ಹಾವೇರಿ

ನಿರುದ್ಯೋಗಿ ಪದವೀಧರರ ನೇರ ನೇಮಕಾತಿ ಮಾಡಿಕೊಳ್ಳಿ: ಆಗ್ರಹ

Published On :

ಹಾನಗಲ್ಲ: ರಾಜ್ಯಾದ್ಯಂತ ಇರುವ ಬಿಇಡಿ, ಡಿಇಡಿ, ಬಿಪಿಎಡ್, ಸಿಪಿಎಡ್‌ನಲ್ಲಿ ತರಬೇತಿ ಹೊಂದಿ ಅವಕಾಶ ವಂಚಿತರಾಗಿರುವ ಹಾಗೂ ವಯೋವುತಿ ಮೀರುತ್ತಿರುವ ನಿರುದ್ಯೋಗಿ ಪದವೀಧರರನ್ನು ವಯೋವುತಿ ಅರ್ಹತೆ ಆಧಾರದಲ್ಲಿ ಶಿಕ್ಷಣ ಇಲಾಖೆಗೆ ನೇರ ನೇಮಕಾತಿ ಮಾಡಿಕೊಳ್ಳಬೇಕೆಂದು ಹಾನಗಲ್ಲ ತಾಲೂಕು ಕನ್ನಡ ಜಾಗೃತಿ ವೇದಿಕೆ ಸದಸ್ಯರು ತಹಸೀಲ್ದಾರ್ ಮೂಲಕ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.
ಶಿಕ್ಷಕರಾಗಿ ಸೇವೆ ಸಲ್ಲಿಸುವ ಉದ್ದೇಶದಿಂದ ತರಬೇತಿ ಹೊಂದಿದ್ದರೂ ಸಕಾಲದಲ್ಲಿ ಶಿಕ್ಷಕರ ನೇಮಕಾತಿ ನಡೆಯದೆ ರಾಜ್ಯದಲ್ಲಿ ಐದು ವರ್ಷಗಳ ಅವಧಿಯಲ್ಲಿ 4.50 ಲಕ್ಷ ಅಭ್ಯರ್ಥಿಗಳು ನಿರುದ್ಯೋಗಿಗಳಾಗಿದ್ದಾರೆ. ಇವರಲ್ಲಿ ಅರ್ಧದಷ್ಟು ಜನರು ವಯೋವುತಿ ಮೀರುತ್ತಿದ್ದಾರೆ. ಅವರ ಜೀವನ ಸ್ಥಿತಿ ದುಸ್ತರವಾಗಿದೆ. ಜತೆಗೆ, ತರಬೇತಿ ಹೊಂದಿದ ಮಾನವ ಸಂಪನ್ಮೂಲ ಪೋಲಾಗುತ್ತಿದೆ. ಇದನ್ನು ಗಮನಿಸಿ ಸರ್ಕಾರ ತಕ್ಷಣ ನೇಮಕಾತಿ ಮಾಡಿಕೊಳ್ಳಬೇಕೆಂದು ವಯೋವುತಿ ಮೀರುತ್ತಿರುವವರ ಪ್ರಶಿಕ್ಷಣಾರ್ಥಿಗಳ ಪರವಾಗಿ ಮನವಿ ಮಾಡಲಾಗಿದೆ.
ತಾಲೂಕಾಧ್ಯಕ್ಷ ಪರಶುರಾಮ ಡೂಗನವರ, ವಿ.ಜಿ. ಮೂಡಿಮಠ, ಎಂ.ಬಿ. ಈಳಿಗೇರ, ಸುರೇಶ ದೊಡ್ಡಕುರುಬರ, ನಜೀರ ಮಾಸನಕಟ್ಟಿ, ಅಶೋಕ ಕೊಪ್ಪದ, ತಾವರೆಪ್ಪ ಲಮಾಣಿ, ಅಣ್ಣಪ್ಪ ಲಮಾಣಿ, ಕುಮಾರ ಲಮಾಣಿ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.