ದೇಸಾಯಿ ವಸತಿ ಶಾಲೆ: ಶೇ. 99.14 ಫಲಿತಾಂಶ
ಹಾವೇರಿ: ಜಿಲ್ಲೆಯ 12 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಎಸ್ಸೆಸ್ಸೆಲ್ಸಿ ಫಲಿತಾಂಶ ಶೇ. 99.14ರಷ್ಟಾಗಿದೆ. ಪರೀಕ್ಷೆಗೆ ಹಾಜರಾಗಿದ್ದ 467 ವಿದ್ಯಾರ್ಥಿಗಳಲ್ಲಿ 463 ಮಂದಿ ಉತ್ತೀರ್ಣರಾಗಿದ್ದಾರೆಂದು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಎಸ್.ಸಿ. ತಿರ್ಲಾಪುರ ತಿಳಿಸಿದ್ದಾರೆ.
ಸಾಧನೆಗೈದ ಶಾಲೆಗಳು: ಹಾವೇರಿ ತಾಲೂಕಿನ ನೆಗಳೂರ ಮೊರಾರ್ಜಿ ವಸತಿ ಶಾಲೆ ಫಲಿತಾಂಶ ಶೇ. 100. ಪರೀಕ್ಷೆಗೆ ಹಾಜರಾದ 50 ವಿದ್ಯಾರ್ಥಿಗಳು ಪಾಸಾಗಿದ್ದು, ಆ ಪೈಕಿ 20 ಉನ್ನತ ಶ್ರೇಣಿ, 27 ಪ್ರಥಮ, ಇಬ್ಬರು ದ್ವಿತೀಯ, ಒಬ್ಬರು ತೃತೀಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ.
ಹಾನಗಲ್ಲ ತಾಲೂಕು ಹಳ್ಳಿಬೈಲ ಶಾಲೆ ಫಲಿತಾಂಶ ಶೇ. 100ರಷ್ಟಾಗಿದೆ. ಪರೀಕ್ಷೆಗೆ ಹಾಜರಾದ 41 ವಿದ್ಯಾರ್ಥಿಗಳ ಪೈಕಿ 10 ಉನ್ನತ, 28 ಪ್ರಥಮ, ಇಬ್ಬರು ದ್ವಿತೀಯ, ಒಬ್ಬರು ತೃತೀಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ಮಾರನಬೀಡ ಶಾಲೆ ಫಲಿತಾಂಶ ಶೇ. 97. ಪರೀಕ್ಷೆಗೆ ಹಾಜರಾದ 30 ವಿದ್ಯಾರ್ಥಿಗಳ ಪೈಕಿ 29 ಮಂದಿ ಪಾಸಾಗಿದ್ದು, 15 ಪ್ರಥಮ, ಇಬ್ಬರು ದ್ವಿತೀಯ, ಒಬ್ಬರು ತೃತೀಯ ಸ್ಥಾನ ಗಳಿಸಿದ್ದಾರೆ.
ಬ್ಯಾಡಗಿ ತಾಲೂಕಿನ ಶಿಡೇನೂರ ಶಾಲೆ ಫಲಿತಾಂಶ ಶೇ. 97.3. ಪರೀಕ್ಷೆಗೆ ಹಾಜರಾದ 37 ವಿದ್ಯಾರ್ಥಿಗಳಲ್ಲಿ 36 ಜನ ಪಾಸಾಗಿದ್ದು, ಇಬ್ಬರು ಉನ್ನತ, 23 ಪ್ರಥಮ, 6 ದ್ವಿತೀಯ, ಐದು ವಿದ್ಯಾರ್ಥಿಗಳು ತೃತೀಯ ಸ್ಥಾನ ಪಡೆದಿದ್ದಾರೆ.
ಸವಣೂರು ಮೊರಾರ್ಜಿ ವಸತಿ ಶಾಲೆ ಫಲಿತಾಂಶ ಶೇ. 100. ಪರೀಕ್ಷೆಗೆ ಹಾಜರಾದ 47 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 11 ಉನ್ನತಶ್ರೇಣಿ, 29 ಪ್ರಥಮ, 6 ದ್ವಿತೀಯ, ಒಬ್ಬರು ತೃತೀಯ ಶ್ರೇಣಿ ಪಡೆದಿದ್ದಾರೆ.
ಹಾವೇರಿ ಶಾಲೆ ಫಲಿತಾಂಶ ಶೇ. 100. ಪರೀಕ್ಷೆಗೆ ಹಾಜರಾದ 37 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 8 ಉನ್ನತಶ್ರೇಣಿ, 22 ಪ್ರಥಮ, 5 ದ್ವಿತೀಯ, ಇಬ್ಬರು ವಿದ್ಯಾರ್ಥಿಗಳು ತೃತೀಯ ಶ್ರೇಣಿ ಪಡೆದಿದ್ದಾರೆ.
ರಾಣಿಬೆನ್ನೂರು ತಾಲೂಕಿನ ಮಾಕನೂರು ಶಾಲೆ ಫಲಿತಾಂಶ ಶೇ. 100. ಪರೀಕ್ಷೆಗೆ ಹಾಜರಾದ 35 ವಿದ್ಯಾರ್ಥಿಗಳಲ್ಲಿ ಇಬ್ಬರು ಉನ್ನತ ಶ್ರೇಣಿ, 27 ಪ್ರಥಮ, 3 ದ್ವಿತೀಯ, 3 ವಿದ್ಯಾರ್ಥಿಗಳು ಹಾನಗಲ್ಲ ತಾಲೂಕಿನ ಯಳವಟ್ಟಿ ಶಾಲೆ ಫಲಿತಾಂಶ ಶೇ. 95. ಪರೀಕ್ಷೆಗೆ ಹಾಜರಾದ 45 ವಿದ್ಯಾರ್ಥಿಗಳಲ್ಲಿ 43 ಮಂದಿ ಪಾಸಾಗಿದ್ದು, 1 ಉನ್ನತ, 19 ಪ್ರಥಮ, 17 ದ್ವಿತೀಯ, 6 ವಿದ್ಯಾರ್ಥಿಗಳು ತೃತೀಯ ಸ್ಥಾನ ಗಳಿಸಿದ್ದಾರೆ. ಶಿಗ್ಗಾಂವಿ ತಾಲೂಕು ಗಂಜಿಗಟ್ಟಿ ಶಾಲೆ ಫಲಿತಾಂಶ ಶೇ. 100ರಷ್ಟು ಫಲಿತಾಂಶ ಬಂದಿದೆ.
ಅಭಿನಂದನೆ: ಎಲ್ಲ ವಸತಿ ಶಾಲೆಗಳ ಮಕ್ಕಳ ಉತ್ತಮ ಸಾಧನೆಗೆ ಕಾರಣರಾದ ಶಿಕ್ಷಕರು, ಪ್ರೇರೇಪಿಸಿದ ಪಾಲಕರು, ಸಾಧನೆಗೈದ ವಿದ್ಯಾರ್ಥಿಗಳನ್ನು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಎಸ್.ಸಿ. ತಿರ್ಲಾಪುರ ಅಭಿನಂದಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

