ರಂಭಾಪುರಿ ಕಾಲೇಜಿಗೆ ಶೇ. 92 ಫಲಿತಾಂಶ
ಶಿಗ್ಗಾಂವಿ: ಇಲ್ಲಿಯ ಶ್ರೀ ರಂಭಾಪುರಿ ಜಗದ್ಗುರು ವೀರಗಂಗಾಧರ ಸ್ವತಂತ್ರ ಪಪೂ ಕಾಲೇಜಿನ ಪ್ರಸಕ್ತ ಸಾಲಿನ ಪಿಯುಸಿ ಫಲಿತಾಂಶ ಶೇ. 92.22ರಷ್ಟಾಗಿದೆ. ಒಟ್ಟು 167 ವಿದ್ಯಾರ್ಥಿಗಳು ಹಾಜರಾಗಿದ್ದು, 154 ಮಂದಿ ಉತ್ತೀಣರಾಗಿದ್ದಾರೆ. ಎಂಟು ಉನ್ನತ ಶ್ರೇಣಿ, 90 ಪ್ರಥಮ ಶ್ರೇಣಿ, 33 ದ್ವಿತೀಯ ಶ್ರೇಣಿ ಪಡೆದಿದ್ದಾರೆ. ಕಲಾ ವಿಭಾಗದ ಜ್ಯೋತಿ ನರೇಗಲ್ (ಶೇ. 85.50), ದೀಪಾ ಸತ್ತೂರ (ಶೇ. 85.16), ಶ್ವೇತಾ ಕೌದಿ (ಶೇ. 84.66) ಮೊದಲ ಮೂರು ಸ್ಥಾನ ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಪೂಜಾ ರಾಜಾಪುರ (ಶೇ. 89.50), ಮಮತಾ ಹೊನ್ನಪ್ಪನವರ (ಶೇ. 89.16), ಪ್ರಶಾಂತ ದುಂಡಪ್ಪನವರ (ಶೇ. 88) ಮೊದಲಿಗರಾಗಿದ್ದಾರೆ. ಕಾಲೇಜಿಗೆ ಕೀರ್ತಿ ತಂದ ವಿದ್ಯಾರ್ಥಿಗಳನ್ನು ಆಡಳಿತಾಧಿಕಾರಿಗಳು, ಪ್ರಾಚಾರ್ಯರು ಹಾಗೂ ಸಿಬ್ಬಂದಿ ಅಭಿನಂದಿಸಿದ್ದಾರೆ.
ಪ್ರಥಮ ಪಿಯುಸಿಗೆ ಅರ್ಜಿ ಆಹ್ವಾನ
ಹಾವೇರಿ: ಜಿಲ್ಲೆಯ ಸವಣೂರಿನ ಮೊರಾರ್ಜಿ ದೇಸಾಯಿ ವಸತಿ ವಿಜ್ಞಾನ ಕಾಲೇಜಿನಲ್ಲಿ ಪ್ರಥಮ ಪಿಯುಸಿಯ ಪಿಸಿಎಂಬಿ ಕೋರ್ಸ್ಗೆ 40 ವಿದ್ಯಾರ್ಥಿಗಳ ಪ್ರವೇಶಕ್ಕೆ ಮೇ 20ರೊಳಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಈ ವರ್ಷ ಎಸ್ಸೆಸ್ಸೆಲ್ಸಿ ಉತ್ತೀರ್ಣರಾದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ಕಾಲೇಜಿನಲ್ಲಿ ವ್ಯಾಸಂಗಮಾಡುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಊಟ, ವಸತಿ, ಸಮವಸ್ತ್ರ, ಪಠ್ಯಪುಸ್ತಕ ಹಾಗೂ ಇನ್ನಿತರೆ ಸಾಮಗ್ರಿಗಳನ್ನು ನೀಡುವುದರ ಜೊತೆಗೆ ಉತ್ತಮವಾದ ವಿದ್ಯಾಭ್ಯಾಸ ನೀಡಲಾಗುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ಆದಾಯ ರು. 2 ಲಕ್ಷ ಹಾಗೂ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಪೋಷಕರ ವಾರ್ಷಿಕ ಆದಾಯ ರು. 44,500 ರೊಳಗಿರಬೇಕು. ಆಸಕ್ತರು ಅರ್ಜಿಗಳನ್ನು ಸವಣೂರು ಮೊರಾರ್ಜಿ ದೇಸಾಯಿ ಪದವಿ ಪೂರ್ವ ಕಾಲೇಜು ಅಥವಾ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಜಿಲ್ಲಾ ಆಡಳಿತ ಭವನ, ರೂಂ. ನಂ-26, ಬಿ-ಬ್ಲಾಕ್ ಹಾವೇರಿಯಲ್ಲಿ ಉಚಿತವಾಗಿ ಪಡೆದು, ಭರ್ತಿ ಮಾಡಿದ ಅರ್ಜಿಗಳನ್ನು ನಿಗದಿತ ದಿನಾಂಕದೊಳಗೆ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿ ವಿ.ಅನ್ಬುಕುಮಾರ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸವಣೂರ ಮೊರಾರ್ಜಿ ದೇಸಾಯಿ ಪದವಿ ಪೂರ್ವ ಕಾಲೇಜು (ದೂ. 08378-259001 ಹಾಗೂ ಮೊ. 9480884734) ಅಥವಾ ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಜಿಲ್ಲಾ ಆಡಳಿತ ಭವನ, ರೂಂ.ನಂ- 26, ಬಿ-ಬ್ಲಾಕ್ ಹಾವೇರಿ (ದೂ. 08375-249008) ಅವರನ್ನು ಸಂಪರ್ಕಿಸಬಹುದೆಂದು ತಿಳಿಸಿದ್ದಾರೆ.
ರೋಶನಿ ಪ್ರೌಢಶಾಲೆಗೆ ಶೇ. 100 ಫಲಿತಾಂಶ
ಹಾನಗಲ್ಲ: ಇಲ್ಲಿನ ರೋಶನಿ ಪ್ರೌಢಶಾಲೆ ಶೇ. 100 ಫಲಿತಾಂಶ ಗಳಿಸಿದೆ. ಒಟ್ಟು 39 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗಿದ್ದರು. ಇವರಲ್ಲಿ 8 ಉನ್ನತ ಶ್ರೇಣಿ, 29 ಪ್ರಥಮ ದರ್ಜೆ, ಇಬ್ಬರಿಗೆ ದ್ವಿತೀಯ ದರ್ಜೆ ಫಲಿತಾಂಶ ಲಭಿಸಿದೆ. ಐಶ್ವರ್ಯಾ ಹಿರೇಮಠ (ಶೇ. 94.04), ವಿಜಯಲಕ್ಷ್ಮೀ ಬೆಲ್ಲದ (ಶೇ. 89.12), ಅನೂಪ ಸಿದ್ದಣ್ಣನವರ (ಶೇ. 88.80), ವರ್ಣಾ ಜವಳಿ (ಶೇ. 88.64), ಸಲ್ಮಾ ಬಾನು ಶೇಷಗಿರಿ (ಶೇ. 86.72), ಸಂಪತ್ಕುಮಾರ ಚಿಕ್ಕೇರಿ (ಶೇ. 86.88) ಪೂಜಾ ನವಲೆ (ಶೆ. 86.72), ಅಭಿಷೇಕ ಶೇಟ್ (ಶೇ. 87.48) ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಎನ್ಸಿಜೆಸಿ ಪ್ರೌಢಶಾಲೆಗೆ ಶೇ. 73 ಫಲಿತಾಂಶ
ಹಾನಗಲ್ಲ: ಇಲ್ಲಿನ ಜನತಾ ಶಿಕ್ಷಣ ಸೌಹಾರ್ದ ಸಂಸ್ಥೆಯ ಎನ್ಸಿಜೆಸಿ ಪ್ರೌಢಶಾಲೆಯ ಫಲಿತಾಂಶ ಶೇ 73.68ರಷ್ಟಾಗಿದೆ. 76 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗಿದ್ದು, 56 ಮಂದಿ ಉತ್ತೀರ್ಣರಾಗಿದ್ದಾರೆ. ಅಖಿಲ ಲಿಂಗೇರಿ (ಶೇ. 87) ಪ್ರಥಮ ಸ್ಥಾನ ಗಳಿಸಿದ್ದಾನೆ. ಯು.ಎಚ್. ಕುಪ್ಪಿಮಕೇರಿ (ಶೇ. 75), ಎಸ್.ಪಿ. ಶೆಟ್ಟರ (ಶೇ. 73.62) ಸಾಧನೆ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

