ಹಾವೇರಿ

ಮುದ್ದಿನಕೊಪ್ಪ ಕ್ರೀಡಾಂಗಣ ನಿರ್ಮಾಣಕ್ಕೆ ಚಾಲನೆ

Published On :

ಶಿಗ್ಗಾಂವಿ: ಕಾಂಗ್ರೆಸ್ ಸರ್ಕಾರದ ಜನಪರ ಕಾರ್ಯಗಳು ಜನರನ್ನು ತಲುಪುತ್ತಿವೆ. ಅಭಿವೃದ್ಧಿ ವಿಷಯದಲ್ಲಿ ಭಿನ್ನಾಭಿಪ್ರಾಯ ಬದಿಗಿಟ್ಟು, ಗ್ರಾಮಮಟ್ಟಕ್ಕೆ ಯೋಜನೆಗಳನ್ನು ಮುಟ್ಟಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಹೇಳಿದರು.
ತಾಲೂಕಿನ ಮುದ್ದಿನಕೊಪ್ಪ ಗ್ರಾಮದಲ್ಲಿ ಎನ್‌ಆರ್‌ಇಜಿ ಯೋಜನೆಯಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕ್ರೀಡಾಂಗಣ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಮಾನೆ, ನೆಹರು ಜನ್ಮದಿನವಾದ ಮಕ್ಕಳ ದಿನಾಚರಣೆಯಂದೇ ಕ್ರೀಡಾಂಗಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಖಾತ್ರಿ ಯೋಜನೆಯಲ್ಲಿ ಮೈದಾನ ಸಮತಟ್ಟು ಹಾಗೂ ಅಭಿವೃದ್ಧಿ ಮಾಡಲಾಗುವುದು ಎಂದರು.
ತಾಪಂ ಅಧ್ಯಕ್ಷೆ ಸುಜಾತಾ ಕಲಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಅಜ್ಜಂಪೀರ ಖಾದ್ರಿ, ಎಂ.ಎನ್. ವೆಂಕೋಜಿ, ಜಿಪಂ ಸದಸ್ಯೆ ಸರೋಜಾ ಆಡೀನ, ಮಾಜಿ ಸದಸ್ಯ ಗುಡ್ಡಪ್ಪ ಜಲದಿ, ಎನ್.ಸಿ. ಪಾಟೀಲ, ಪಾಲಾಕ್ಷಪ್ಪ ಹಾವಣಗಿ, ಪ್ರದೀಪಕುಮಾರ ಗಿರಡ್ಡಿ, ಶಿಗ್ಗಾಂವಿ ಜನತಾ ಬಜಾರ್ ಅಧ್ಯಕ್ಷ ಎಂ.ಪಿ. ಪಾಟೀಲ, ಶಂಕ್ರಮ್ಮ ಬಂಕಾಪುರ, ಮಂಜುನಾಥ ಓಲೇಕಾರ, ಲೋಕನಗೌಡ್ರ ಪಾಟೀಲ, ಎಲ್ಲಪ್ಪ ಹಾವೇರಿ, ಆನಂದ ದಾಸಪ್ಪನವರ, ತಾಪಂ ಇಒ ಎಸ್.ವಿ. ದೇವನಾಳ, ಅಭಿಯಂತ ಶಿವಕುಮಾರ, ಪಿಡಿಒ ಹೊಂಬಳ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.