ಶಿರಹಟ್ಟಿ ಶ್ರೀಗಳ 655ನೇ ತುಲಾಭಾರ
ಶಿಗ್ಗಾಂವಿ: ಧಾರ್ಮಿಕ ಪರಂಪರೆಯನ್ನು ಹೊಂದಿದ ಸಂಸ್ಥಾನ ಮಠಕ್ಕೆ ಭಕ್ತರ ಸಮೂಹ ಅವಶ್ಯ. ಕುನ್ನೂರ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಭಕ್ತರನ್ನು ಆಶೀರ್ವದಿಸಿ, ದುಶ್ಚಟಗಳನ್ನು ತಮ್ಮ ಜೋಳಿಗೆಗೆ ಹಾಕಿಸಿಕೊಂಡು, ಸನ್ಮಾರ್ಗದತ್ತ ಮುನ್ನಡೆಸಲು ಮಾರ್ಗದರ್ಶನ ನೀಡುವಂತೆ ಕರ್ತೃ ಜಗದ್ಗುರುಗಳಾದ ಫಕೀರೇಶ್ವರರು ಆಶೀರ್ವದಿಸಿದ್ದಾರೆ ಎಂದು 13ನೇ ಪಟ್ಟಾಧ್ಯಕ್ಷರಾದ ಜಗದ್ಗುರು ಶ್ರೀ ಫಕೀರ ಸಿದ್ದರಾಮ ಮಹಾಸ್ವಾಮಿಗಳು ಹೇಳಿದರು. ತಾಲೂಕಿನ ಕುನ್ನೂರು ಗ್ರಾಮದ ವ್ಯವಸಾಯ ಸಹಕಾರಿ ಬ್ಯಾಂಕ್ ಅಧ್ಯಕ್ಷ ನಿಲಕಂಠಗೌಡ ಬ್ಯಾಹಟ್ಟಿ ಅವರ ನಿವಾಸದಲ್ಲಿ ಜರುಗಿದ ಶಿರಹಟ್ಟಿ ಸಂಸ್ಥಾನಮಠದ 13ನೇ ಪಟ್ಟಾದ್ಯಕ್ಷ, ಭಾವೈಕ್ಯ ಜಗದ್ಗುರು ಶ್ರೀ ಮನ್ಮಹರಾಜ ನಿರಂಜನ ಜಗದ್ಗುರು ಶ್ರೀ ಫಕೀರಸಿದ್ದರಾಮ ಮಹಾಸ್ವಾಮಿಗಳ 655ನೇ ತುಲಾಭಾರ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಭಕ್ತ ಸಮೂಹದ ಕಾಣಿಕೆಯಿಂದ ಮಾತ್ರ ಶಿರಹಟ್ಟಿ ಸಂಸ್ಥಾನಮಠದ ವಿವಿಧ ಕಟ್ಟಡಗಳು ಹಾಗೂ ಪೂರ್ಣ ಪ್ರಮಾಣದಲ್ಲಿ ಮಠದ ಪುನರುತ್ಥಾನ ಮಾಡಲಾಗುತ್ತಿದೆ ಎಂದರು.
ಕಲ್ಲೂರ ಗ್ರಾಮದ ಸಿದ್ದರಾಮೇಶ್ವರ ಶಾಸ್ತ್ರಿಗಳು ಹಾಗೂ ಎಲ್.ಆರ್. ಪಾಟೀಲ ಪ್ರಾಸ್ತಾವಿಕ ಮಾತನಾಡಿದವರು. ಹಿರಿಯರಾದ ಸಿ.ವಿ. ಮತ್ತಿಗಟ್ಟಿ ಸ್ವಾಗತಿಸಿದರು.ಜಿಪಂ ಮಾಜಿ ಉಪಾಧ್ಯಕ್ಷ ಎನ್.ಸಿ. ಪಾಟೀಲ, ಶಿವಯ್ಯ ಸ್ವಾಮಿಗಳು ಹಿರೇಮಠ, ಉದ್ಯಮಿಗಳಾದ ಜಯದೇವ ಅಗಡಿ, ಎಲಿವಾಳದ ಶ್ರೀಕಂಠಗೌಡ ಪಾಟೀಲ, ಶಶಿಧರಗೌಡ್ರ ಪಾಟೀಲ, ಶಿದ್ರಾಮಗೌಡ್ರ ಪಾಟೀಲ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

