ಡಿವೈಎಸ್ಪಿ ಡಾ ಗೋಪಾಲ ಬ್ಯಾಕೋಡಗೆ ಬೀಳ್ಕೊಡುಗೆ
ಬ್ಯಾಡಗಿ: ಹಿರಿಯ ಅಧಿಕಾರಿಗಳ ಮಾರ್ಗದರ್ಶನ, ಸಾರ್ವಜನಿಕರ ಸಹಕಾರ ಹಾಗೂ ಕಿರಿಯ ಅಧಿಕಾರಿಗಳ ಸಹಕಾರವಿದ್ದರೆ ಸೇವೆಯಲ್ಲಿ ಯಶಸ್ಸು ಸಾಧ್ಯವೆಂದು ಡಿವೈಎಸ್ಪಿ ಡಾ ಗೋಪಾಲ ಬ್ಯಾಕೋಡ ಅಭಿಪ್ರಾಯ ವ್ಯಕ್ತಪಡಿಸಿದರು. ಪ್ರಾಯೋಗಿಕ ತರಬೇತಿ ಬಳಿಕ ನಿರ್ಗಮಿಸಿದ ಅವರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಅಧಿಕಾರಿಗಳು ಒತ್ತಡದಲ್ಲಿ ಕೆಲಸ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಇದು ಅವರ ಸಾಮರ್ಥ್ಯ ಒರೆಗೆ ಹಚ್ಚುತ್ತದೆ. ಸೇವಾವಧಿಯಲ್ಲಿ ದಕ್ಷ, ಪ್ರಾಮಾಣಿಕರೆಂದು ಹೆಸರು ಗಳಿಸಲು ಸಾಕಷ್ಟು ಹೆಣಗಾಡಬೇಕಾಗಿದೆ. ಅಪರಾಧ ತಡೆಗೆ ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದರು. ಸಿಪಿಐ ಹಾಲಮೂರ್ತಿ ರಾವ್ ಮಾತನಾಡಿ, ಎಲ್ಲರೂ ಕಾನೂನು ಅರಿತರೆ ಸಮಸ್ಯೆಗಳು ಉದ್ಭವಿಸಲಾರವು ಎಂದರು. ಪಿಎಸ್ಐಗಳಾದ ಬಿ.ಸಿ. ಗಿರೀಶ ಎಚ್. ಮಹಾಂತೇಶ್ (ಅಪರಾಧ), ಎಎಸ್ಐಗಳಾದ ಎನ್.ಎಚ್. ಹೊಸೂರ, ಎನ್.ಎನ್. ಕಡೂರ, ಸಿಬ್ಬಂದಿ ರಾಜು ಗೊಂದಿ, ಪೂಜಾರ, ಎಸ್.ಎಂ. ಕರೇಕಲ್ಲ, ಬಸವರಾಜ ಅಂಜುಟಗಿ, ಗಡಿಯಪ್ಪಗೌಡ್ರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

