ಇಂದು ನಾಗೇಶರಾವ್ ಜೋಶಿಯವರ ಸಹಸ್ರ ಚಂದ್ರದರ್ಶನ ಕಾರ್ಯಕ್ರಮ
ಹಿರೇಕೆರೂರು: ಪಟ್ಟಣದ ವೈದ್ಯಶ್ರೀ ಪ್ರಶಸ್ತಿ ವಿಜೇತ ಡಾ. ನಾಗೇಶರಾವ್ ಜೋಶಿ ಅವರ ಸಹಸ್ರ ಚಂದ್ರದರ್ಶನ ಕಾರ್ಯಕ್ರಮ ಮೇ 31ರಂದು ಪಟ್ಟಣದ ಅವರ ನಿವಾಸದಲ್ಲಿ ಜರುಗಲಿದೆ. ಶ್ರೀಯುತರು ಪಟ್ಟಣದಲ್ಲಿ ಜೋಶಿ ಡಾಕ್ಟರ್ ಎಂದೇ ಪ್ರಸಿದ್ಧಿ ಪಡೆದವರಾಗಿದ್ದಾರೆ. ಮೂಲತಃ ರಾಣಿಬೆನ್ನೂರ ತಾಲೂಕಿನ ಬೇಲೂರ ಗ್ರಾಮದ ಶಾಲಾ ಶಿಕ್ಷಕ ರಾಮಚಂದ್ರ ಜೋಶಿ ಹಾಗೂ ಸೀತಾ ಬಾಯಿಯವರಲ್ಲಿ 1929 ನವೆಂಬರ್ 21 ಜನಿಸಿದ ಪುತ್ರರಾದ ಡಾ. ನಾಗೇಶರಾವ್ ಪ್ರಾಥಮಿಕ ಶಿಕ್ಷಣವನ್ನು ಕುಪ್ಪೆಲೂರ ಗ್ರಾಮದಲ್ಲಿ ಮಾಧ್ಯಮಿಕ ಶಿಕ್ಷಣವನ್ನು ಧಾರವಾಡದ ವಿದ್ಯಾರಣ್ಯ ಪ್ರೌಢಶಾಲೆಯಲ್ಲಿ ಪಡೆದಿದ್ದಾರೆ. ಅವರು ಬಳ್ಳಾರಿಯ ತಾರಾನಾಥ ಆಯುರ್ವೇದ ಕಾಲೇಜಿನಲ್ಲಿ 1959ರಲ್ಲಿ ಎಲ್ಎ ಎಂಎಸ್ ಪದವಿಯನ್ನು ಪಡೆದರು. ಅಲ್ಲಿಂದ ವೈದ್ಯ ವೃತ್ತಿ ಆರಂಭ. ಧರ್ಮಪತ್ನಿ ಮಾಲತಿ ಜೋಶಿ ಅವರ ಪ್ರ್ರೋತ್ಸಾಹ ಹಾಗೂ ಸಹಕಾರ ಹೆಚ್ಚಿನದಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಸೈಕಲ್ನಲ್ಲಿ ಹೋಗಿ ರೋಗಿಗಳ ಸೇವೆಯನ್ನು ಮಾಡಿರುವುದು ಇವರ ವಿಶೇಷ. ವೃದ್ಧರಾದರೂ 108 ಸೂರ್ಯನಮಸ್ಕಾರ, ಗೋವುಗಳನ್ನು ಸಾಕುವುದು ಇವರ ದೈನಂದಿನ ಕಾರ್ಯ. ಅವರ ಪುತ್ರರಾದ ಡಾ. ಶಂಕರ ಜೋಶಿ, ವಾಸುದೇವ ಜೋಶಿ ತಂದೆಯ ಮಾರ್ಗವನ್ನು ಅನುಸರಿಸಿದ್ದಾರೆ. ತಮ್ಮ ವೈದ್ಯ ವೃತ್ತಿಯನ್ನು ಬರಿ ಹಣಕ್ಕಾಗಿ ಮಾಡದೆ ಅದೊಂದು ಸಮಾಜ ಸೇವೆ ಎಂದೇ ಮಾಡಿದ ಇವರ ಕಾರ್ಯ ಸಮಾಜಕ್ಕೆ ಮಾದರಿಯಾಗಿದೆ.
ಪ್ರಶಸ್ತಿಗಳು: ಕನ್ನಡ ಸಾಹಿತ್ಯ ಪರಿಷತ್ನ ಪದ್ಮ ಭೂಷಣ, ಹಿರೇಕೆರೂರಿನ ಸೂರ್ಯ ಶಿಕ್ಷಣ ಸಂಸ್ಥೆಯಿಂದ ವೈದ್ಯಕೀಯ ಸಾಧನೆಗಾಗಿ ಸೂರ್ಯಶ್ರೀ ಪುರಸ್ಕಾರ. 50 ವರ್ಷಗಳ ನಿಸ್ವಾರ್ಥ ವೈದ್ಯಕೀಯ ಸೇವೆಗೆ ಬ್ಯಾಡಗಿಯ ಐಎಂಎ ಸಂಸ್ಥೆಯು ವೈದ್ಯಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಸಹಸ್ರ ಚಂದ್ರದರ್ಶನ ಕಾರ್ಯಕ್ರಮ ಕುಟುಂಬದವರಾದ ನಳಿನಿ ಡಾ. ಶಂಕರ ಜೋಶಿ, ಹಾಗೂ ದ್ವಾರುಕಾ ಡಾ. ವಾಸುದೇವ ಜೋಶಿ, ಮೊಮ್ಮಕ್ಕಳಾದ ಸೋಹನ, ಶ್ರದ್ಧಾ, ಶ್ರೀನಿವಾಸ, ಮತ್ತು ಶ್ರೀಯಾ ಹಾಗೂ ಬಂಧು ಬಳಗದವರು ಮೇ 31ರ ಬೆಳಗ್ಗೆ 10ಕ್ಕೆ ನೆರವೇರಿಸಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

