ಚರ್ಚಾಸ್ಪರ್ಧೆಗಳಿಂದ ಮಕ್ಕಳ ಬೌದ್ಧಿಕ ಶಕ್ತಿ ವೃದ್ಧಿ: ಹೊನ್ನಳ್ಳಿ
ಕನ್ನಡಪ್ರಭ ವಾರ್ತೆ, ಹಾನಗಲ್ಲ, ನ. 19
ಚರ್ಚಾ ಸ್ಪರ್ಧೆಗಳಿಂದ ವಿದ್ಯಾರ್ಥಿಗಳ ಬೌದ್ಧಿಕ ಶಕ್ತಿ ಇಮ್ಮಡಿಗೊಳ್ಳುತ್ತದೆ, ಮಾತನಾಡುವ ಕಲೆ ಹೆಚ್ಚುತ್ತದೆ, ವಿಷಯ ಸಂಗ್ರಹ ಬೆಳೆದಂತಾಗುತ್ತದೆ ಎಂದು ತಹಸೀಲ್ದಾರ್ ಡಾ ನಾಗೇಂದ್ರ ಹೊನ್ನಳ್ಳಿ ಅಭಿಪ್ರಾಯಪಟ್ಟರು.
ಶನಿವಾರ ಪಟ್ಟಣದ ಶಂಕರಮಠ ಆವರಣದಲ್ಲಿರುವ ನವೀನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಯುವ ಸ್ಫೂರ್ತಿ ಸಮಾಜ ಸಂಘ 'ನಮ್ಮ ಶಿಕ್ಷಣ ವ್ಯವಸ್ಥೆ ದೇಶದ ಬೆಳವಣಿಗೆಗೆ ಪೂರಕವೋ-ಮಾರಕವೋ?' ಕುರಿತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಚರ್ಚಾಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.
ಪಿಎಸ್ಐ ಮಹದೇವ ಯಲಿಗಾರ ಮಾತನಾಡಿ, ಶಿಕ್ಷಣ ವ್ಯವಸ್ಥೆಯಲ್ಲಿ ನೈತಿಕತೆಯ ಕೊರತೆಯಿದೆ. ವಿದ್ಯಾರ್ಥಿಗಳು ಒಳ್ಳೆಯ ಮೌಲ್ಯ ಮೈಗೂಡಿಸಿಕೊಳ್ಳಬೇಕು. ಆಗ ಅಪರಾಧಗಳ ಸಂಖ್ಯೆ ಕಡಿಮೆಯಾಗಲು ಸಾಧ್ಯ ಎಂದರು.
ಸಂಘದ ಅಧ್ಯಕ್ಷ ಅಣ್ಣಪ್ಪ ಚಿಕ್ಕಣ್ಣನವರ ಅಧ್ಯಕ್ಷತೆ ವಹಿಸಿದ್ದರು. ಎಚ್.ಎನ್. ಸವಣೂರ, ಪಿ.ಎಂ. ಕುಲಕರ್ಣಿ, ಅಣ್ಣಪ್ಪ ಚಿಕ್ಕಣ್ಣನವರ ನಿರ್ಣಾಯಕರಾಗಿದ್ದರು. ಎಂ.ಎಸ್. ಪೂಜಾರ, ಹಿರಿಯ ನ್ಯಾಯವಾದಿ ಕೆ.ಬಿ. ದೊಡ್ಡಮನಿ, ಸಂಘದ ಸದಸ್ಯರಾದ ಬಸವರಾಜ ಕೋಡದ, ಮಹೇಶ ಜೋಶಿ, ಮಂಜುನಾಥ ಪೂಜಾರ, ಚಂದ್ರು ಮಲಗುಂದ, ಅಪ್ಪಣ್ಣ ಚಿಕ್ಕಣ್ಣನವರ, ಚಿಕ್ಕಪ್ಪ ಚಿಕ್ಕಣ್ಣನವರ, ರಾಘವೇಂದ್ರ ಗೊರನವರ, ರಾಜು ಸುಗಂಧಿ ಅತಿಥಿಗಳಾಗಿದ್ದರು. ಸುರಭಿ ಕುಲಕರ್ಣಿ ಪ್ರಾರ್ಥಿಸಿದರು. ರವಿ ಪೂಜಾರ ಸ್ವಾಗತಿಸಿದರು. ವಿನಾಯಕ ಕುರುಬರ ನಿರೂಪಿಸಿದರು. ಮೈಲಾರೆಪ್ಪ ಚಿಕ್ಕಣ್ಣನವರ ವಂದಿಸಿದರು.
ಸ್ಪರ್ಧೆಯ ಬಾಲಕಿಯರ ವಿಭಾಗದಲ್ಲಿ ರೋಶನಿ ಪ್ರೌಢಶಾಲೆಯ ಚೈತ್ರಾ ಬಾರ್ಕಿ, ಜನತಾ ಬಾಲಿಕೆಯರ ಪ್ರೌಢಶಾಲೆಯ ಪ್ರೀತಿ ಕಾಟೇಕರ, ದಯಾನಂದ ವಿದ್ಯಾ ಭಾರತಿ ಪ್ರೌಢಶಾಲೆಯ ಕಾವ್ಯಾ ದಾಸರ, ಬಾಲಕರ ವಿಭಾಗದಲ್ಲಿ ದಯಾನಂದ ವಿದ್ಯಾಭಾರತಿ ಪ್ರೌಢಶಾಲೆಯ ಶ್ರೀನಿಧಿ ಕಲ್ಲಾಪುರ, ಎನ್ಸಿಜೆಸಿ ಪ್ರೌಢಶಾಲೆಯ ಗಣೇಶ ಬೇದ್ರೆ, ಕುಮಾರೇಶ್ವರ ಪ್ರೌಢಶಾಲೆಯ ಪ್ರಶಾಂತ ಬೆಳ್ಳುಂಡಗಿ ಬಹುಮಾನ ಪಡೆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

