಸ್ತಿ ಪಡೆದ ಶಾಲೆಗಳು
ಹಸಿರು ಮಿತ್ರ ಶಾಲೆಗಳು
ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ, ಕಳಗೊಂಡ
ಎಸ್‌ಎಸ್‌ಎಸ್ ಕಾಲೇಜು ಪ್ರೌಢಶಾಲೆ ವಿಭಾಗ, ಸುಣಕಲ್ಲಬಿದರಿ
ಎಸ್‌ಬಿಎಚ್‌ವಿ ಗ್ರಾಮೀಣ ಪ್ರೌಢಶಾಲೆ, ಮಲ್ಲೂರ
ಎಸ್‌ವಿಆರ್‌ಪಿ ಸರ್ಕಾರಿ ಪ್ರೌಢಶಾಲೆ, ಕಾಡಶೆಟ್ಟಿಹಳ್ಳಿ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.1, ಕುರುಬಗೊಂಡ
ಎಸ್.ಎಂ. ಪ್ರೌಢಶಾಲೆ, ಬಿಲ್ಲಹಳ್ಳಿ
ಸರ್ಕಾರಿ ಪ್ರೌಢಶಾಲೆ, ಕಬ್ಬೂರು
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಾಳಂಬೀಡ
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಕೋಡಿಯಲ್ಲಾಪುರ
ರೆನ್‌ಬೋ ರೆಸಿಡೆನ್ಸಿಯಲ್ ಪಬ್ಲಿಕ್ ಸ್ಕೂಲ್, ಕಮದೊಡ
ಎಸ್‌ಬಿಎಚ್ ಪ್ರೌಢಶಾಲೆ, ಆಣೂರು
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೀರನಕೊಪ್ಪ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಚಂದಾಪುರ
ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ, ಇಬ್ರಾಹಿಂಪುರ
ಸರ್ಕಾರಿ ಉನ್ನತೀಕರಿಸಿದ ಪ್ರೌಢಶಾಲೆ, ಚಲ್ಲಾಳ
ಸಿಎಫ್‌ಜಿ ಪ್ರೌಢಶಾಲೆ, ಕಬನೂರು
ಕೆಎಲ್‌ಇ ಸೊಸೈಟಿ ಇಂಗ್ಲಿಷ್ ಮೀಡಿಯಂ ಸ್ಕೂಲ್, ಹಾವೇರಿ
ಗ್ರಾಮೀಣ ಕನ್ನಡ ಹಿರಿಯ ಪ್ರಾಥಮಿಕ ಶಾಲೆ,ಮಾಕನೂರ
ಎಸ್‌ಎಸ್ ಪ್ರೌಢಶಾಲೆ, ರಟ್ಟಿಹಳ್ಳಿ
ರೋಶನಿ ಹಿರಿಯ ಪ್ರಾಥಮಿಕ ಶಾಲೆ, ಹಾನಗಲ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

