ಹಾವೇರಿ

ನಾಳೆ ದತ್ತಿ ಉಪನ್ಯಾಸ ಕಾರ್ಯಕ್ರಮ

Published On :

ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ಮಾ. 28
ಚನ್ನಪ್ಪ ಕುನ್ನೂರ, ಗಿಡ್ಡಪ್ಪ ಹಂಚಿನಮನಿ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮ ಕಸಾರ ಜಿಲ್ಲಾ, ತಾಲೂಕು ಘಟಕಗಳ ಆಶ್ರಯದಲ್ಲಿ ಚನ್ನಪ್ಪ ಕುನ್ನೂರು ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಮಾ. 30ರ ಬೆಳಗ್ಗೆ 10ಕ್ಕೆ ಜರುಗಲಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ ಹಾವೇರಿ ಜಿಲ್ಲಾಧ್ಯಕ್ಷ ಜಿ.ಬಿ. ಮಾಸಣಗಿ ಅಧ್ಯಕ್ಷತೆ ವಹಿಸುವರು. ಮಾಜಿ ಸಂಸದ ಮಂಜುನಾಥ ಕುನ್ನೂರ ಉದ್ಘಾಟಿಸುವರು.
ಅತಿಥಿಗಳಾಗಿ ಸ್ನೇಹಲತಾ ಕುನ್ನೂರು, ಗುತ್ತಿಗೆದಾರ ಅರ್ಜುನ ಹಂಚಿನಮನಿ, ಪ್ರಾಚಾರ್ಯ ನಾಗರಾಜ ದ್ಯಾಮನಕೊಪ್ಪ, ವೀರಣ್ಣ ಬಡ್ಡಿ, ಫಕ್ಕೀರಜ್ಜ ಯಲಿಗಾರ, ಪುರಸಭೆ ಸದಸ್ಯ ಭರಮಜ್ಜ ನವಲಗುಂದ, ಸಿ.ವಿ. ಮತ್ತಿಗಟ್ಟಿ, ವಿ.ವೈ. ಪಾಟೀಲ್, ಜಯಣ್ಣ ಹೆಸರೂರು ಆಗಮಿಸಲಿದ್ದಾರೆ.
ಜಾನಪದ ಸಾಹಿತ್ಯ ಮತ್ತು ಮಹಿಳೆ ಕುರಿತು ಸುಮಂಗಲಾ ಅತ್ತಿಗೇರಿ, ದಾಸ ಸಾಹಿತ್ಯ ಕುರಿತು ಮಂಜುಳಾ ಪಾಟೀಲ ಉಪನ್ಯಾಸ ನೀಡುವರು.
ವಿರೂಪಾಕ್ಷಪ್ಪ ಪಡಿಗೋದಿ, ಬಸವರಾಜ ಬಸರೀಕಟ್ಟಿ, ಪ್ರಭು ಹಲಗೇರಿ, ವಿಜಯಕುಮಾರ ಕಿಳ್ಳಿಕೇತರ, ಎಂ.ಎಂ. ಪಾಟೀಲ್, ಮಹಾಂತೇಶ ಹಿತ್ತಲಮನಿ, ಮಲ್ಲಪ್ಪ ರಾಮಗಿರ ಉಪಸ್ಥಿತರಿರುವರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.