ಸಿಬಿಎಸ್ನಲ್ಲಿ ಉತ್ತಮ ಸಾಧನೆ
ರಾಣಿಬೆನ್ನೂರ: ಸ್ಥಳೀಯ ಓಂ ಪಬ್ಲಿಕ್ ಶಾಲೆಯ ಮಕ್ಕಳು ಮಾರ್ಚ್ ತಿಂಗಳಲ್ಲಿ ಜರುಗಿದ ಸಿಬಿಎಸ್ನ ಹತ್ತನೇ ತರಗತಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದು ಶೇ. 100ರಷ್ಟು ಫಲಿತಾಂಶ ಸಾಧಿಸಿದ್ದಾರೆ. ಪರೀಕ್ಷೆಗೆ ಕುಳಿತ ಒಟ್ಟು 43 ವಿದ್ಯಾರ್ಥಿಗಳ ಪೈಕಿ ಐವರು ಗ್ರೇಡ್ ಎ1 ನಲ್ಲಿ, ಒಂಭತ್ತು ಗ್ರೇಡ್ ಎ2 ನಲ್ಲಿ ಹಾಗೂ 29 ವಿದ್ಯಾರ್ಥಿಗಳು ಗ್ರೇಡ್ ಬಿ1 ನಲ್ಲಿ ಉತ್ತೀರ್ಣರಾಗಿದ್ದಾರೆ. ಅನುಷಾ ಬಿ. ಬಳ್ಳಾರಿ, ಗುಣಾ ಕೆ. ಕಂಬಾಳಿಮಠ, ಕೀರ್ತಿ ಡಿ. ರೋಖಡೆ, ಶಶಾಂಕ ಬಿ. ಶರ್ಮಾ ಹಾಗೂ ಶಿವಾನಂದ ಎಸ್. ಮಾಕನೂರ ಗ್ರೇಡ್ ಎ1 ನಲ್ಲಿ ಉತ್ತೀರ್ಣರಾಗಿದ್ದು ಶಾಲೆಗೆ ಪ್ರಥಮ ಐದು ಸ್ಥಾನಗಳನ್ನು ಗಳಿಸಿದ್ದಾರೆ.
ಸಂಸ್ಥೆಗಳು ಸಮಾಜಮುಖಿ ಕೆಲಸ ಮಾಡಲಿ: ಪಿ. ಶಾಂತಾ
ರಾಣಿಬೆನ್ನೂರು: ಜನೋಪಯೋಗಿ ಕಾರ್ಯಕ್ರಮಗಳನ್ನು ಮಾಡುತ್ತಿರುವ ಮುತ್ತೂಟ್ ಸಂಸ್ಥೆಗೆ ಜನಪರ ಕಾಳಜಿ ಇದೆ. ಇತರೆ ಸಂಸ್ಥೆಗಳೂ ಇವರಂತೆ ಸಮಾಜಮುಖಿ ಕೆಲಸಗಳನ್ನು ಮಾಡುವಂತಾಗಲಿ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ. ಪಿ. ಶಾಂತಾ ಹೇಳಿದರು. ಅವರು ಮುತ್ತೂಟ್ ಫಿನ್ಕಾರ್ಪ್ ಲಿ. ದಾವಣಗೆರೆಯ ವಾಸನ್ ಐ ಕೇರ್ ಸಹಯೋಗದೊಂದಿಗೆ ಏರ್ಪಡಿಸಿದ್ದ ಉಚಿತ ನೇತ್ರ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಮುತ್ತೂಟ್ ಸಂಸ್ಥೆಯ ವಿಚಕ್ಷಣ ಅಧಿಕಾರಿ, ನಿವೃತ್ತ ಡಿವೈಎಸ್ಪಿ ಎಂ.ಎಸ್. ಜಾಧವ, ರವೀಂದ್ರ ದೇಸಾಯಿ, ಶಾಖಾ ವ್ಯವಸ್ಥಾಪಕಿ ಬೃಂದಾ ಅಮ್ಮನವರ ಇದ್ದರು.
ವಿಜೃಂಭಣೆಯ ಲಕ್ಷ್ಮೀನರಸಿಂಹ ರಥೋತ್ಸವ
ರಾಣಿಬೆನ್ನೂರು: ನಗರದ ಕೋಟೆಯಲ್ಲಿ ಶ್ರೀ ನರಸಿಂಹ ಜಯಂತಿ ಅಂಗವಾಗಿ ಶ್ರೀ ಲಕ್ಷ್ಮೀ ನರಸಿಂಹ ದೇವರ ರಥೋತ್ಸವವು ಕೋಟೆಯ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದಿಂದ ಶ್ರೀ ರಾಮದೇವರ ದೇವಸ್ಥಾನದವರೆಗೆ ವಿಜೃಂಭಣೆಯಿಂದ ನೆರವೇರಿತು. ಬ್ರಾಹ್ಮಣ ಸಮಾಜದ ನೂರಾರು ಭಕ್ತರು ಈ ರಥಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಇತರೆ ಸಮಾಜದ ಭಕ್ತಾದಿಗಳೂ ಈ ರಥಯಾತ್ರೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಕಳೆದ ಹಲವಾರು ವರ್ಷಗಳಿಂದ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನ ಟ್ರಸ್ಟ್ ವತಿಯಿಂದ ಈ ರಥಯಾತ್ರೆ ನಡೆಯುತ್ತಿದ್ದು, ದೇಶದ ವಿವಿಧ ಭಾಗಗಳಲ್ಲಿ ನೆಲೆಸಿರುವ ಟ್ರಸ್ಟ್ ಸದಸ್ಯರು ತಮ್ಮ ಕುಟುಂಬ ಪರಿವಾರ ಸಮೇತ ಆಗಮಿಸಿ ಈ ರಥಯಾತ್ರೆಯನ್ನು ಯಶಸ್ವಿಯಾಗಿ ನೆರವೇರಿಸಿದರು. ನಂತರ ತೀರ್ಥ ಪ್ರಸಾದ ನೆರವೇರಿತು. ಶಾಸಕ ಕೆ.ಬಿ. ಕೋಳಿವಾಡ ದೇವಸ್ಥಾನಕ್ಕೆ ಭೇಟಿಕೊಟ್ಟು ದೇವರ ದರ್ಶನ ಪಡೆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

