ಕಲಾವಿದರನ್ನು ಪ್ರೋತ್ಸಾಹಿಸಿ
ಹೊಳೆಆಲೂರ: ಗ್ರಾಮೀಣ ಜನರಿಗೆ ಮನರಂಜನೆ ಜತೆಗೆ ನೀತಿ ಬೋಧಿಸುವ ಕೆಲಸವನ್ನು ನಾಟಕಗಳು ಮಾಡುತ್ತಿದ್ದು, ಇಂತಹ ನಾಟಕಗಳಲ್ಲಿ ಪಾತ್ರ ವಹಿಸಿ ಮನರಂಜನೆ ನೀಡುವ ಕಲಾವಿದರನ್ನು ಪ್ರೇಕ್ಷಕರು ಪ್ರೋತ್ಸಾಹಿಸಬೇಕು ಎಂದು ಗ್ರಾಪಂ ಪ್ರಭಾರಿ ಅಧ್ಯಕ್ಷ ಜಗದೀಶ ಬ್ಯಾಡಗಿ ಹೇಳಿದರು.
ಸ್ಥಳೀಯ ಯಚ್ಚರೇಶ್ವರ ಸರ್ವಧರ್ಮ ಸಾಮೂಹಿಕ ವಿವಾಹದ ನಿಮಿತ್ಯ ಇತ್ತೀಚಿಗೆ ಸ್ಥಳೀಯ ಕಲಾರಸಿಕ ಮಿತ್ರಮಂಡಳಿಯ ಕಲಾವಿದರು ಅಭಿನಯಿಸಿದ ಕವಿ ಮೆಚ್ಚಿದ ಕನ್ಯೆ ಅರ್ಥಾತ್ ಯಾರ ಹೆಣ್ಣು ಯಾರ ಪಾಲಿಗೆ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು. ಟಿವಿ, ಚಲನಚಿತ್ರ ವಿವಿಧ ಮಾಧ್ಯಮಗಳಿಂದಾಗಿ ನಾಟಕಗಳು ನೇಪಥ್ಯಕ್ಕೆ ಸರಿಯುತ್ತಿವೆ. ಆದರೂ, ಗ್ರಾಮೀಣ ಭಾಗಗಳಲ್ಲಿ ಸ್ಥಳೀಯರೇ ಪಾತ್ರಧಾರಿಗಳಾಗಿ ಪ್ರತಿಭೆಯನ್ನು ತೋರುತ್ತಿದ್ದಾರೆ. ಅವರಿಗೆ ನೀವು ಹಣ, ಏನೂ ಕೊಡುವುದು ಬೇಡ ಬರೀ ಚಪ್ಪಾಳೆ, ಸಿಳ್ಳೆಗಳ ಮೂಲಕ ಪ್ರೋತ್ಸಾಹಿಸುವ ಕೆಲಸ ಆಗಬೇಕು ಎಂದರು.
ಸಂಘದ ಗೌರವಾಧ್ಯಕ್ಷ ಯಚ್ಚರಪ್ಪ ಜಡಮಳಿ ಅಧ್ಯಕ್ಷತೆ ವಹಿಸಿದ್ದರು. ಬಸವಂತಪ್ಪ ತಳವಾರ, ಬಿ.ಎಚ್. ಗಾಣಿಗೇರ, ರಾಜು ಹನುಮಂತಗೌಡ್ರ, ಸಂಗಪ್ಪ ದುಗ್ಗಲ, ಎಸ್.ವೈ. ಗಾಣಿಗೇರ, ರವಿ ಲಮಾಣಿ ಮುಂತಾದವರು ಅತಿಥಿಗಳಾಗಿ ಆಗಮಿಸಿದ್ದರು. ಸಂತೋಷ ಬಡಿಗೇರ ಸ್ವಾಗತಿಸಿ, ನಿರೂಪಿಸಿದರು.
ನಾಟಕದಲ್ಲಿ ಕಲಾವಿದರಾದ ಲಿಂಗಬಸು ಅಂಗಡಿ, ಹನುಮಂತ ನವನಳ್ಳಿ, ಬಸವರಾಜ ಉಳ್ಳಾಗಡ್ಡಿ, ಬಸವರಾಜ ಮೇಟಿ, ಹನುಮಂತ ದೊಡಮನಿ, ಸಿದ್ದು ನಾಲತವಾಡ, ಗಡಗಿ ಮೇಸ್ತಿ, ಮಂಜುಳಾ ಎಚ್, ಗೀತಾ ಗುಳೇದಗುಡ್ಡ, ಮುತ್ತಯ್ಯ ಸಾಲಿಮಠರ ಅಭಿನಯ, ಚಿದಾನಂದ ಹಡಪದ ನಿರ್ದೇಶನ, ಎಚ್.ಅಶೋಕ, ಸಹನಿರ್ದೇಶನ ಮಲ್ಲು ಹೊಸಳ್ಳಿ ಹಾಗೂ ಪಾಂಡು ಪತ್ತಾರ ಅವರ ಸಂಗೀತ ಪ್ರೇಕ್ಷಕರ ಮನಸೆಳೆಯುವಲ್ಲಿ ಯಶಸ್ವಿಯಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

