ಹಾವೇರಿ

ಸುದ್ದಿ ಸಂಕ್ಷೇಪ

Published On :

ಅಂಗವಿಕಲರಿಗೆ ಸ್ಕೂಟರ್ ವಿತರಣೆ
ಶಿಗ್ಗಾಂವಿ: ರಾಜ್ಯ ಸರ್ಕಾರದ ಯೋಜನೆಯಲ್ಲಿ ತಾಲೂಕು ಪಂಚಾಯ್ತಿಯ ಶೇ. 3ರ ಅನುದಾನದಡಿ 9 ಜನ ಅಂಗವಿಕಲರಿಗೆ ಮಂಜೂರು ಮಾಡಿದ ನಾಲ್ಕು ಚಕ್ರ ವಾಹನ(ಸ್ಕೂಟರ್)ಗಳನ್ನು ತಾಪಂ ಆವರಣದಲ್ಲಿ ಶಾಸಕ ಮನೋಹರ ತಹಸೀಲ್ದಾರ್ ಫಲಾನುಭವಿಗಳಿಗೆ ವಿತರಿಸಿದರು.
ಶೇ. 3ರ ಅನುದಾನದಡಿ ಒಟ್ಟು 64 ಸಾವಿರ ಮುಖಬೆಲೆಯ ಸ್ಕೂಟರ್‌ಗೆ ಶೇ. 50ರಷ್ಟನ್ನು ಫಲಾನುಭವಿ ಭರಿಸಬೇಕು. ಇನ್ನುಳಿದ ರು. 32 ಸಾವಿರಗಳನ್ನು ಸರ್ಕಾರ ಸಹಾಯಧನದ ರೂಪದಲ್ಲಿ ನೀಡುತ್ತದೆ ಎಂದು ವಿವರಿಸಿದರು.
ತಾಪಂ ಅಧ್ಯಕ್ಷ ಮಲ್ಲನಗೌಡ ವೀರನಗೌಡ್ರ, ಉಪಾಧ್ಯಕ್ಷ್ಯೆ ಅನಿತಾ ಶಿವೂರ್, ಜಿಪಂ ಸದಸ್ಯ ಮಹಾದೇವಪ್ಪ ಭಾಗಸರ, ತಾಪಂ ಸದಸ್ಯರಾದ ಸುರೇಶ ನೆರ್ಕಿಮನಿ, ಮಧು ಪಾಣಿಗಟ್ಟಿ, ಕಲವೀರಪ್ಪ ಪವಾಡಿ, ವಿಜಯಲಕ್ಷ್ಮಿ ಹಿರೇಮಠ ಮುಂತಾದವರಿದ್ದರು.
ಇಂದು ಜೈಲ್ ಭರೋ  
ಗದಗ:  ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರವು ಜನವಿರೋಧಿಗಳಾದ ಬೆಲೆ ಏರಿಕೆ, ಮಿತಿಮೀರಿದ ಭ್ರಷ್ಟಾಚಾರ, ರಾಷ್ಟ್ರೀಯ ಸುರಕ್ಷತೆ ಬಗ್ಗೆ ನಿರ್ಲಕ್ಷ್ಯ ಧೋರಣೆಯ ವಿರುದ್ಧ ರಾಜ್ಯ ಬಿಜೆಪಿ ಕರೆಯ ಮೇರೆಗೆ ಜೈಲ್ ಭರೋ ಚಳುವಳಿ ಕಾರ್ಯಕ್ರಮ ಮೇ 27ರ ಬೆಳಗ್ಗೆ 10ಕ್ಕೆ ನಗರದ ಗಾಂಧಿ ವೃತ್ತದಲ್ಲಿ ಜರುಗಲಿದೆ.
ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಎಸ್. ಕರಿಗೌಡ್ರ, ಮಾಜಿ ಸಚಿವ ಕಳಕಪ್ಪ ಬಂಡಿ, ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ, ರಾಮಣ್ಣ ಲಮಾಣಿ, ಜಿಪಂ ಅಧ್ಯಕ್ಷ ಹಾಗೂ ಬಿಜೆಪಿಯ ಎಲ್ಲ ಚುನಾಯಿತ ಪ್ರತಿನಿಧಿಗಳು ಭಾಗವಹಿಸುವರು ಎಂದು ಶಹರ ಪ್ರಧಾನ ಕಾರ್ಯದರ್ಶಿ ಬಸವರಾಜ ಶೀರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯುವಕ ನೇಣಿಗೆ ಶರಣು
ಶಿಗ್ಗಾಂವಿ: ಗಿಡಕ್ಕೆ ನೇಣು ಹಾಕಿಕೊಂಡು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಬಂಕಾಪುರ ಕೋಟೆ ಆವರಣದಲ್ಲಿ ನಡೆದಿದೆ.
ಗುಡ್ಡಪ್ಪ ಕರಬಸಪ್ಪ ದೊಡ್ಡಮನಿ (39) ಮೃತಪಟ್ಟ ದುರ್ದೈವಿ. ಈತ ಹಾನಗಲ್ ತಾಲೂಕಿನ ನೀರಲಗಿ ಗ್ರಾಮದನು ಎನ್ನಲಾಗಿದ್ದು, ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಎ.ಎ. ದೇಸಾಯಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಮಟ್ಕಾ ಬುಕ್ಕಿ ಬಂಧನ
ಶಿಗ್ಗಾಂವಿ: ಬಂಕಾಪುರ ಗ್ರಾಮದ ಸುರೇಶ ದುರಗಪ್ಪ ಪೂಜಾರ ಎಂಬ ಮಟ್ಕಾ ಬುಕ್ಕಿಯೊಬ್ಬ ಮಟ್ಕಾ ಚೀಟಿ ಬರೆಯುತ್ತಿದ್ದಾಗ ಪೊಲೀಸರು ಬಂಧಿಸಿ ರು. 2490 ಜಪ್ತು ಮಾಡಿದ್ದಾರೆ. ದೂರು ದಾಖಲಿಸಿಕೊಂಡು ಪಿಎಸ್‌ಐ ಎ.ಎ. ದೇಸಾಯಿ ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.