ಹಾವೇರಿ

ನಮ್ಮ ಸಂಸ್ಕೃತಿ ರಕ್ಷಿಸಲು ಸ್ತ್ರೀಗೆ ಶಿಕ್ಷಣ ಅವಶ್ಯ

Published On :

ಕನ್ನಡಪ್ರಭ ವಾರ್ತೆ, ಹಾವೇರಿ, ಮಾ. 28
ಜಾಗತೀಕರಣದ ಪ್ರಭಾವದಿಂದ ನಾಶವಾಗುತ್ತಿರುವ ನಮ್ಮ ಸಂಸ್ಕೃತಿ, ಮಾನವೀಯ ಮೌಲ್ಯಗಳನ್ನು ರಕ್ಷಿಸಲು ಸ್ತ್ರೀಗೆ ಶಿಕ್ಷಣ ಅವಶ್ಯ ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಇಲಾಖೆ ಉಪನಿರ್ದೇಶಕಿ ಚನ್ನಮ್ಮ ಹೊಳೆಹೊಸೂರ ಹೇಳಿದರು.
ಇಲ್ಲಿನ ಬಸವೇಶ್ವರ ನಗರದ ಮಹಿಳಾ ನಾಗರಿಕ ವೇದಿಕೆಯಿಂದ ಕವಿತಾ ಸ್ವಾಮಿ ಅವರ ನಿವಾಸದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆ ತನ್ನ ಉಳಿವಿಗೆ, ಆತ್ಮಗೌರವ ಕಾಪಾಡಿಕೊಳ್ಳಲು ಸಂಘಟಿತಳಾಗಬೇಕು. ಆರ್ಥಿಕ ಸಬಲತೆಯೊಂದಿಗೆ ಕಾನೂನಿನ ಅರಿವು ಕೂಡಾ ಅಗತ್ಯ ಎಂದರು.
ಹೇಮಾ ಸಜ್ಜನರ ಮಾತನಾಡಿ, ಮಹಿಳೆ ಜಾಗೃತಳಾಗಬೇಕು. ಅನ್ಯಾಯ, ಅತ್ಯಾಚಾರ, ದೌರ್ಜನ್ಯ ತಡೆಯುವ ದಿಸೆಯಲ್ಲಿ ಸ್ವಾಭಿಮಾನ, ನೈತಿಕತೆ, ಸ್ವಯಂರಕ್ಷಣೆಗೆ ಆವಶ್ಯಕ ಜ್ಞಾನ ಪಡೆಯಬೇಕೆಂದು ಹೇಳಿದರು.
ಮಹಿಳಾ ನಾಗರಿಕ ವೇದಿಕೆ ಅಧ್ಯಕ್ಷೆ ರಾಜೇಶ್ವರಿ ಭಿಷ್ಟನಗೌಡರ ಮಾತನಾಡಿ, ಇಂದು ಮಹಿಳೆ ಎಲ್ಲ ಕ್ಷೇತ್ರಗಳಲ್ಲೂ ತನ್ನ ಪ್ರತಿಭೆ ಪ್ರದರ್ಶಿಸುತ್ತಿದ್ದಾಳೆ. ಅವಳಿಗೆ ಸೂಕ್ತ ನೆರವು, ಸಹಕಾರ, ಸ್ವಾತಂತ್ರ್ಯ ಬೇಕಾಗಿದೆ ಎಂದು ಹೇಳಿದರು.
ಜಿಲ್ಲಾ ಮಹಿಳಾ ಮತ್ತು ಮಕ್ಕಳ ಇಲಾಖೆ ಉಪನಿರ್ದೇಶಕಿ ಚನ್ನಮ್ಮ ಹೊಳೆಹೊಸೂರ, ಮಹಿಳಾ ನಾಗರಿಕ ಮಾಜಿ ಅಧ್ಯಕ್ಷೆ ಸರೋಜಿನಿ ಬನ್ನೂರು, ಬಾಲ ಪ್ರತಿಭೆ ಪ್ರಿಯಾಂಕ ಕಾಶೆಟ್ಟಿ, ಹೇಮಾ ಸಜ್ಜನರ ಅವರನ್ನು ಗೌರವಿಸಲಾಯಿತು.
ಪ್ರಿಯಾಂಕಾ ಕಾಶೆಟ್ಟಿ ಕನ್ನಡಾಂಬೆ ಸ್ತುತಿಸುವ ಕಥಕ್ಕಳಿ ನೃತ್ಯ ಪ್ರದರ್ಶಿಸಿದರು. ಅರುಣಾ ಬಾಲೆಹೊಸೂರು, ಗೀತಾ ಚಿಕ್ಕಮಠ, ತೇಜಸ್ವಿನಿ ಕಾಶೆಟ್ಟಿ, ಭಾರತಿ ಯಾವಗಲ್ಲ, ಸುರೇಖಾ ನೆರಳೇಕರ, ಶಶಿಕಲಾ ಅಕ್ಕಿ, ಜಯಶ್ರೀ ಪಾಟೀಲ, ರೇಣುಕಾ ಗುಡಿಮನಿ, ಶಿಲ್ಪಾ ಕುಂದೂರ, ಸುಷ್ಮಾ ಜೋಶಿ, ಕವಿತಾ ಮಠದ ಇದ್ದರು. ಕಸ್ತೂರಿ ರಿತ್ತಿ, ಸಂಜನಾ ಜೋಷಿ ಪ್ರಾರ್ಥಿಸಿದರು. ನಾಗರತ್ನಾ ಹುಬ್ಬಳ್ಳಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.