ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ: 5ನೇ ವರ್ಷ ಬ್ಯಾಡಗಿ ಮೇಲುಗೈ
ಬ್ಯಾಡಗಿ: ಎಸ್ಸೆಸ್ಸಲ್ಸಿ ಪರೀಕ್ಷೆಯಲ್ಲಿ ಶೇ. 90.95 ಫಲಿತಾಂಶ ಪಡೆಯುವ ಮೂಲಕ ಬ್ಯಾಡಗಿ ತಾಲೂಕು ಸತತ ಐದನೇ ಬಾರಿಗೆ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದೆ. ಕಳೆದ ವರ್ಷ ಶೇ. 90.63 ಇದ್ದ ಫಲಿತಾಂಶ ಈ ಬಾರಿ ಶೇ. 0.32ರಷ್ಟು ವೃದ್ಧಿಸಿದ್ದು ಗಮನಾರ್ಹ.
ತಾಲೂಕಿನಲ್ಲಿ 14 ಸರ್ಕಾರಿ, 15 ಖಾಸಗಿ ಅನುದಾನಿತ, 6 ಖಾಸಗಿ ಅನುದಾನರಹಿತ ಹಾಗೂ ಒಂದು ಮೊರಾರ್ಜಿ ದೇಸಾಯಿ ಸೇರಿದಂತೆ ಒಟ್ಟು 36 ಪ್ರೌಢಶಾಲೆಗಳಿವೆ.
ಈ ಪೈಕಿ ಐದು ಸರ್ಕಾರಿ ಹಾಗೂ 4 ಖಾಸಗಿ ಸೇರಿ ಒಂಭತ್ತು ಶಾಲೆಗಳು ಶೇ. 100 ಫಲಿತಾಂಶ ದಾಖಲಿಸಿವೆ. ಮೋಟೆಬೆನ್ನೂರಿನ ವಿ.ಬಿ. ಕಳಸೂರಮಠ, ಶಿಡೇನೂರಿನ ಎಸ್ಜಿಬಿಡಿ, ಬ್ಯಾಡಗಿಯ ಬಿಇಎಸ್, ಕಾಗಿನೆಲೆಯ ಕನಕದಾಸ ಖಾಸಗಿ ಪ್ರೌಢಶಾಲೆ, ಬುಡಪನಹಳ್ಳಿ, ಛತ್ರ, ಹಿರೇಹಳ್ಳಿ, ಹೆಡಿಗ್ಗೊಂಡ ಹಾಗೂ ಮತ್ತೂರ ಸರ್ಕಾರಿ ಪ್ರೌಢಶಾಲೆಗಳು ಶೇ. 100 ಫಲಿತಾಂಶದ ಸಾಧನೆ ಮಾಡಿವೆ. ಘಾಳಪೂಜಿ ಮಾರುತಿ ಪ್ರೌಢಶಾಲೆ ಕಡಿಮೆ ಫಲಿತಾಂಶ (ಶೇ. 66) ಪಡೆದಿದೆ.
ಈ ಬಾರಿಯೂ ಬಾಲಕಿಯರದೇ ಮೇಲುಗೈ. 951 ಬಾಲಕರು, 873 ಬಾಲಕಿಯರು ಸೇರಿ 1824 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದು, 845 ಬಾಲಕರು, 813 ಬಾಲಕಿಯರು ಸೇರಿ 1658 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಪ್ರಥಮ ಶ್ರೇಣಿಯಲ್ಲಿ 760 (324 ಗಂಡು, 436 ಹೆಣ್ಣು), ದ್ವಿತೀಯ ಶ್ರೇಣಿಯಲ್ಲಿ 444, ಹಾಗೂ ತೃತೀಯ ಶ್ರೇಣಿಯಲ್ಲಿ 454 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಸ್ಥಳೀಯ ಎಸ್ಎಸ್ಪಿಎನ್ ಪ್ರೌಢಶಾಲೆಯ ಸುಷ್ಮಿತಾ ಶಿಡೇನೂರ 592 (ಶೇ. 94.72) ಅಂಕ ಗಳಿಸಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದೆ.
ಮೋಟೆಬೆನ್ನೂರಿನ ನವೋದಯ ವಿದ್ಯಾಸಂಸ್ಥೆಯ ವಿ.ಬಿ. ಕಳಸೂರಮಠ ಪ್ರೌಢಶಾಲೆಯ ವೀಣಾ ಯತ್ನಳ್ಳಿ 588 (ಶೇ. 94.8) ಹಾಗೂ ವೀಣಾ ಬಣಕಾರ 586 (ಶೇ. 93.76) ಅಂಕ ಗಳಿಸಿದ್ದಾರೆ. ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಸಾಧಿಸಲು ಶ್ರಮಿಸಿದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಸನ್ನಕುಮಾರ ಅಭಿನಂದಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

