ಆರ್ಥಿಕ ಯಶಸ್ಸು, ಆಧುನಿಕತೆಗೆ ವಿಜ್ಞಾನ ನೆರವು
ಬ್ಯಾಡಗಿ: ವಿವಿಧ ಕಾಲ ಘಟ್ಟಗಳಲ್ಲಿ ಸಮಾಜ ಬದಲಾವಣೆಯಾದರೂ ಆರ್ಥಿಕ ಯಶಸ್ಸು ಹಾಗೂ ಆಧುನಿಕ ಪರಿಕಲ್ಪನೆ ತಳಹದಿಯನ್ನು ಗಟ್ಟಿಗೊಳಿಸುವಲ್ಲಿ ವಿಜ್ಞಾನ ಸಹಕಾರಿಯಾಗಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಸನ್ನಕುಮಾರ ಅಭಿಪ್ರಾಯ ವ್ಯಕ್ತಪಡಿಸಿದರು.
ಸ್ಥಳೀಯ ಎಸ್ಜೆಜೆಎಂ ಸರ್ಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ತಾಲೂಕು ಮಟ್ಟದ ವಿಜ್ಞಾನ ಮತ್ತು ಗಣಿತ ವಸ್ತು ಪ್ರದರ್ಶನ ಉದ್ಘಾಟಿಸಿದ ಅವರು, 20ನೇ ಶತಮಾನದ ಮೊದಲಾರ್ಧದಲ್ಲಿ ಇಡೀ ವಿಶ್ವವೇ ಯದ್ಧಗಳಿಂದ ತತ್ತರಿಸಿತ್ತು. ಆಗ ಪ್ರಚುರಪಡಿಸಲಾದ ವಿಜ್ಞಾನದ ಹೊಸ ಅವಿಷ್ಕಾರಗಳು ವಿಶ್ವವನ್ನು ಮರುಸ್ಥಾಪಿಸುವಲ್ಲಿ ಸಹಕಾರಿಯಾದವು. ಮನುಷ್ಯನ ಜೀವನದ ಭಾಗವಾಗಿ ವಿಜ್ಞಾನ ಬೆಳೆಯುತ್ತಿದೆ. ನಾಗರಿಕತೆ ಬೆಳವಣಿಗೆಗೆ ಅದು ಗಣನೀಯ ಕೊಡುಗೆ ಸಲ್ಲಿಸಿದೆ ಎಂದರು.
ಭಾರತೀಯ ವಿಜ್ಞಾನಿಗಳು ಮಂಗಳನ ಅಂಗಳದಲ್ಲಿ ಕಾಲಿಡುತ್ತಿರುವ ಹೊತ್ತಲ್ಲಿ ಇಡೀ ವಿಶ್ವವೇ ಬೆರಗಾಗಿ ನಮ್ಮತ್ತ ನೋಡುವಂತಾಗಿದೆ. ನೂತನ ಅವಿಷ್ಕಾರ ಪರಿಚಯಿಸುವುದರಲ್ಲಿ ದೇಶದ ವಿಜ್ಞಾನಿಗಳು ಇಡುತ್ತಿರುವ ದೃಢ ಹೆಜ್ಜೆಗಳು ದೇಶವನ್ನು ಸ್ವಾವಲಂಬಿ ಮಾಡುವುದರಲ್ಲಿ ಸಂಶಯವಿಲ್ಲ ಎಂದರು.
ಬಸವಂತಪ್ಪ ಹುಲ್ಲತ್ತಿ ಮಾತನಾಡಿ, ವಿಜ್ಞಾನ ಸಂಗ್ರಹಿಸಿಟ್ಟ ನೀರಿನಂತಲ್ಲ. ಆಧುನಿಕ ಸಂಶೋಧನೆಗಳು ದೇಶದ ಪ್ರಗತಿಯ ದಿಕ್ಕನ್ನು ಬದಲಾಯಿಸಿವೆ. ಕೃಷಿ, ಕೈಗಾರಿಕೆ ಕ್ಷೇತ್ರಗಳು ತಂತ್ರಜ್ಞಾನ ಬಳಸಿ, ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿವೆ ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಜಿ. ಸುಮಾ ಮಾತನಾಡಿ, ಸಾಂದರ್ಭಿಕ ಸನ್ನಿವೇಶಗಳು ಮನುಷ್ಯನಲ್ಲಿ ವೈಜ್ಞಾನಿಕ ಚಿಂತನೆಗಳನ್ನು ಮೂಡಿಸುತ್ತವೆ. ಇದಕ್ಕೆ ನ್ಯೂಟನ್, ಐನ್ಸ್ಟೀನ್, ಕೂಡ ಹೊರತಾಗಿಲ್ಲ. ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಶಾಲಾ ಹಂತದಲ್ಲೇ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆಗಳು ಮೂಡುವಂತಾಗಬೇಕು ಎಂದರು.
ಉಪಪ್ರಾಚಾರ್ಯ ಎಂ.ಕೆ. ಬೋಡಕೆ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಣ ಸಂಯೋಜಕಿ ಗೀತಾ ಶೆಟ್ಟೆಪ್ಪನವರ, ನಾಗೇಶ ಗುತ್ತಲ, ಹಿರೇಮಠ, ಗಂಗಣ್ಣನವರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

