ಹಾವೇರಿ

ಇಂಧನ ಮಿತವಾಗಿ ಬಳಸಿ: ಸಲಹೆ

Published On :

ಹಾನಗಲ್ಲ: ದಿನದಿಂದ ದಿನಕ್ಕೆ ಜಗತ್ತಿನಲ್ಲಿ ಇಂಧನದ ತೀವ್ರ ಕೊರತೆ ಉಂಟಾಗುತ್ತಿದ್ದು, ಲಭ್ಯವಿರುವ ಇಂಧನವನ್ನು ಹಿತಮಿತವಾಗಿ ಬಳಸಿ ಮುಂಬರುವ ದಿನಗಳಿಗಾಗಿ ಉಳಿಸಲು ಎಲ್ಲರೂ ಪ್ರಥಮ ಆದ್ಯತೆ ನೀಡಬೇಕೆಂದು ಜನತಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎ.ಎಸ್. ಬಳ್ಳಾರಿ ಸಲಹೆ ನೀಡಿದರು.
ಪಟ್ಟಣದಲ್ಲಿ ಬುಧವಾರ ಇಂಧನ ಉಳಿತಾಯ ಹಾಗೂ ಅಡಿಗೆ ಅನಿಲ ಬಳಕೆಯಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಕುರಿತು ಬಳಕೆದಾರರಿಗೆ ಅರಿವು ಮೂಡಿಸಲು ಹಿಂದುಸ್ಥಾನ ಪೆಟ್ರೋಲಿಯಂ ಕಾರ್ಪೋರೇಶನ್ ಸಂಸ್ಥೆ ನಡೆಸಿದ ಜಾಥಾ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇಂಧನ ಉಳಿತಾಯ ನಮ್ಮ ಸಾಮಾಜಿಕ ಬದ್ಧತೆಯಾಗಿದೆ. ಅಡುಗೆ ಅನಿಲ ಬಳಸುವಾಗ ಸುರಕ್ಷತಾ ಕ್ರಮ ಅಳವಡಿಸಿಕೊಂಡು ಕುಟುಂಬದ ಸುರಕ್ಷತೆಯನ್ನು ಕಾಯ್ದುಕೊಳ್ಳಬೇಕು ಎಂದರು.
ಎಚ್‌ಪಿಸಿಎಲ್ ಅಧಿಕಾರಿ ಮಹೇಶಬಾಬು ಮಾತನಾಡಿ, ಸಂಸ್ಥೆ ವಾರ್ಷಿಕ ರು. 2 ಸಾವಿರ ಕೋಟಿಗೂ ಅಧಿಕ ವಹಿವಾಟು ಹೊಂದಿದೆ. ಯುವಜನರು ಇಂಧನ ಉಳಿತಾಯ ಹಾಗೂ ಸುರಕ್ಷತಾ ವಿಧಾನಗಳ ಪ್ರಚಾರಕ್ಕೆ ಮುಂದಾಗಬೇಕು ಎಂದರು.
ಅಧಿಕಾರಿ ರಾಘವೇಂದ್ರ, ಪ್ರಾತ್ಯಕ್ಷಿಕೆ ಮೂಲಕ ಎಲ್‌ಪಿಜಿ ಅನಿಲ ತಯಾರಿಕೆ, ಸಿಲಿಂಡರ್‌ನ ಭಾಗಗಳು ಹಾಗೂ ಅದನ್ನು ಸ್ಟವ್‌ಗೆ ಜೋಡಿಸುವ ಸರಿಯಾದ ವಿಧಾನಗಳ ಕುರಿತು ತರಬೇತಿ ನೀಡಿದರು. ಗ್ಯಾಸ್‌ನ್ನು ಕೇವಲ ಗೃಹ ಬಳಕೆಗಾಗಿ ಉಪಯೋಗಿಸಬೇಕು. ವ್ಯಾಪಾರಿ ಉದ್ದೇಶಗಳಿಗೆ ಬಳಸುವುದು ಕಾನೂನುಬಾಹಿರ ಎಂದರು.
ರಸಪ್ರಶ್ನೆ ಹಾಗೂ ಚಿತ್ರಕಲೆ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಬೆಳಿಗ್ಗೆ ಕುಮಾರೇಶ್ವರ ಮಠದಲ್ಲಿ ಜನಜಾಗೃತಿ ಜಾಥಾಕ್ಕೆ ತಹಸೀಲ್ದಾರ್ ಡಾ೤ ನಾಗೇಂದ್ರ ಹೊನ್ನಳ್ಳಿ ಹಾಗೂ ಪಿಎಸ್‌ಐ ಮಹದೇವ ಯಲಿಗಾರ ಚಾಲನೆ ನೀಡಿದರು. ಮೂಕಾಂಬಿಕಾ ಗ್ಯಾಸ್ ಏಜನ್ಸಿಯ ಎಚ್.ಎಚ್. ರವಿಕುಮಾರ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಪ್ರಾಚಾರ್ಯೆ ಅನಿತಾ ಹೊಸಮನಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.