ಹಾವೇರಿ

ಪಂ. ಪುಟ್ಟರಾಜರ ಆದರ್ಶ ಸ್ಮರಣೀಯ

Published On :

ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಮಾ. 25
ನಾಡಿನ ಸಾವಿರಾರು ಅಂಧ ಮಕ್ಕಳನ್ನು ಗುರುತಿಸಿ ಅವರ ಬಾಳಿಗೆ ಬೆಳಕು ಚಲ್ಲಿದವರು ಡಾ. ಪುಟ್ಟರಾಜ ಗವಾಯಿಗಳು. ತಮ್ಮ ಬದುಕಿನವಧಿಯನ್ನು ಸಂಪೂರ್ಣವಾಗಿ ಅಂಧರ ಕಣ್ಣಾಗಿ ಬಾಳಿದರು. ಅವರ ಆದರ್ಶ ಎಂದಿಗೂ ಸ್ಮರಣೆನಿಯವಾಗಿದೆ ಎಂದು ಗದಗ ವೀರಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಹೇಳಿದರು.
ತಾಲೂಕಿನ ಬಂಕಾಪುರ ಪಟ್ಟಣದ ಸರ್ಕಾರಿ ಪದವಿ ಕಾಲೇಜಿನ ಹತ್ತಿರದ ಮುರಘೇಂದ್ರ ಯಲಿಗಾರ ಆವರಣದಲ್ಲಿ ಇತ್ತೀಚೆಗೆ ನಡೆದ ಲಿಂ. ಡಾ. ಪಂಡಿತ ಪುಟ್ಟರಾಜರ 99ನೇ ಜಯಂತಿ ಹಾಗೂ ಸಂಗೀತ ಉತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಡಾ. ಪಂ. ಪುಟ್ಟರಾಜರಿಗೆ ಸಿಗಬೇಕಾದ ಭಾರತ ರತ್ನ ಪ್ರಶಸ್ತಿ ನೀಡಲಿಲ್ಲ. ಅದರಿಂದ ಭಕ್ತ ಸಮೂಹಕ್ಕೆ ನಿರಾಸೆಯಾಗಿದೆ. ಸರ್ಕಾರ ನಿಜವಾದ ಸಮಾಜ ಸೇವಕರನ್ನು ಗುರುತಿಸಿ ಭಾರತ ರತ್ನ ಪ್ರಶಸ್ತಿ ನೀಡುತ್ತಿಲ್ಲ ಎಂದರು.
ಆಸ್ತಿ-ಅಂತಸ್ತುಗಳನ್ನು ನೋಡಿ ಪ್ರಶಸ್ತಿ-ಪುರಸ್ಕಾರಗಳನ್ನು ನೀಡುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಅರಳೆಲೆ ಹಿರೇಮಠದ ರೇವಣಸಿದ್ದೇಶ್ವರ ಶ್ರೀಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ನಿಜವಾದ ಅಂಶ ತಿಳಿಯಲು ಬಹಳಷ್ಟು ಸಮಯ ಬೇಕು. ಹೀಗಾಗಿ ಡಾ. ಪುಟ್ಟರಾಜರ ಸೇವೆಯನ್ನು ಸರ್ಕಾರ ಗುರುತಿಸಲು ಸಾಧ್ಯವಾಗಿಲ್ಲ ಎಂದು ಹೇಳಿದರು.
ಆದರೆ, ಪ್ರತಿಯೊಬ್ಬ ಮನುಷ್ಯನ ಮನದಾಳದ ಪ್ರಶಸ್ತಿ-ಪುರಸ್ಕಾರ ನೀಡಿ ಗೌರವಿಸಿದ್ದಾರೆ ಎಂದರು.
ಬಂಕಾಪುರ ಕಂಡದಮಠದ ಸಿದ್ದಯ್ಯ ಸ್ವಾಮೀಜಿಗಳು ಸಾನ್ನಿಧ್ಯ ವಹಿಸಿದ್ದರು. ನಾಟಕ ಅಕ್ಯಾಡೆಮಿ ಪ್ರಶಸ್ತಿ ಪುರಸ್ಕೃತ ಮಾತಾಂಡಪ್ಪ ಕತ್ತಿ ಉಪನ್ಯಾಸ ನೀಡಿದರು. ಪುರಸಭೆ ಸದಸ್ಯರಾದ ಅಯೂಬಖಾನ್ ಪಠಾಣ, ಬಸವರಾಜ ಕಟ್ಟಿಮನಿ, ಎಸ್.ಬಿ. ಗಚ್ಚಿನಮಠ, ಮಲ್ಲೇಶಪ್ಪ ಬಡ್ಡಿ, ಇಸ್ಮಾಯಿಲ್ ದೊಡ್ಡಮನಿ, ಮುರಘೇಂದ್ರ ಯಲಿಗಾರ, ಶೇಖಣ್ಣ ಹಸನಾಬಾದಿ, ನೀಲಪ್ಪ ಸಣ್ಣಕ್ಕಿ, ಶಿವಪ್ಪ ಅಳವಂಡಿ, ಗದಗಯ್ಯ ಹಿರೇಮಠ, ಧರ್ಮಣ್ಣ ಮಾಲದಿನ್ನಿ, ರವಿ ಹಿರೇಮಠ, ಅಕ್ಕಮ್ಮಾ ಹಿರೇಮಠ, ನಾಗರಾಜ ಗಾಳೆಮ್ಮನವರ, ಬಸವರಾಜ ಕುರಗೋಡಿ, ಮಂಜು ಭಜಂತ್ರಿ, ರಾಮನಗೌಡ ಪಾಟೀಲ ಉಪಸ್ಥಿತರಿದ್ದರು.
ಅಂಧಕಲಾವಿದ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹನುಮಂತಪ್ಪ ತಿಮ್ಮಾಪುರ ಸಂಗಡಿಗರು ಸಂಗೀತ ಸೇವೆ ಸಲ್ಲಿಸಿದರು. ವಿವಿಧ ಕ್ಷೇತ್ರದಲ್ಲಿ ಸಾಧನಗೈದ ವ್ಯಕ್ತಿಗಳನ್ನು ಸನ್ಮಾನಿಸಲಾಯಿತು.

ನಿವೃತ್ತ ಶಿಕ್ಷಕ ಸಿ.ಎನ್. ಶಿಗ್ಗಾಂವಿ ನಿರೂಪಿಸಿ, ವಂದಿಸಿದರು.
ಪಂ. ಪುಟ್ಟರಾಜರಿಗೆ ಸಿಗಬೇಕಾದ ಭಾರತರತ್ನ ಪ್ರಶಸ್ತಿ ನೀಡಲಿಲ್ಲ. ಭಕ್ತ ಸಮೂಹಕ್ಕೆ ನಿರಾಸೆಯಾಗಿದೆ. ಸರ್ಕಾರ ನಿಜವಾದ ಸಮಾಜ ಸೇವಕರನ್ನು ಗುರುತಿಸಿ ಭಾರತರತ್ನ ಪ್ರಶಸ್ತಿ ನೀಡುತ್ತಿಲ್ಲ. ಆಸ್ತಿ-ಅಂತಸ್ತುಗಳನ್ನು ನೋಡಿ ಪ್ರಶಸ್ತಿ-ಪುರಸ್ಕಾರಗಳನ್ನು ನೀಡುತ್ತಿದೆ.
ಕಲ್ಲಯ್ಯಜ್ಜ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.