ಹಾವೇರಿ

ರಾಣಿಬೆನ್ನೂರು: ನಾಳೆ ಸಾಯಿ ಸ್ಪೆಷಾಲಿಟಿ ಆಸ್ಪತ್ರೆ ಸೇವೆಗೆ ಸಿದ್ಧ

Published On :

ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ಮೇ 11
ದೂರದ ಮಣಿಪಾಲ್ ಸೇರಿದಂತೆ ಇತರೆ ಊರುಗಳಲ್ಲಿ ಲಭ್ಯವಿರುವ ಎಲ್ಲಾ ರೀತಿಯ ಚಿಕಿತ್ಸೆಯನ್ನು ತಾಲೂಕಿನ ಜನತೆಗೆ ಒದಗಿಸುವುದಕ್ಕಾಗಿ ನಗರದ ಮಧ್ಯ ಭಾಗದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಿಸಿದ್ದು, ಮೇ 13ರಿಂದ ಆಸ್ಪತ್ರೆಗೆ ಬರುವ ಎಲ್ಲಾ ತರದ ರೋಗಿಗಳ ಸೇವೆಯನ್ನು ಪ್ರಾರಂಭಿಸಲಾಗುವುದು ಎಂದು ಸಾಯಿ ಸ್ಪೇಷಾಲಿಟಿ ಹಾಸ್ಪಿಟಲ್‌ನ ವೈದ್ಯ ಡಾ. ಅಭಿನಂದನ್ ಸಾಹುಕಾರ ತಿಳಿಸಿದರು.
ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 4 ಪಕ್ಕದಲ್ಲಿ ನಿರ್ಮಿಸಿರುವ ಸಾಯಿ ಸ್ಪೆಷಾಲಿಟಿಸ್ ಆಸ್ಪತ್ರೆಯಲ್ಲಿ ಶನಿವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಹೈಟೆಕ್ ಆಸ್ಪತ್ರೆ: ಕಿವಿ, ಮೂಗು, ಗಂಟಲು ಸೇರಿದಂತೆ ವಿವಿಧ ರೀತಿಯ ದೊಡ್ಡ ದೊಡ್ಡ ಕಾಯಿಲೆಗಳ ನಿವಾರಣೆಗಾಗಿ ಕಳೆದ 6 ವರ್ಷಗಳಿಂದಿಚೆಗೆ ತಾಲೂಕಿನ ಸಾವಿರಾರು ಜನರು ದೂರದ ಮಣಿಪಾಲ ಸೇರಿದಂತೆ ಇತರೆ ಊರುಗಳಿಗೆ ತೆರಳಿ ವಿವಿಧ ರೋಗಗಳಿಗೆ ಚಿಕಿತ್ಸೆ ಪಡೆಯಬೇಕಾಗಿತ್ತು. ಇದನ್ನು ಗಮನಿಸಿರುವ ನಾವು ಬೆಂಗಳೂರು, ಮಂಗಳೂರು, ದಾವಣಗೆರೆ, ಹುಬ್ಬಳ್ಳಿ ಸೇರಿದಂತೆ ಇತರೆ ಊರುಗಳಲ್ಲಿರುವ ದೊಡ್ಡ ಆಸ್ಪತ್ರೆಗಳ ವೈದ್ಯರ ಸಲಹೆ ಸಹಕಾರ ಆಧಾರದ ಮೇಲೆಗೆ ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಿ ಸುಸಜ್ಜಿತ ಆಸ್ಪತ್ರೆಯನ್ನು 24 ತಾಸು ಹೆರಿಗೆ ಚಿಕಿತ್ಸೆ ಸೇರಿದಂತೆ ಇತರೆ ಕಾಯಿಲೆಗಳಿಗೆ ಚಿಕಿತ್ಸೆ ನೀಡುವುದಕ್ಕಾಗಿ ವಿಶಾಲವಾದ ಜಾಗೆಯಲ್ಲಿ ಆಸ್ಪತ್ರೆ ನಿರ್ಮಿಸಿದ್ದಾಗಿ ತಿಳಿಸಿದರು.
ಚಿಕಿತ್ಸೆಗೆ ಉನ್ನತ ದರ್ಜೆ ಡಾಕ್ಟರ್: ಸಾಯಿ ಆಸ್ಪತ್ರೆ ಮಹಿಳಾ ವೈದ್ಯರಾದ ಡಾ.ಸುಷ್ಮಾ ಸಾಹುಕಾರ ಮಾತನಾಡಿ, ಪ್ರತಿ ತಿಂಗಳಲ್ಲಿ ಒಂದು ಬಾರಿ ಹೃದಯ ರೋಗ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಡಾ. ವಿಜಯಕೃಷ್ಣಾ ಕೂಳೂರು, ಪ್ರತಿ ಬುಧವಾರ ದಾವಣಗೆರೆಯ ಡಾ.ನವಿನ, ಮೂತ್ರ ರೋಗದ ಕುರಿತು ಚಿಕಿತ್ಸೆ ನೀಡುತ್ತಾರೆ. ಸ್ತ್ರೀ-ರೋಗಗಳ ಹಾಗೂ ಬಂಜೆತನ ನಿವಾರಣೆಗಾಗಿ ನಾನು ಕರ್ತವ್ಯ ನಿರ್ವಹಿಸುತ್ತೇನೆ. ಆದ ಕಾರಣ ದೂರದ ಊರುಗಳಿಗೆ ಹೋಗುವ ಬದಲು ಚಿಕಿತ್ಸೆ ಪಡೆಯಲು ಮಹಿಳಾ ರೋಗಿಗಳು ಮುಂದಾಗಬೇಕೆಂದು ಡಾ.ಸುಷ್ಮಾ ಸಾಹುಕಾರ ಹೇಳಿದರು.
ನಿವೃತ್ತ ಉಪನ್ಯಾಸಕ ಎಚ್.ಯು. ಸಾಹುಕಾರ, ಡಾ. ಮನೋಜ ಸಾಹುಕಾರ, ಚೇತನ ಹಂಚಿನಾಳ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.