ಹಾವೇರಿ

ಕವಿವಿ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಹೋಳಿ ಸಂಭ್ರಮ

Published On :

ಹಾವೇರಿ: ದಿನನಿತ್ಯದ ಪಾಠ ಪ್ರವಚನಗಳಿಂದ ಮನಸ್ಸಿಗೆ ಮುದ ನೀಡುವ ನಿಟ್ಟಿನಲ್ಲಿ ಕವಿವಿ ರಾಜೀವ ಗಾಂಧಿ ಸ್ನಾತಕೋತ್ತರ ಕೇಂದ್ರ ಶುಕ್ರವಾರ ಮಹತ್ವದ ಹೆಜ್ಜೆಯಿರಿಸಿ, ಶಾಲಾ ಆವರಣದಲ್ಲೇ ಹೋಳಿ ಆಚರಣೆಗೆ ಅವಕಾಶ ನೀಡುವ ಮೂಲಕ ವಿದ್ಯಾರ್ಥಿಗಳಲ್ಲಿ ಹಾಗೂ ಶಿಕ್ಷಕರಲ್ಲಿ ಹೊಸ ಚೈತನ್ಯ ತುಂಬಿತು. ಆಡಳಿತಾಧಿಕಾರಿ ಡಾ, ಟಿ.ಎಂ. ಭಾಸ್ಕರ ಮಾತನಾಡಿ, ನಮ್ಮ ಹಿರಿಯರು ಪ್ರತಿ ಹಬ್ಬಗಳಿಗೂ ವೈಜ್ಞಾನಿಕ ನೆಲೆಗಟ್ಟು ಹಾಗೂ ಧಾರ್ಮಿಕ ಚೌಕಟ್ಟನ್ನರಿಸಿರುವುದು ಭಾರತೀಯ ಸಂಸ್ಕೃತಿಗೆ ಹಿಡಿದ ಕನ್ನಡಿ. ಹೋಳಿ ಹಬ್ಬ ಶಿವನನ್ನು ಎಚ್ಚರಿಸಿದ ದ್ಯೋತಕ. ಕಾಮನನ್ನು ದಹಿಸಿ, ರತಿಗೆ ಮರೆವನ್ನು ನೀಡಿದ ಹಿನ್ನೆಲೆಯನ್ನು ಹೊಂದಿದೆ. ಬಣ್ಣಗಳು ಆಕಾಂಕ್ಷೆ, ಅಭೀಪ್ಸೆಗಳ ಚಿಂತನೆ ಹಾಗೂ ಗುರಿ ಉದ್ದೇಶಗಳ ಈಡೇರಿಕೆಯತ್ತ ಮಾನವ ತನ್ನ ಚಿತ್ತ ಕೇಂದ್ರೀಕರಿಸಲು ಸಹಾಯಕಾರಿಯಾಗಿವೆ. ಹೋಳಿ ದಿನ ಬಳಸುವ ವಿವಿಧ ಬಣ್ಣಗಳು ಮನಸ್ಸಿಗೆ ಕ್ಷೋಭೆಯನ್ನು ಹೊಡೆದೋಡಿಸಿ ಹೊಸ ಚೈತನ್ಯ, ಹುರುಪು ಭರವಸೆಯನ್ನು ಬದುಕಿಗೆ ತುಂಬಲಿ ಎಂದರು. ಉಪನ್ಯಾಸಕ ವೀರಬಸಯ್ಯ ಹಿರೇಮಠ ಮಾತನಾಡಿ, ಪ್ರಸ್ತುತ ಹೋಳಿ ತನ್ನ ಮೂಲ ಸೆಲೆ ಕಳೆದುಕೊಳ್ಳುತ್ತಿದೆ. ಗೊಂದಲ, ಗಲಾಟೆಗಳಿಗೆ ಕಾರಣವಾಗುತ್ತಿದೆ. ಈ ಬಗ್ಗೆ ಯುವ ಸಮುದಾಯದಲ್ಲಿ ಜಾಗೃತಿ ಮೂಡಬೇಕಿದೆ ಎಂದರು. ಉಪನ್ಯಾಸಕರು, ವಿದ್ಯಾರ್ಥಿಗಳು ಪರಸ್ಪರ ಬಣ್ಣ ಹಚ್ಚಿ ಸಂಭ್ರಮಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.