ಹಾವೇರಿ

ಅವಕಾಶ ಸದ್ಬಳಕೆ ಮಾಡಿಕೊಳ್ಳಿ

Published On :

ಕನ್ನಡಪ್ರಭ ವಾರ್ತೆ, ಗದಗ, ಮೇ 12
ಮಹಿಳೆಯರು ತಮಗೆ ಸಿಗುವ ಅವಕಾಶಗಳನ್ನು ಸೂಕ್ತ ಕೆಲಸ, ಕಾರ್ಯಗಳಿಗೆ ಬಳಸುವ ಮೂಲಕ ವೇಳೆಯ ಸದುಪಯೋಗ ಮಾಡಿಕೊಳ್ಳುವಂತೆ ಕೊಟ್ರೇಶ ವಿಭೂತಿ ಕರೆ ನೀಡಿದರು.
35ನೇ ವಾರ್ಡ್‌ನ ರಾಮನಗರದಲ್ಲಿ ಸಮರ್ಥ ವಿವಿಧೋದ್ದೇಶಗಳ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಉಚಿತ ಹೊಲಿಗೆ ತರಬೇತಿ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಷ್ಟಕಾಲದಲ್ಲಿ ಜೀವನ ನಿರ್ವಹಣೆಗೆ ಸ್ವ-ಉದ್ಯೋಗ ನೆರವಾಗುತ್ತದೆ. ಕೊಳಚೆ ಪ್ರದೇಶದ ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಉದ್ದೇಶದಿಂದ ಸಮರ್ಥ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹೊಲಿಗೆ ತರಬೇತಿ ಶಿಬಿರ ಹಮ್ಮಿಕೊಂಡು ಆಶಾಕಿರಣವಾಗಿದೆ. ಮಹಿಳೆಯರು ಈ ಮೂಲಕ ಸ್ವಾವಲಂಬನೆ ಸಾಧಿಸಬೇಕು ಎಂದು ಕರೆ ನೀಡಿದರು.
ಅತಿಥಿಗಳಾಗಿದ್ದ ಎಸ್.ಎಂ. ಕಾತರಕಿ ಹಾಗೂ ಶಿವಾನಂದ ಗಡಾದ ಮಾತನಾಡಿ, ವಿದ್ಯಾದಾನ ಎಲ್ಲಕ್ಕಿಂತ ಶ್ರೇಷ್ಠ ದಾನ. ಸಮರ್ಥ ಸಂಸ್ಥೆ ಮಹಿಳೆಯರಿಗೆ, ಸಾರ್ವಜನಿಕರ ಜೀವನಕ್ಕೆ ಉಪಯೋಗವಾಗುವ ಶಿಬಿರಗಳನ್ನು ಇನ್ನಷ್ಟು ನಡೆಸಲಿ ಎಂದು ಆಶಿಸಿದರು.
ಮರಿಯಪ್ಪ ವಿಭೂತಿ, ನಾಗರಾಜ ಪಾಟೀಲ, ಯಲ್ಲಪ್ಪ ಹುಂಬಿ, ಆನಂದ, ರೇವಣಸಿದ್ದಪ್ಪ ಇಮ್ರಾಪೂರ, ಮುತ್ತಣ್ಣ ಬಳ್ಳಾರಿ, ಮರಿಯಪ್ಪ ವಿಭೂತಿ, ಕೊಟ್ರೇಶ ವಿಭೂತಿ ಇದ್ದರು. ಸಂಸ್ಥೆ ಅಧ್ಯಕ್ಷ ಬೇವಿನಕಟ್ಟಿ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.