ಹಾವೇರಿ

ಇಂದು ಚಂದ್ರು ಬನ್ನಿಕೋಡ ನೆನಪಿಗೆ ವೀರಗಲ್ಲು ಸ್ಥಾಪನೆ

Published On :

ಕನ್ನಡಪ್ರಭ ವಾರ್ತೆ, ಹಿರೇಕೆರೂರು, ನ. 7
ತಾಲೂಕಿನ ವರದಾನವಾಗಿರುವ ತುಂಗಾ ಮೇಲ್ದಂಡೆ ನೀರಾವರಿ ಯೋಜನೆಗೆ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ವಿಳಂಬ ಹಾಗೂ ಸರ್ಕಾರದ ರೈತವಿರೋಧಿ ನೀತಿ ಖಂಡಿಸಿ ಹುತಾತ್ಮರಾದ ಯುವ ರೈತ ಚಂದ್ರು ಬನ್ನಿಕೋಡ ಅವರ ವೀರಗಲ್ಲು ಸ್ಥಾಪನೆ ಸಮಾರಂಭ ನ. 8ರಂದು ಮಧ್ಯಾಹ್ನ 12.30ಕ್ಕೆ ರಟ್ಟಿಹಳ್ಳಿಯ ಹೊಸ ಬಸ್ ನಿಲ್ದಾಣದ ಎದುರು ಜರುಗಲಿದೆ ಎಂದು ರೈತ ಸಂಘದ ತಾಲೂಕು ಕಾರ್ಯದರ್ಶಿ ಮಲ್ಲನಗೌಡ ಸೊರಟೂರ ತಿಳಿಸಿದರು.
ಬರ ನಿವಾರಣೆಗಾಗಿ ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ಅವಿರತವಾಗಿ ಹೋರಾಡಿ, ಸರ್ಕಾರ ತುಂಗಾ ಮೇಲ್ದಂಡೆ ಯೋಜನೆ ಮಂಜೂರು ಮಾಡುವಂತೆ ಮಾಡಿದರು. ಹಿರೇಕೆರೂರಿನ ಭಗೀರಥ ಎಂಬ ಹೆಗ್ಗಳಿಕೆಗೂ ಪಾತ್ರರಾದರು.
ಅವರ ದ್ವಿತೀಯ ಪುತ್ರ ಚಂದ್ರು ಬನ್ನಿಕೋಡ ರಟ್ಟಿಹಳ್ಳಿ ಹೋಬಳಿಯಲ್ಲಿ ತುಂಗಾ ಮೇಲ್ದಂಡೆ ಮುಖ್ಯ ಕಾಲುವೆಗೆ ಭೂಮಿ ನೀಡಿದ ರೈತರಿಗೆ ಪರಿಹಾರ ನೀಡುವಲ್ಲಿ ಆದ ವಿಳಂಬ ಖಂಡಿಸಿ, ಶಿವಮೊಗ್ಗದ ನೀರಾವರಿ ನಿಗಮದ ಮುಖ್ಯ ಅಭಿಯಂತರ ಗಮನ ಸೆಳೆಯಲು ಧರಣಿ ನಡೆಸಿದರು. ಆಗಲೂ ಪರಿಹಾರ ನೀಡದೇ ಇದ್ದಾಗ ಮನನೊಂದು, ಬೆಂಕಿ ಹಚ್ಚಿಕೊಂಡು, ರೈತರಿಗಾಗಿ ಪ್ರಾಣತೆತ್ತರು. ರೈತ ನಾಯಕ ಚಂದ್ರು ಬನ್ನಿಕೋಡ ಅವರ ಧೀಮಂತಿಕೆ, ರೈತಪರ ಹೋರಾಟ ಯುವ ಜನಾಂಗಕ್ಕೆ ಆದರ್ಶವಾಗಲಿ ಎಂಬ ಸದುದ್ದೇಶದಿಂದ ಅವರ ಪುತ್ಥಳಿಯನ್ನು ಸ್ಮಾರಕವಾಗಿ ಅಭಿವೃದ್ಧಿಪಡಿಸುವುದು ರೈತರ ಬಹು ದಿನಗಳ ಆಸೆ. ಅವರ ಹೆಸರಿನ ವೀರಗಲ್ಲನ್ನು ಸ್ಥಾಪಿಸಿ, ಗೌರವ ಸಲ್ಲಿಸಲು ನ. 8ರಂದು ಮಧ್ಯಾಹ್ನ 12.30ಕ್ಕೆ ರಟ್ಟಿಹಳ್ಳಿ ಬಸ್ ನಿಲ್ದಾಣದ ಎದುರಿನ ಜಾಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸೊರಟೂರ ವಿವರಿಸಿದರು.
ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಶಿದ್ದನಗೌಡ ಪಾಟೀಲ, ತಾಲೂಕಾಧ್ಯಕ್ಷ ರಾಜಶೇಖರ ದೂದಿಹಳ್ಳಿ, ಜಿಲ್ಲಾಧ್ಯಕ್ಷ ಸುಭಾಸ ಗವಿಯಪ್ಪನವರ, ಪ್ರಗತಿಪರ ರೈತರಾದ ಮಾಲತೇಶಗೌಡ ಗಂಗೋಳ, ಹನುಮಂತಗೌಡ ಕಡೇಮನಿ, ಹನುಮಂತಗೌಡ ಸೊರಟೂರ, ದ್ಯಾವನಗೌಡ ಆರಿಕಟ್ಟಿ, ಹನುಮಂತಪ್ಪ ಮಲ್ಲೂರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.