ಹಾವೇರಿ

ಭಾಷೆಯಿಂದ ಭಾವಾಭಿವ್ಯಕ್ತಿ: ಬಣಕಾರ

Published On :

ಹಾನಗಲ್ಲ: ಭಾಷೆ ಮನಸ್ಸಿನ ಭಾವನೆ ಅಭಿವ್ಯಕ್ತಿಗೊಳಿಸುವ ಶಕ್ತಿಯುತ ಮಾಧ್ಯಮ. ಭಾಷೆ ಇಲ್ಲದ ಪ್ರಪಂಚವನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯ. ಮಾತೃಭಾಷೆ ಅಂತರಾತ್ಮದ ಭಾಷೆಯಾಗಿದೆ ಎಂದು ಪ್ರಾಚಾರ್ಯ ಪ್ರೊ. ಎನ್.ಬಿ. ಬಣಕಾರ ನುಡಿದರು. ಪಟ್ಟಣದ ಶ್ರೀ ಕುಮಾರೇಶ್ವರ ಕಲಾ-ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡ ಭಾಷೆ ಉತ್ಕೃಷ್ಟವಾಗಿದ್ದು, ಶಾಸ್ತ್ರೀಯ ಭಾಷೆಯಾಗಿಯೂ ಮನ್ನಣೆ ಗಳಿಸಿದೆ. ನಾಡು-ನುಡಿಯ ಸಂರಕ್ಷಣೆ ಎಲ್ಲರ ಕರ್ತವ್ಯ ಎಂದರು.
ನಾಡದೇವಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಪ್ರೊ. ಇಂದುಮತಿ ಜೋಶಿ ಮಾತನಾಡಿ, ಗಡಿ ಭಾಗದಲ್ಲಿ ಕನ್ನಡವನ್ನು ಅಭಿವೃದ್ಧಿಗೊಳಿಸಬೇಕೆಂದರು. ಎನ್ನೆಸ್ಸೆಸ್ ಅಧಿಕಾರಿ ಡಾ. ಪ್ರಕಾಶ ಹೊಳೇರ, ಕನ್ನಡ ಕುಲಪುರೋಹಿತಆಲೂರು ವೆಂಕಟರಾಯರ ಸಾಧನೆಗಳನ್ನು ಬಣ್ಣಿಸಿದರು.
ಪ್ರೊ. ಪಿ.ಎನ್. ಜೋಶಿ, ಪ್ರೊ. ಎಸ್.ವಿ. ಸೋಮನಾಥ, ಪ್ರೊ. ಸಿ. ಮಂಜುನಾಥ, ಡಾ. ಎಂ.ಎಚ್. ಹೊಳಿಯಣ್ಣನವರ, ಪ್ರೊ. ರಾಘವೇಂದ್ರ, ಪ್ರೊ. ನಾಗರಾಜ ಹಾವನೂರ, ಸಿಬ್ಬಂದಿ ಅರುಣ ತಿರುಮಲೆ, ವಸಂತ ಗುಡುಗುಡಿ, ಕಮಲಾಕ್ಷಿ ದೇಸಾಯಿ, ಐ.ಜಿ. ಹಿರೇಮಠ, ಎನ್.ಎಚ್. ಪುರೋಹಿತ, ಆರ್.ಎಂ. ಭಂಡಾರಿ ಪಾಲ್ಗೊಂಡಿದ್ದರು. ದೀಪಿಕಾ ಪಾಟೀಲ ಪ್ರಾರ್ಥಿಸಿದರು. ಪ್ರೊ. ವಿ.ಎಲ್. ಪಾಟೀಲ ಕಾರ್ಯಕ್ರಮ ನಿರ್ವಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.