ಜನನ-ಮರಣ ನೋಂದಣಿ ಕಡ್ಡಾಯ: ಶೆಟ್ಟರ
ಬ್ಯಾಡಗಿ: ಜನನ ಮರಣಗಳ ದಾಖಲೆ ಮಾಡಿಸುವುದರಿಂದ ದೇಶಕ್ಕೆ ಅವಶ್ಯವಿರುವ ಯೋಜನೆಗಳ ಅನುಷ್ಠಾನಕ್ಕೆ ಸಹಕಾರಿಯಾಗಲಿದೆ ಎಂದು ನ್ಯಾಯವಾದಿ ಎಸ್.ಎಸ್. ಶೆಟ್ಟರ ಅಭಿಪ್ರಾಯ ವ್ಯಕ್ತಪಡಿಸಿದರು.
ಎಸ್.ಪಿ.ಎಫ್. ದೊಡ್ಡಗೌಡ್ರ ಪ್ರೌಢಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ನ್ಯಾಯವಾದಿಗಳ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಕಾನೂನು ಸೇವಾ ದಿನಾಚರಣೆ ಅಂಗವಾಗಿ ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ಜನನ ದಾಖಲೆ ನೋಂದಣಿಯಾಗದೆ ಸರ್ಕಾರ ಅನುಷ್ಠಾನಗೊಳಿಸುವ ಪ್ರತಿಯೊಂದು ಯೋಜನೆ ಫಲಪ್ರದ ವಾಗುತ್ತಿಲ್ಲ, ಜನಸಂಖ್ಯೆಗೆ ಅನುಗುಣವಾಗಿ ಮೂಲ ಸೌಕರ್ಯಗಳು ಕಲ್ಪಿಸಬೇಕಾಗಿರುವುದರಿಂದ ಜನಿಸಿದ ಮಕ್ಕಳ ದಾಖಲೆಯನ್ನು ಕಡ್ಡಾಯವಾಗಿ ನೋಂದಣಿ ಮಾಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ 1991ರಿಂದ ಈಚೆಗೆ ಜನಿಸಿದ ವ್ಯಕ್ತಿಗಳ ಜನನ ದಾಖಲೆ ಹೊಂದುವುದು ಕಡ್ಡಾಯವಾಗಿದೆ ಎಂದರು.
ನ್ಯಾಯವಾದಿ ಎಂ.ಎಚ್. ಕಾಯಕದ ಮಾತನಾಡಿ, ಯುವಕರು ಪರವಾನಗಿ ಇಲ್ಲದೆ ವಾಹನಗಳನ್ನು ಚಾಲನೆ ಮಾಡುತ್ತಿದ್ದಾರೆ. ಇಂಥ ಪ್ರಕರಣಗಳಲ್ಲಿ ಸ್ಥಳದಲ್ಲೇ ರು. 500 ದಂಡ ವಿಧಿಸಬಹುದಾಗಿದೆ. ವಿದ್ಯಾರ್ಥಿ ಹಂತದಿಂದಲೇ ರಸ್ತೆ ಸುರಕ್ಷತೆ ನಿಯಮಗಳನ್ನು ಅರಿಯುವುದು ಸೂಕ್ತವೆಂದರು.
ಸಹಾಯಕ ಸರ್ಕಾರಿ ಅಭಿಯೋಜಕ ಎಂ.ಎಚ್. ಛಬ್ಬಿ ಕಾರ್ಯಕ್ರಮ ಉದ್ಘಾಟಿಸಿದರು. ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಂ.ಎಫ್. ಮುಳುಗುಂದ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿಗಳಾದ ಎಸ್.ಸಿ. ಶಿಡೇನೂರು, ವಿ.ಎಸ್. ಕಡಗಿ, ಮಂಜುನಾಥ ಹಂಜಗಿ, ಮುಖ್ಯಶಿಕ್ಷಕ ಎನ್.ಎಸ್. ಮರಿಗೌಡ್ರ, ಶಿಕ್ಷಕ ಸಿ.ಎಸ್. ಪಾಟೀಲ, ಎಸ್.ಆರ್. ಕೆಂಡದಮಠ, ಶಿವಗಂಗವ್ವ ದೊಡ್ಮನಿ, ಡಿ.ಎಸ್. ಲಮಾಣಿ ಉಪಸ್ಥಿತರಿದ್ದರು.
ದೀಪಾ ಬಡಿಗೇರ ಸ್ವಾಗತಿಸಿದರು. ಪಿ.ವಿ. ಗಂಗವ್ವನವರ ನಿರೂಪಿಸಿದರು. ಎಸ್.ಬಿ. ಮುದ್ದಪ್ಪಳವರ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

