ಮಹಿಕೋ ಕಂಪನಿಯಿಂದ ಪರಿಹಾರಕ್ಕೆ ಆಗ್ರಹಿಸಿ 18ರಂದು ರಾಣಿಬೆನ್ನೂರು ಬಂದ್
ರಾಣಿಬೆನ್ನೂರು: ಮಹಿಕೋ ಕಂಪನಿ ಹತ್ತಿ ಬೀಜಗಳನ್ನು ಬಿತ್ತಿ ಹಾನಿಗೊಳಗಾದ ರೈತರು ಸೂಕ್ತ ಪರಿಹಾರಕ್ಕೆ ಒತ್ತಾಯಿಸಿ ಹಲವಾರು ರೀತಿಯ ಪ್ರತಿಭಟನೆ ನಡೆಸಿದ್ದರೂ ಸ್ಪಂದಿಸದಿರುವ ಕಾರಣ, ಸರ್ಕಾರವೇ ಮಧ್ಯಸ್ಥಿಕೆ ವಹಿಸಬೇಕೆಂದು ಆಗ್ರಹಿಸಿ ನ. 18ರಂದು ರಾಣಿಬೆನ್ನೂರು ಬಂದ್‌ಗೆ ನಿರ್ಧರಿಸಿದ್ದೇವೆ ಎಂದು ರಾಜ್ಯ ರೈತ ಸಂಘದ ಮುಖಂಡ ಆರ್.ಎಫ್. ಪಾಟೀಲ ತಿಳಿಸಿದರು. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 20 ವರ್ಷಗಳಿಂದ ಬೀಜ ವಿತರಿಸುತ್ತಿರುವ ಮಹಿಕೋ ಕಂಪನಿ ಕಳೆದ ಮೂರು ವರ್ಷಗಳಿಂದ ತಾಲೂಕಿನ 2 ಸಾವಿರಕ್ಕೂ ಅಧಿಕ ರೈತರನ್ನು ವಂಚಿಸಿದೆ. ಭಾರಿ ಇಳುವರಿ ನೀಡುವ ಬೀಜಗಳೆಂದು ಲೇಬಲ್ ಹಚ್ಚಿ, ಮಾರುಕಟ್ಟೆಗೆ ಬಿಡುಗಡೆ ಮಾಡಿದ ನಿಕ್ಕಿ ಪ್ಲಸ್, ಕನಕ, ಯುವ, ರುದ್ರ, ಚಿರಂಜೀವಿ, ಟರ್ಬೊ ಮತ್ತು ಮಹದೇವ ತಳಿಯ ಹತ್ತಿ ಬೀಜಗಳು ರೈತರಿಗೆ ನಷ್ಟ ತಂದೊಡ್ಡಿವೆ. ಗಿಡಗಳು ಸೊಂಪಾಗಿ ಬೆಳೆದರೂ ಹೂವು-ಕಾಯಿ ಕಟ್ಟದೆ ರೈತರು ಕಂಗೆಟ್ಟಿದ್ದಾರೆ. ಪರಿಹಾರಕ್ಕಾಗಿ ಈಗ ಬಂದ್ ಕರೆ ಅನಿವಾರ್ಯವಾಗಿದೆ ಎಂದರು.
ಬಂದ್‌ಗೆ ಸಹಕರಿಸಿ: ನ. 18ರಂದು ರೈತರು ನಡೆಸಲು ಉದ್ದೇಶಿಸಿರುವ ರಾಣಿಬೆನ್ನೂರು ಬಂದ್‌ಗೆ ಎಲ್ಲ ರಾಜಕೀಯ ಪಕ್ಷಗಳ ಮುಖಂಡರು, ಸಂಘ ಸಂಸ್ಥೆಗಳು, ವ್ಯಾಪಾರಸ್ಥರು, ಆಟೋ ಅಟೋ ಚಾಲಕ-ಮಾಲೀಕರು ಹಾಗೂ ವಿದ್ಯಾರ್ಥಿಗಳು ಬೆಂಬಲಿಸಿ ಸಹಕರಿಸಬೇಕು. ರಾಣಿಬೆನ್ನೂರು ಬಂದ್ ಜಾಗೃತಿಗಾಗಿ ನ. 17 ರಂದು ನಗರದ ಕೆಇಬಿ ಗಣೇಶ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ಬೈಕ್ ರ್ಯಾಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ರೈತ ಸಂಘದ ಉಪಾಧ್ಯಕ್ಷ ಜಯಣ್ಣ ಮಾಗನೂರ ತಿಳಿಸಿದರು. ಮುಖಂಡರಾದ ಹರಿಹರಗೌಡ ಪಾಟೀಲ, ಶಿವಪ್ಪ ಜಾಲಣ್ಣನವರ, ಶಿವಾನಂದ ಲಿಂಗದಹಳ್ಳಿ ಇದ್ದರು.
--
21ಕ್ಕೆ ಚಿತ್ರಕಲಾ ಸ್ಪರ್ಧೆ
ಹಾವೇರಿ: ಮಕ್ಕಳ ದಿನಾಚರಣೆ ಅಂಗವಾಗಿ ನ. 21ರಂದು ಬೆಳಗ್ಗೆ 9.30ಕ್ಕೆ ಪುರಸಿದ್ದೇಶ್ವರ ದೇವಸ್ಥಾನದಲ್ಲಿ ಚಿತ್ರಕಲಾ ಶಿಕ್ಷಕರ ಸಂಘದ ವತಿಯಿಂದ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿದೆ. ಹಾಳೆ ಕೊಡಲಾಗುವುದು. ಉಳಿದ ಪರಿಕರ ವಿದ್ಯಾರ್ಥಿಗಳೇ ತರಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಬಿ. ಕೊಡ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

